ಪ್ರಸ್ತುತ ಭಾರತದಲ್ಲಿ (India) ಪೆಟ್ರೋಲ್‌ಗೆ (Petrol) 10% ಎಥೆನಾಲ್ (Ethanol) ಬೆರೆಸಲಾಗುತ್ತಿದೆ. ಇದನ್ನೂ ಮುಂದಿನ 2025ರ ವೇಳೆಗೆ ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ವಾಹನಗಳು ಹೊರ ಸೂಸುವ ಇಂಗಾಲದ ಪ್ರಮಾಣ ಕಡಿತಗೊಳಿಸಲು ಹಾಗೂ ಜೈವಿಕ ಇಂಧನಗಳ ಬಳಕೆಯನ್ನು ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಪ್ರಮುಖವಾಗಿ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ನಿರ್ಧಾರ ಕೈಗೊಂಡಿದೆ.
ಎಥೆನಾಲ್ ಮಿಶ್ರಣ ಎಂದರೇನು ಮತ್ತು ಅದು ಹೇಗೆ ಸಹಾಯ ಮಾಡುತ್ತದೆ?
Advertisement
ಎಥೆನಾಲ್ ಮಿಶ್ರಣವು ಈಥೈಲ್ ಆಲ್ಕೋಹಾಲ್‌ನ್ನು ಒಳಗೊಂಡಿರುವ ಇಂಧನವಾಗಿದೆ. ಇದನ್ನು ಕೃಷಿ ಉತ್ಪನ್ನಗಳಿಂದ ತಯಾರಿಸಿ ಬಳಿಕ ಪೆಟ್ರೋಲ್‌ಗೆ ಮಿಶ್ರಣ ಮಾಡಲಾಗುತ್ತದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ ಎರಡು ಅಂಶಗಳಲ್ಲಿ ಸಹಾಯ ಮಾಡುತ್ತದೆ. ಜೈವಿಕ ಇಂಧನವಾಗಿ ಪರಿಸರಕ್ಕೆ (Environment) ಆಗುವ ಹಾನಿಯ ಪ್ರಮಾಣವನ್ನು ತಗ್ಗಿಸುತ್ತದೆ. ಅಲ್ಲದೇ ಇದು ಕಚ್ಚಾ ತೈಲ ಆಮದನ್ನು ಕಡಿಮೆ ಮಾಡುತ್ತದೆ.
Advertisement
Advertisement
ಸರ್ಕಾರದ ಯೋಜನೆ ಏನು?
Advertisement
ಭಾರತದಾದ್ಯಂತ ಮುಂದಿನ ಎರಡು ವರ್ಷಗಳಲ್ಲಿ ಪ್ರಸ್ತುತ 10% ಎಥೆನಾಲ್ ಮಿಶ್ರಿತ ಪೆಟ್ರೋಲ್‌ನ್ನು 20%ಗೆ ಹೆಚ್ಚಿಸಲು ಯೋಜಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಈ ಕೆಲಸ ಎರಡು ಹಂತಗಳಲ್ಲಿ ನಡೆಯುತ್ತಿದೆ. ಮೊದಲ ಹಂತದಲ್ಲಿ 15 ನಗರಗಳನ್ನು ಒಳಗೊಳ್ಳುತ್ತದೆ. ಮುಂದಿನ ಎರಡು ವರ್ಷಗಳಲ್ಲಿ ಇದನ್ನು ದೇಶಾದ್ಯಂತ ವಿಸ್ತರಿಸಲಾಗುತ್ತದೆ. ಒಟ್ಟಾರೆ 2025ರ ವೇಳೆಗೆ ಸರ್ಕಾರ ತನ್ನ ಗುರಿಯನ್ನು ಸಾಧಿಸಲು ಕ್ರಮ ಕೈಗೊಂಡಿದೆ.
E20 ಪೆಟ್ರೋಲ್ ಪ್ರಸ್ತುತ ಲಭ್ಯವಿದೆಯೇ?
E20 (20% ಎಥೆನಾಲ್‌ನೊಂದಿಗೆ ಪೆಟ್ರೋಲ್ ಮಿಶ್ರಣ) ಆರಂಭದಲ್ಲಿ ದೇಶದ 84 ಪೆಟ್ರೋಲ್ ಪಂಪ್‌ಗಳಲ್ಲಿ ಮಾತ್ರ ಲಭ್ಯವಿತ್ತು. ಈಗ ಪ್ರಸ್ತುತ ಸುಮಾರು 1,000 ಪೆಟ್ರೋಲ್ ಪಂಪ್‌ಗಳಲ್ಲಿ ಲಭ್ಯವಿದೆ ಎಂದು ವರದಿಯಾಗಿದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ ಬೆಲೆ ಗ್ರಾಹಕರಿಗೆ ಇದೇ ದರದಲ್ಲಿ ಸಿಗುತ್ತಿದೆ ಎಂಬುದು ಗಮನಾರ್ಹ ವಿಚಾರ.
ಉದ್ಯಮ ಎದುರಿಸುತ್ತಿರುವ ಸವಾಲುಗಳೇನು?
ಪ್ರಸ್ತುತ ಉತ್ಪಾದಿಸಲಾಗುವ ಹೆಚ್ಚಿನ ಎಥೆನಾಲ್ ಅಕ್ಕಿ ಮತ್ತು ಕಬ್ಬನ್ನು ಬಳಸಿ ತಯಾರಿಸಲಾಗುತ್ತಿದೆ. ಈ ಎರಡೂ ಬೆಳೆಗಳಿಗೂ ಹೆಚ್ಚಿನ ನೀರಿನ ಅಗತ್ಯವಿದೆ. ಇತ್ತೀಚೆಗೆ ಅಕ್ಕಿ ಬೆಲೆಗಳು ಏರಿದಾಗ ಉದ್ಯಮಕ್ಕೆ ಅಕ್ಕಿ ಪೂರೈಕೆಯನ್ನು ನಿಲ್ಲಿಸಲಾಗಿತ್ತು. ಆಗ ಎಥೆನಾಲ್ ತಯಾರಕರು ತೊಂದರೆ ಎದುರಿಸಿದ್ದರು.
2025ರ ವೇಳೆಗೆ 20% ಮಿಶ್ರಣ ಮಾಡುವ ಗುರಿಯನ್ನು ಸಾಧಿಸಲು ಭಾರತಕ್ಕೆ 1,400 ಕೋಟಿ ಲೀಟರ್ ಎಥೆನಾಲ್ ಅಗತ್ಯವಿದೆ ಎಂದು ನೀತಿ ಆಯೋಗ ಅಂದಾಜಿಸಿದೆ. ಇದು ಸಕ್ಕರೆ ಉತ್ಪಾದನೆಗೆ ತೊಡಕಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಎಥೆನಾಲ್ ಮಿಶ್ರಣ ಹೆಚ್ಚಾದ ಬಳಿಕ ರೈತರು 40,600 ಕೋಟಿ ರೂ. ಆದಾಯ ಗಳಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಭಾಷಣವೊಂದರಲ್ಲಿ ಉಲ್ಲೇಖಿಸಿದ್ದರು.
ಎಥೆನಾಲ್ ಮಿಶ್ರಣದ ಪ್ರಯೋಜನಗಳೇನು?
ಪ್ರಸ್ತುತ ಭಾರತ ತನ್ನ ಅಗತ್ಯದ 85% ಇಂಧನವನ್ನು ವಿದೇಶಗಳಿಂದ ಆಮದು ಮಾಡುತ್ತದೆ. ಎಥೆನಾಲ್ ಮಿಶ್ರಣ ಯಶಸ್ವಿಯಾದರೆ ಅದು ಭಾರತದ ಪೆಟ್ರೋಲಿಯಂ ಮೇಲಿನ ವಿದೇಶಿ ಅವಲಂಬನೆಯನ್ನು ಕಡಿತಗೊಳಿಸುತ್ತದೆ. 2020-21ರಲ್ಲಿ ಭಾರತದ ಪೆಟ್ರೋಲಿಯಂ ಆಮದು 15.5 ಕೋಟಿ ಟನ್ ಆಗಿದ್ದು, ಅದಕ್ಕಾಗಿ ಭಾರತ 15800 ಕೋಟಿ ರೂ. ಮೊತ್ತವನ್ನು ಪಾವತಿಸಿದೆ. ಆದ್ದರಿಂದ ಈ ಎಥೆನಾಲ್ ಮಿಶ್ರಣ ಆರ್ಥಿಕವಾಗಿ ಉಳಿತಾಯ ಮಾಡಲು ಸಹಕರಿಸುತ್ತದೆ. ಅದಲ್ಲದೆ ಎಥೆನಾಲ್ ಒಂದು ಸಸ್ಯಜನ್ಯ ಇಂಧನವಾದ್ದರಿಂದ ಇದನ್ನು ನವೀಕರಿಸಬಹುದಾದ ಇಂಧನ ಎಂದು ಪರಿಗಣಿಸಲಾಗಿದೆ.
ಎಥೆನಾಲ್ ಮತ್ತು ಪರಿಸರ
ಧಾನ್ಯ ಅಥವಾ ಕೃಷಿ ಆಧಾರಿತ ಎಥೆನಾಲ್ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಗಮನಾರ್ಹವಾಗಿ 44% ರಿಂದ 52% ರಷ್ಟು ಕಡಿತಗೊಳಿಸುತ್ತದೆ. ಮುಂದೆ ತಂತ್ರಜ್ಞಾನಗಳ ಸಹಾಯದಿಂದ ಇದನ್ನು 70%ಗೆ ಇಳಿಸಲು ಪ್ರಯತ್ನಗಳು ನಡೆಯುತ್ತಿದೆ.
ಮೊದಲೆಲ್ಲ ಕೇವಲ ಕಬ್ಬನ್ನು ಬಳಸಿ ಎಥೆನಾಲ್ ಉತ್ಪಾದಿಸಲಾಗುತ್ತಿತ್ತು. ಆದರೆ ಈಗ ಎಥೆನಾಲ್ ಉತ್ಪಾದನೆಗೆ ಜೋಳ, ಭತ್ತ, ಹಣ್ಣು ಹಾಗೂ ತರಕಾರಿ ಉತ್ಪನ್ನಗಳನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. ಇದು ಭಾರತೀಯ ಕೃಷಿಕರಿಗೆ ಹೆಚ್ಚಿನ ಆದಾಯ ಗಳಿಸಲು ಸಹಕರಿಸುತ್ತದೆ.
Web Stories