ಬೆಂಗಳೂರು: ಚುನಾವಣೆಯಲ್ಲಿ ಸ್ಪರ್ಧಿಸಲು ಭಾರತದಲ್ಲಿ ಬಹಳಷ್ಟು ಫಾರ್ಮ್‍ಗಳನ್ನು ಅಭ್ಯರ್ಥಿಗಳು ಭರ್ತಿಮಾಡಬೇಕಾಗುತ್ತದೆ. ಅವುಗಳಲ್ಲಿ ಫಾರಂ-ಬಿ ಕೂಡ ಒಂದು. ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎನ್ನುವುದನ್ನು ಫಾರಂ-ಬಿ ಸಾಕ್ಷೀಕರಿಸುತ್ತದೆ. ಮೀಸಲಿಟ್ಟ ಪಕ್ಷದ ಚಿಹ್ನೆಯನ್ನು ಅಭ್ಯರ್ಥಿಗೆ ಕೊಡಲಾಗುತ್ತದೆ.
ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ ಮೇಲೆ ಅಭ್ಯರ್ಥಿಗಳು ನಾಮ ನಿರ್ದೇಶನ ಅರ್ಜಿಯ ಜೊತೆಗೆ ಇತರೆ ಬೆಂಬಲಿತ ದಾಖಲೆಗಳನ್ನು ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳಿಗೆ ಸಲ್ಲಿಕೆ ಮಾಡುತ್ತಾರೆ.
Advertisement
ಲೋಕಸಭಾ ಚುನಾವಣೆಗೆ ಫಾರಂ-2ಎ, ವಿಧಾನ ಸಭಾ ಚುನಾವಣೆಗಳಿಗೆ ಫಾರಂ-2ಬಿ, ರಾಜ್ಯಸಭಾ ಚುನಾವಣೆಗಳಿಗೆ ಫಾರಂ-2ಸಿ ನಾಮಪತ್ರದ ಅರ್ಜಿಗಳನ್ನು ಅಭ್ಯರ್ಥಿಗಳು ಸಲ್ಲಿಸಬೇಕಾಗುತ್ತದೆ. ನಾಮಪತ್ರ ಅರ್ಜಿಯ ಜೊತೆ ಫಾರಂ-26 ಅಫಿಡವಿಟ್ ಹಾಗೂ ಬಿ-ಫಾರಂ ಅನ್ನು ಬೆಂಬಲಿತ ದಾಖಲೆಗಳಾಗಿ ಅಭ್ಯರ್ಥಿಗಳು ಸಲ್ಲಿಸಬೇಕು.
Advertisement
ಫಾರಂ-26 ನಲ್ಲಿ ಏನಿರಲಿದೆ?
ಕ್ರಿಮಿನಲ್ ಪ್ರಕರಣಗಳಲ್ಲಿ ಈ ಹಿಂದೆ ಅಭ್ಯರ್ಥಿ ತೊಡಗಿಕೊಂಡಿದ್ದರಾ? ಪ್ರಕರಣದ ತನಿಖೆ ಅಥವಾ ವಿಚಾರಣೆ ಎಲ್ಲಿಯವರೆಗೆ ಬಂದಿದೆ? ಎಲ್ಲಾ ಕುಟುಂಬ ಸದಸ್ಯರ ಆದಾಯ ತೆರಿಗೆ, ಆಸ್ತಿಯ ಮೌಲ್ಯ, ಸಾಲದ ಮಾಹಿತಿ, ಅಭ್ಯರ್ಥಿ ಮತ್ತು ಗಂಡ/ಹೆಂಡತಿಯ ವೃತ್ತಿ ಅಥವಾ ಉದ್ಯೋಗ, ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ ಯನ್ನು ಅಫಿಡವಿಟ್ ನಲ್ಲಿ ನಮೂದಿಸಬೇಕು.
Advertisement
ಬಿ-ಫಾರಂನಲ್ಲಿ ಏನಿರಲಿದೆ?
ಪ್ರತಿಷ್ಠಿತ ಕ್ಷೇತ್ರದಿಂದ ಈ ಅಭ್ಯರ್ಥಿ ನಮ್ಮ ಪಕ್ಷದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವುದನ್ನು ಪಕ್ಷದ ಅಧಿಕೃತ ಸದಸ್ಯನ ಸಹಿಯೊಂದಿಗೆ ಅಭ್ಯರ್ಥಿಗೆ ಪಕ್ಷ ಕೊಡುವ ಫಾರ್ಮ್ ಅನ್ನು ಬಿ-ಫಾರಂ ಎಂದು ಕರೆಯಲಾಗುತ್ತದೆ. ನಾಮಪತ್ರದ ಅರ್ಜಿಯಲ್ಲಿ ಪ್ರತಿಷ್ಠಿತ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ ಎಂದು ನಮೂದಿಸಿದ್ದಲ್ಲಿ, ಅಭ್ಯರ್ಥಿಯು ಬಿ-ಫಾರಂ ಅನ್ನು ಸಲ್ಲಿಸಬೇಕಾಗುತ್ತದೆ.