ಸಾಮಾಜಿಕ ಜಾಲತಾಣಗಳಲ್ಲಿ (Social Media) ಈಗ ಕಾರ್ಟೂನ್ ಅಥವಾ ಆನಿಮೇಟೆಟ್ ಸಿನಿಮಾ ಪಾತ್ರಗಳಂತೆ ಇರುವ ಚಿತ್ರಗಳು ಟ್ರೆಂಡ್ ಸೃಷ್ಟಿಸಿದೆ. ನಟ, ನಟಿಯರು, ರಾಜಕಾರಣಿಗಳು ಈ ಟ್ರೆಂಡ್‌ಗೆ ಸೇರ್ಪಡೆಯಾಗಿದ್ದರಿಂದ ಈಗ ಸಾಮಾಜಿಕ ಜಾಲತಾಣದಲ್ಲಿ ಈ ಕಾರ್ಟೂನ್‌ಗಳಿಗೆ ಭಾರೀ ಜನಪ್ರಿಯತೆ ಬಂದಿದೆ.
View this post on Instagram
ಈ ಚಿತ್ರದ ಮೂಲ ಇರುವುದು ಜಪಾನ್‌ನಲ್ಲಿ. ಜಪಾನ್‌ನ (Japan) ಅತ್ಯಂತ ಜನಪ್ರಿಯ ಆನಿಮೇಷನ್ ಫಿಲ್ಮ್ ಸ್ಟುಡಿಯೋದ ಹೆಸರು ಘಿಬ್ಲಿ. 1985ರಲ್ಲಿ ಮಿಯಾಝಾಕಿ ಹಯಾವೋ, ಸುಜುಕಿ ಟೊಶಿವೊ ಹಾಗೂ ತಕಾಹತ ಇಸಾವೊ ಈ ಸ್ಟುಡಿಯೋವನ್ನು ಸ್ಥಾಪಿಸಿದ್ದರು. ಇದನ್ನೂ ಓದಿ: ಟೆಸ್ಲಾ ಭಾರತ ಎಂಟ್ರಿಯಿಂದ ಟಾಟಾ ಗ್ರೂಪ್‌ಗೆ ಲಾಭ!
ಭಾವನಾತ್ಮಕವಾಗಿ ಆಕರ್ಷಕವಾಗಿರುವ ಕಥೆ ಹೇಳುವಿಕೆಯೊಂದಿಗೆ ಕೈಯಿಂದ ಚಿತ್ರಿಸಿದ ಅನಿಮೇಷನ್‌ಗೆ ಘಿಬ್ಲಿ (Studio Ghibli) ಹೆಸರುವಾಸಿಯಾಗಿದೆ. 90ರ ದಶಕದಲ್ಲಿ ಮೈ ನೇಬರ್ ಟೊಟೊರೊ, ಕಿಕಿಸ್ ಡೆಲಿವರಿ ಸರ್ವೀಸ್, ಸೇರಿದಂತೆ ಹಲವು ಆನಿಮೇಟೆಡ್ ಸಿನಿಮಾ/ ಸೀರಿಯಲ್‌ಗಳು ಪ್ರಸಿದ್ಧಿ ಪಡೆದಿದ್ದವು.
we are launching a new thing today—images in chatgpt!
two things to say about it:
1. it’s an incredible technology/product. i remember seeing some of the first images come out of this model and having a hard time they were really made by AI. we think people will love it, and we…
— Sam Altman (@sama) March 25, 2025
ಈಗ ಫೇಮಸ್ ಹೇಗಾಯ್ತು?
ಓಪನ್ ಎಐನ (OpenAI) ಸಿಇಒ ಸ್ಯಾಮ್ ಆಲ್ಟ್‌ಮನ್ (Sam Altman) ಘಿಬ್ಲಿ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಚಾಟ್‌ಜಿಪಿಟಿ 4ನೇ ಆವೃತ್ತಿಯಲ್ಲಿ ಘಿಬ್ಲಿ ಚಿತ್ರಗಳನ್ನು ಸೃಷ್ಟಿಸುವ ಆಯ್ಕೆ ನೀಡುತ್ತಿರುವುದಾಗಿ ಹೇಳಿದರು. ಅಷ್ಟೇ ಅಲ್ಲದೇ ತಮ್ಮ ಪ್ರೊಫೈಲಿಗೆ ಘಿಬ್ಲಿ ಚಿತ್ರವನ್ನೇ ಅಪ್ಲೋಡ್ ಮಾಡಿದರು. ಹೇಳಿ ಕೇಳಿ ಈಗ ದೊಡ್ಡವರು ಖ್ಯಾತನಾಮರು ಏನೇ ಹೇಳಿದರೂ ಅದು ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸುತ್ತದೆ. ಆಲ್ಟ್‌ಮನ್ ಹೇಳಿದ್ದೇ ತಡ ನೆಟ್ಟಿಗರು ಈಗ ಘಿಬ್ಲಿ ಹಿಂದೆ ಬಿದ್ದಿದ್ದಾರೆ. ತಮ್ಮದೇ ಕಾರ್ಟೂನ್ ಚಿತ್ರಗಳನ್ನು ನೋಡಿ ಆನಂದಿಸುತ್ತಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ಆಪಲ್ ಉತ್ಪನ್ನ ತಯಾರಿಸಲು ಚೀನಾ, ವಿಯೆಟ್ನಾಂಗೆ ಎಲೆಕ್ಟ್ರಾನಿಕ್ ಭಾಗಗಳು ರಫ್ತು!
it’s super fun seeing people love images in chatgpt.
but our GPUs are melting.
we are going to temporarily introduce some rate limits while we work on making it more efficient. hopefully won’t be long!
chatgpt free tier will get 3 generations per day soon.
— Sam Altman (@sama) March 27, 2025
ಸಂಪತ್ತು ಎಷ್ಟಿದೆ?
ಮಿಯಾಝಾಕಿ ಹಯಾವೋ ಅವರು ಈ ಹಿಂದೆ ಎಐ ರಚಿಸಿದ ಅನಿಮೇಷನ್ ಕಲೆಗೆ ವಿರೋಧ ವ್ಯಕ್ತಪಡಿಸಿದ್ದರು. ಮಿಯಾಝಾಕಿಯವರ ಸಂಪತ್ತಿನ ಮೌಲ್ಯ 50 ಮಿಲಿಯನ್ ಡಾಲರ್ ಆಗಿದ್ದು, ಅನಿಮೇಶನ್ ಕ್ಷೇತ್ರದ ಶ್ರೀಮಂತ ಉದ್ಯಮಿಯಾಗಿದ್ದಾರೆ.
ಡಿವಿಡಿ, ಸರಕುಗಳ ಮಾರಾಟ ಮತ್ತು ಆನ್‌ಲೈನ್ ಸ್ಟ್ರೀಮಿಂಗ್ ಹಕ್ಕುಗಳು ಸೇರಿದಂತೆ ವಿವಿಧ ವಿಧಾನಗಳ ಮೂಲಕ ಸ್ಟುಡಿಯೋ ಘಿಬ್ಲಿ ಆದಾಯ ಗಳಿಸುತ್ತದೆ. ಅನೇಕ ಸ್ಟುಡಿಯೋ ಘಿಬ್ಲಿ ಚಲನಚಿತ್ರಗಳು ನೆಟ್‌ಫ್ಲಿಕ್ಸ್‌ನಂತಹ ವೇದಿಕೆಗಳಲ್ಲಿ ಲಭ್ಯವಿದೆ.
Even in the whimsical world of Ghibli, wheeling is no fairytale—it’s dangerous and punishable. For your safety and the safety of others, follow traffic rules. Ride responsibly! pic.twitter.com/SRI6kvRBeI
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) March 30, 2025
ಈಗ ಎಲ್ಲೆಲ್ಲಿ ರಚಿಸಬಹುದು?
OpenAI ಮಾತ್ರವಲ್ಲದೇ ಘಿಬ್ಲಿ ಚಿತ್ರಗಳನ್ನು ಎಕ್ಸ್‌ನ ಗ್ರಾಕ್, ಗೂಗಲ್ ಜೆಮಿನಿ ಸೇರಿದಂತೆ ಇತರೇ ಪ್ಲಾಟ್‌ಫಾರ್ಮ್‌ಗಳಲ್ಲೂ ರಚಿಸಬಹುದು.
ಸ್ನೇಹಿತರು, ಕುಟುಂಬದವರ ಫೋಟೋಗಳನ್ನು ಅಪ್ಲೋಡ್ ಮಾಡಿ ಎಐನಿಂದ (Artificial Intelligence) ಸೃಷ್ಟಿಸಿದ ಘಿಬ್ಲಿ ಚಿತ್ರಗಳನ್ನು ಪೋಸ್ಟ್ ಮಾಡ್ತಿದ್ದಾರೆ. ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ತಮ್ಮ ಜಾಹೀರಾತುಗಳಿಗೆ ಘಿಬ್ಲಿ ಚಿತ್ರಗಳನ್ನು ಬಳಸಿಕೊಂಡು ಪ್ರಚಾರ ಮಾಡಲು ಆರಂಭಿಸಿವೆ.