ಬೆಂಗಳೂರು: ಕಾರ್ ಬಾಂಬ್.. ವಿಬಿಐಇಡಿ.. ಇದು ಕಣಿವೆ ರಾಜ್ಯದ ಭದ್ರತಾ ಪಡೆಗೆ ಹೊಸ ತಲೆನೋವು ಹುಟ್ಟುಹಾಕಿದೆ. ಇಷ್ಟು ದಿನ ಬಂದೂಕು ಹಿಡಿದು ಅಟ್ಟಹಾಸ ಮಾಡುತ್ತಿದ್ದ ದುಷ್ಟ ಉಗ್ರರು ಈಗ ಈ ಹೊಸ ಮಾರ್ಗವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ದೊಡ್ಡ ಪ್ರಮಾಣದಲ್ಲಿ ರಕ್ತ ಹರಿಸಿದ್ದಾರೆ. ಗುರುವಾರ ಪುಲ್ವಾಮಾದಲ್ಲಿ ನಡೆದ ದಾಳಿಯೇ ಇದಕ್ಕೆ ಸಾಕ್ಷಿ. ಅಷ್ಟಕ್ಕೂ ಈ ಕಾರ್ ಬಾಂಬ್ ದಾಳಿ ಅಂದ್ರೇನು..? ಅದು ಹೇಗೆ ಸ್ಫೋಟಗೊಳ್ಳುತ್ತೆ ಎಂಬ ಮಾಹಿತಿ ಇಲ್ಲಿದೆ
ಕಾರ್ ಬಾಂಬ್: ವಾಹನಗಳ ಮುಖಾಂತರ ಐಇಡಿ ದಾಳಿ ಮಾಡುವುದನ್ನು ಕಾರ್ ಬಾಂಬ್ ಎಂದು ಕರೆಯಲಾಗುತ್ತದೆ. ಕಾರ್ ಪಾರ್ಕಿಂಗ್ ಮಾಡಿಯೂ ಸ್ಫೋಟಿಸಬಹುದು. ಸ್ಫೋಟಕಗಳನ್ನು ಕಾರಿನಲ್ಲಿ ತುಂಬಿಕೊಂಡು ಆತ್ಮಾಹುತಿ ದಾಳಿ ನಡೆಸಬಹುದು. ವಾಹನ ಮುಂಭಾಗ ಅಥವಾ ಹಿಂಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲೋಡ್ ಮಾಡಲಾಗಿರುತ್ತದೆ. ವಾಹನ ಡಿಕ್ಕಿಯಾದ ತಕ್ಷಣವೇ ಸ್ಫೋಟಕಗಳು ಸ್ಫೋಟಗೊಳ್ಳುವಂತ ವಿನ್ಯಾಸ ಮಾಡಲಾಗಿರುತ್ತದೆ. ಅಫ್ಘಾನಿಸ್ಥಾನ, ಇಸ್ರೇಲ್‍ನಲ್ಲಿ ಹೆಚ್ಚಿನ ಕಾರ್ ಬಾಂಬ್ ದಾಳಿ ನಡೆದಿದ್ದು, ಪರಿಣಿತರ ಕೈಯಲ್ಲಿ ಮಾತ್ರ ಕಾರ್ ಬಾಂಬ್ ತಯಾರಿಸಲು ಸಾಧ್ಯವಿದೆ. ಐಇಡಿ ತುಂಬಾ ಮಾರಕವಾಗಿದ್ದರಿಂದ ಕಾರ್ ಬಾಂಬ್ ಗೆ ಉಗ್ರರನ್ನು ಇದನ್ನೇ ಬಳಸಿಕೊಳ್ಳಲು ಮುಂದಾಗುತ್ತಾರೆ.
Advertisement
Advertisement
ಹೇಗೆ ಸ್ಫೋಟಗೊಳ್ಳುತ್ತೆ..? ಕಾರ್ ಬಾಂಬ್ ಸ್ಫೋಟ ಹೇಗೆ ನಡೆಯಬೇಕು ಎಂಬುದನ್ನು ಉಗ್ರರು ಪ್ಲಾನ್ ಮಾಡಿಕೊಂಡಿರುತ್ತಾರೆ. ಡ್ರೈವರ್ ಸೀಟ್‍ನ ಡೋರ್ ಓಪನ್ ಮಾಡುವಾಗ ಅಥವಾ ಎಕ್ಸಲೇಟರ್ ಹೆಚ್ಚಿಸಿದಾಗ ಅಥವಾ ಎಂಜಿನ್ ಆನ್, ಆಫ್ ಮಾಡುವಾಗ ಕಾರ್ ಬಾಂಬ್ ಸ್ಫೋಟಗೊಳ್ಳುವಂತೆ ವಿನ್ಯಾಸ ಮಾಡಲಾಗಿರುತ್ತದೆ. ಪಾರ್ಕಿಂಗ್ ದಾಳಿಯಲ್ಲಿ ಟೈಮರ್ ಸೆಟ್ ಮಾಡಲಾಗಿರುತ್ತದೆ.
Advertisement
https://www.youtube.com/watch?v=8F-W6B8PpsI
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv