ಕೊಲ್ಕತ್ತಾ: ಕೊರೊನಾ ಸೋಂಕಿನ ನಂತರ ಭಾರತದಲ್ಲಿ ಅದರ ರೂಪಾಂತರಿ ವೈರಸ್‍ಗಳು ಎಲ್ಲಕಡೆ ಹಬ್ಬುತ್ತಿದೆ. ಆದರೆ ಕೊರೊನಾದಷ್ಟು ಪರಿಣಾಮಕಾರಿಯಾಗಿಲ್ಲ ಎಂಬುದು ಖುಷಿ ವಿಚಾರವಾಗಿದೆ. ಆದರೆ ಕಳೆದ ಎರಡು ವಾರಗಳಲ್ಲಿ, ಪಶ್ಚಿಮ ಬಂಗಾಳದ ಹನ್ನೊಂದು ಜಿಲ್ಲೆಗಳ ಜನರಿಗೆ ಹೆಚ್ಚಾಗಿ ಕಪ್ಪು ಜ್ವರ ಅಥವಾ ‘ಕಾಲಾ-ಅಜರ್’ ಕಾಣಿಸಿಕೊಳ್ಳುತ್ತಿದೆ. ಈ ರೋಗದ ಲಕ್ಷಣಗಳ ಬಗ್ಗೆ ಆರೋಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ.
ರಾಜ್ಯದ ಉತ್ತರ ಭಾಗದಲ್ಲಿ 65 ಜನರಿಗೆ ಕಪ್ಪು ಜ್ವರ ಬಂದಿರುವ ಪ್ರಕರಣ ವರದಿಯಾಗಿದೆ. ಇದನ್ನು ‘ಕಾಲಾ-ಅಜರ್’ ಎಂದೂ ಕರೆಯುತ್ತಾರೆ ಎಂದು ಆರೋಗ್ಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜ್ಯ ಆಡಳಿತದ ಕಣ್ಗಾವಲು ಫಲಿತಾಂಶಗಳನ್ನು ಉಲ್ಲೇಖಿಸಿ ಇಲಾಖೆ ಹೇಳಿದೆ. ಇದನ್ನೂ ಓದಿ: ಕಠಿಣ ಪರಿಶ್ರಮದ ಮೂಲಕ ಕನ್ನಡಿಗರು ಉದ್ಯಮರಂಗದಲ್ಲಿ ಪ್ರಗತಿ ಸಾಧಿಸಬೇಕು: ಬೊಮ್ಮಾಯಿ
Advertisement
Advertisement
ಡಾರ್ಜಿಲಿಂಗ್, ಮಾಲ್ಡಾ, ಉತ್ತರ ದಿನಾಜ್‍ಪುರ್, ದಕ್ಷಿಣ್ ದಿನಾಜ್‍ಪುರ್ ಮತ್ತು ಕಾಲಿಂಪಾಂಗ್ ಜಿಲ್ಲೆಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗಿದೆ. ಬಿರ್ಭುಮ್, ಬಂಕುರಾ, ಪುರುಲಿಯಾ ಮತ್ತು ಮುರ್ಷಿದಾಬಾದ್ ಜಿಲ್ಲೆಗಳಲ್ಲಿ ಕಪ್ಪು ಜ್ವರದ ಕೆಲವು ಪ್ರಕರಣಗಳು ವರದಿಯಾಗಿವೆ. ಮುಖ್ಯವಾಗಿ ಲೀಶ್ಮೇನಿಯಾ ಡೊನೊವಾನಿ ಪರಾವಲಂಬಿಯಾಗಿದೆ. ಇದು ಸೋಂಕಿತ ನೊಣಗಳ ಕಡಿತದಿಂದ ಈ ರೋಗ ಹರಡುತ್ತದೆ. ಆದರೆ ರಾಜಧಾನಿ ಕೊಲ್ಕತ್ತಾದಲ್ಲಿ ಇದುವರೆಗೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ.
Advertisement
ಯಾವುದು ಈ ರೋಗ?
ಒಳಾಂಗಗಳ ಲೀಶ್ಮೇನಿಯಾಸಿಸ್(VL), ಇದನ್ನು ಕಾಲಾ-ಅಜರ್ ಎಂದೂ ಕರೆಯುತ್ತಾರೆ. ಇದಕ್ಕೆ ಚಿಕಿತ್ಸೆ ನೀಡದೆ ಬಿಟ್ಟರೆ ಮಾರಣಾಂತಿಕ ಕಾಯಿಲೆಯಾಗುವ ಸಂಭವಿರುತ್ತೆ. ವಿಶ್ವ ಆರೋಗ್ಯ ಸಂಸ್ಥೆ(WHO) ಪ್ರಕಾರ, ಇದು ಅನಿಯಮಿತ ಜ್ವರ, ತೂಕ ನಷ್ಟ, ಗುಲ್ಮ ಮತ್ತು ಯಕೃತ್ತಿನ ಹಿಗ್ಗುವಿಕೆ ಮತ್ತು ರಕ್ತಹೀನತೆ ಕಾಣಿಸಿಕೊಳ್ಳುತ್ತೆ ಎಂದು ರೋಗದ ಲಕ್ಷಣದ ಬಗ್ಗೆ ವಿವರಿಸಲಾಗಿದೆ. ಬ್ರೆಜಿಲ್, ಪೂರ್ವ ಆಫ್ರಿಕಾ ಮತ್ತು ಭಾರತದಲ್ಲಿ ಹೆಚ್ಚಿನ ಕಾಲಾ-ಅಜರ್ ಪ್ರಕರಣಗಳು ಕಾಣಿಸಿಕೊಂಡಿದೆ. ಇದನ್ನೂ ಓದಿ: ಅಹ್ಮದ್ ಪಟೇಲ್ ಸೂಚನೆ ಮೇರೆಗೆ ಮೋದಿ ವಿರುದ್ಧ ತೀಸ್ತಾ ಸೆಟಲ್ವಾಡ್ ಸಂಚು: ತನಿಖಾ ತಂಡ
Advertisement
ಕಾಲಾ-ಅಜರ್ ಮರಣದ ಸಂಭಾವ್ಯತೆ ಕಡಿಮೆ ಇದ್ದು ಪರಾವಲಂಬಿ ಸೋಂಕಿನಲ್ಲಿ ಒಂದಾಗಿದೆ. ಇದು ಸೋಂಕಿತ ಹೆಣ್ಣು ಫ್ಲೆಬೋಟೊಮೈನ್ ಸ್ಯಾಂಡ್‍ಫ್ಲೈಗಳ ಕಡಿತದಿಂದ ಹರಡುವ ಪ್ರೊಟೊಜೋವನ್ ಪರಾವಲಂಬಿಗಳಿಂದ ಉಂಟಾಗುತ್ತದೆ.
ಈ ರೋಗವು ಬಡ ಜನರ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಅಪೌಷ್ಟಿಕತೆ, ಸ್ಥಳಾಂತರ, ಕಳಪೆ ವಸತಿ, ದುರ್ಬಲ ರೋಗನಿರೋಧಕ ಶಕ್ತಿ ಮತ್ತು ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದ ಹೆಚ್ಚಿರುವ ಜನರಿಗೆ ಈ ರೋಗ ಕಾಣಿಸಿಕೊಳ್ಳುತ್ತೆ.