ಭಾರತೀಯರು IST (Indian Standard Time) ಮೂಲಕ ಸಮಯವನ್ನು ತಿಳಿದುಕೊಳ್ಳುತ್ತೇವೆ. ಇದೀಗ GPS ಉಪಗ್ರಹ ಆಧಾರದ ಮೇಲೆ ನಿಖರ ಹಾಗೂ ನಿರ್ದಿಷ್ಟ ಸಮಯವನ್ನು ತಿಳಿದುಕೊಳ್ಳಬಹುದು.
ಹೌದು, ರಾಷ್ಟ್ರೀಯ ಭೌತಿಕ ಪ್ರಯೋಗಾಲಯ (NPL) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಹಯೋಗದೊಂದಿಗೆ ಮಿಲಿಸೆಕೆಂಡ್‌ಗಳಿಂದ ಮೈಕ್ರೋಸೆಕೆಂಡ್‌ಗಳ ನಿಖರತೆಯಲ್ಲಿ ಸಮಯವನ್ನು ತಿಳಿಸುವ ಮೂಲಕ ಭಾರತೀಯ ಪ್ರಮಾಣಿತ ಸಮಯವನ್ನು ಪ್ರಸಾರ ಮಾಡುತ್ತದೆ. ಪ್ರಸಾರ ಮಾಡಲು ಪರಮಾಣು ಗಡಿಯಾರವನ್ನು ಸಿದ್ಧಪಡಿಸಿದೆ.
Advertisement
ಪರಮಾಣು ಗಡಿಯಾರ ಎಂದರೇನು?
ಪರಮಾಣುಗಳ ನಿರ್ದಿಷ್ಟ ಅನುರಣನ ಆವರ್ತನಗಳನ್ನು ಬಳಸಿಕೊಳ್ಳುವ ಮೂಲಕ ನಿಖರವಾದ ಸಮಯವನ್ನು ತೋರಿಸುತ್ತದೆ. ಪರಮಾಣು ಗಡಿಯಾರಗಳನ್ನು ಡಿಜಿಟಲ್ ವಾಚ್, ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿಯೂ GPS ಮೂಲಕ ನಿಖರವಾದ ಸಮಯವನ್ನು ತೋರಿಸುತ್ತದೆ.
Advertisement
ಈಗಾಗಲೇ ಫರಿದಾಬಾದ್‌ನಲ್ಲಿರುವ ರಾಷ್ಟ್ರೀಯ ಭೌತಿಕ ಪ್ರಯೋಗಾಲಯವು ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆಯಿಂದ (NavIC) ಸಮಯದ ದತ್ತಾಂಶವನ್ನು ಸ್ವೀಕರಿಸುತ್ತದೆ. ಇವುಗಳ ಮೂಲಕ ಅಹಮದಾಬಾದ್, ಬೆಂಗಳೂರು, ಭುವನೇಶ್ವರ ಮತ್ತು ಗುವಾಹಟಿಯ ರಾಷ್ಟ್ರೀಯ ಭೌತಿಕ ಪ್ರಯೋಗಾಲಯದಲ್ಲಿ ಪರಮಾಣು ಗಡಿಯಾರಗಳನ್ನು ಅಳವಡಿಸಿ. ದತ್ತಾಂಶ ರವಾನಿಸಲಾಗುವುದು.
Advertisement
ಪರಮಾಣು ಗಡಿಯಾರ ಪ್ರಯೋಜನಗಳು:
ಭಾರತದ ಸ್ವಂತ ನಿಖರ ಮತ್ತು ವಿಶ್ವಾಸಾರ್ಹ ಸಮಯ ವಿತರಣಾ ಜಾಲ ಇದಾಗಲಿದೆ.
ಇದು ವಿದೇಶಿ ವ್ಯವಸ್ಥೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಜೊತೆಗ ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸುತ್ತದೆ.
ಪವರ್ ಗ್ರಿಡ್‌ಗಳು, ದೂರಸಂಪರ್ಕ, ಬ್ಯಾಂಕಿಂಗ್, ರಕ್ಷಣೆ ಮತ್ತು ಸಾರಿಗೆಯಂತಹ ಕ್ಷೇತ್ರಗಳು ಪರಮಾಣು ಗಡಿಯಾರದಿಂದ ಪ್ರಯೋಜನ ಪಡೆಯುತ್ತವೆ.
Advertisement
ಉಪಗ್ರಹಗಳ ನ್ಯಾವಿಗೇಷನ್‌ಗಾಗಿ ಸಂಪೂರ್ಣ ಸ್ವದೇಶಿ ನಿರ್ಮಿತ ಪರಮಾಣು ಗಡಿಯಾರವನ್ನು ಇಸ್ರೋ ಅಭಿವೃದ್ಧಿ ಪಡಿಸಿದೆ. ಇದಕ್ಕೂ ಮುನ್ನ ಇಸ್ರೋ ಯುರೋಪಿಯನ್ ಏರೋಸ್ಪೇಸ್ ಮ್ಯಾನ್ಯುಫಾಕ್ಟರ್ ಆಸ್ಟ್ರಿಮ್ ಸಂಸ್ಥೆಯಿಂದ ಆಮದು ಮಾಡಿಕೊಳ್ಳುತ್ತಿತ್ತು. ಇದೀಗ ಸ್ವದೇಶಿ ನಿರ್ಮಿತ ಪರಮಾಣು ಗಡಿಯಾರವನ್ನು ಅಭಿವೃದ್ಧಿಪಡಿಸಿದೆ. ಪರಮಾಣು ಗಡಿಯಾರವು ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ್ದು, ಯುರೋಪಿಯನ್ ಏರೋಸ್ಪೇಸ್‌ನಿಂದ ಆಮದು ಮಾಡಿಕೊಳ್ಳುವ ಗರಿಯಾರದಷ್ಟೇ ನಿಖರವಾದ ಸಮಯವನ್ನು ನೀಡಲಿದೆ.
ಈ ಕುರಿತು ಸ್ಪೇಸ್ ಅಪ್ಲಿಕೇಶನ್ ಸೆಂಟರ್‌ನ ನಿರ್ದೇಶಕ ತಪನ್ ಮಿಶ್ರಾ ಮಾತನಾಡಿ, ಪ್ರಸ್ತುತ ಸ್ವದೇಶಿ ಉಪಕರಣವನ್ನು ವಿವಿಧ ಬಗೆಯ ಪರೀಕ್ಷೆಗಳಿಗೆ ಒಳಪಡಿಲಾಗುತ್ತಿದ್ದು, ಪರೀಕ್ಷೆಯ ಬಳಿಕ ಪ್ರಯೋಗಾರ್ಥವಾಗಿ ಬಳಸಲಾಗುತ್ತದೆ. ಇನ್ನೂ ಗಡಿಯಾರದ ಬಾಳಿಕೆ ಹಾಗೂ ನಿಖರತೆ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
ಪರಮಾಣು ಗಡಿಯಾರ ಅಭಿವೃದ್ಧಿಗೆ ಕಾರಣ:
ಉಪಗ್ರಹಗಳಿಗೆ ಪರಮಾಣು ಗಡಿಯಾರವನ್ನು ಅಳವಡಿಸಲಾಗುತ್ತದೆ. ಕೃತಕ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಾಗ ಅದರ ಜತೆಗೆ ಸಂವಹನ ಮಾಡುವ ಸಿಗ್ನಲ್ ಹೋಗಿ ಬರುವುದರ ಸಮಯವನ್ನು ಕರಾರುವಾಕ್ಕಾಗಿ ಅಳೆಯದೆ ಹೋದರೆ ಉಪಗ್ರಹಗಳು ಸರಿಯಾದ ಕಕ್ಷೆಗೆ ಸೇರುವುದು ಅಸಾಧ್ಯ
ಆದರೆ ಈ ಹಿಂದೆ ಉಡಾವಣೆ ಮಾಡಿದ್ದ ಕೆಲ ಉಪಗ್ರಹಗಳಿಗೆ ಜೋಡಿಸಲಾಗಿದ್ದ ಪರಮಾಣು ಗಡಿಯಾರಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಕಾರಣದಿಂದಾಗಿ ಸ್ವದೇಶಿ ನಿರ್ಮಿತ ಗಡಿಯಾರವನ್ನು ಉಪಗ್ರಹಗಳೊಂದಿಗೆ ಕಳುಹಿಸಲು ಇಸ್ರೋ ಚಿಂತಿಸಿ, ಪರಮಾಣು ಗಡಿಯಾರವನ್ನು ನಿರ್ಮಿಸಿದೆ.
ಗ್ರಾಹಕ ವ್ಯವಹಾರಗಳ ಇಲಾಖೆಯು ಕರಡು ನಿಯಮಗಳನ್ನು ಬಿಡುಗಡೆ ಮಾಡಿದ್ದು, ದೇಶದಾದ್ಯಂತ ಎಲ್ಲಾ ಕಾನೂನು, ಆಡಳಿತಾತ್ಮಕ, ವಾಣಿಜ್ಯ ಮತ್ತು ಅಧಿಕೃತ ದಾಖಲೆಗಳಿಗೆ ಭಾರತೀಯ ಸ್ಟ್ಯಾಂಡರ್ಡ್ ಟೈಮ್ (IST) ಏಕೈಕ ಸಮಯ ಉಲ್ಲೇಖವಾಗಿರಬೇಕು. ಜೊತೆಗೆ ಸರ್ಕಾರದ ಪೂರ್ವ ಅನುಮೋದನೆಯೊಂದಿಗೆ ಖಗೋಳಶಾಸ್ತ್ರ, ನ್ಯಾವಿಗೇಷನ್ ಮತ್ತು ವೈಜ್ಞಾನಿಕ ಸಂಶೋಧನೆಯಂತಹ ವಿಶೇಷ ಕ್ಷೇತ್ರಗಳಗೆ ಏಕೈಕ ಸಮಯದ ಉಲ್ಲೇಖಕ್ಕೆ ವಿನಾಯಿತಿಯನ್ನು ನೀಡಿದೆ. ಆದರೆ ನಿಯಮಗಳ ಉಲ್ಲಂಘನೆಯಾದಲ್ಲಿ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.