ನವದೆಹಲಿ: ಪಂಜಾಬಿ ಗಾಯಕ ಹಾಗೂ ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಅವರನ್ನು ಭಾನುವಾರ ಮಾನ್ಸಾ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಆದರೆ ಹತ್ಯೆಯಾದ ಒಂದು ದಿನದ ಬಳಿಕ ಮತ್ತೊಂದು ಸ್ಫೋಟಕ ಸತ್ಯ ಬಯಲಾಗಿದೆ.
Advertisement
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಮೂಸೆವಾಲಾ ಹತ್ಯೆಗೆ 3 ಎಎನ್-94 ರಷ್ಯಾದ ಸೈನ್ಯದಲ್ಲಿ ಬಳಸುವ ಮಾರಣಾಂತಿಕ ರೈಫಲ್ ಅನ್ನು ಬಳಸಲಾಗಿದೆ. ಕೇವಲ 2 ಸುತ್ತಿನಲ್ಲಿ 30 ಗುಂಡುಗಳನ್ನು ಹಾರಿಸಲಾಗಿದೆ. ಮುಖ್ಯವಾಗಿ ಪಂಜಾಬ್‌ನಲ್ಲಿ ನಡೆದ ಗ್ಯಾಂಗ್‌ವಾರ್‌ನಲ್ಲಿ ಇದೇ ಮೊದಲ ಬಾರಿಗೆ ಎಎನ್-94 ಭಯಾನಕ ರೈಫಲ್ ಬಳಕೆಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ: ಭದ್ರತೆ ವಾಪಸ್: ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಗುಂಡಿಕ್ಕಿ ಹತ್ಯೆ
Advertisement
Advertisement
ಹಂತಕರು ಮೂಸೆ ವಾಲಾ ಅವರನ್ನು ಹತ್ಯೆ ಮಾಡಲು ಮುಂದಾಗಿದ್ದರು. ಆಗ ಅವರ ಭದ್ರತೆಯಲ್ಲಿ ನಿಯೋಜಿಸಲಾದ ಎಕೆ-47 ರೈಫಲ್‌ಗಳೊಂದಿಗೆ ಶಸ್ತ್ರ ಸಜ್ಜಿತ ಕಮಾಂಡೋಗಳನ್ನು ಕಂಡು ಹಿಂದಿರುಗಿದ್ದರು. ನಂತರ ಕೆನಡಾದ ದರೋಡೆಕೋರ ಗೋಲ್ಡಿ ಬ್ರಾರ್‌ನಿಂದ ಎಎನ್-94 ರೈಫಲ್ ಅನ್ನು ತಂದಿದ್ದಾರೆ. ಅದರಿಂದಲೇ ಗುಂಡುಹಾರಿಸಿ ಹತ್ಯೆ ಮಾಡಲಾಗಿದೆ. ಇದನ್ನೂ ಓದಿ: ಜೂನ್‌ನಲ್ಲಿ ಸಿಧು ಮೂಸೆವಾಲಾ ಕೊನೆಯ ಹಾಡು ಬಿಡುಗಡೆಯಾಗುವ ನಿರೀಕ್ಷೆಯಿದೆ: ಸಲೀಮ್ ಮರ್ಚೆಂಟ್
Advertisement
AK-47 ಗಿಂತಲೂ ಭಯಾನಕ ರೈಫಲ್: AN-94 ರಷ್ಯಾದ ಆಕ್ರಮಣಕಾರಿ ರೈಫಲ್ ಆಗಿದೆ. ಎಎನ್ ಎಂಬ ಸಂಕ್ಷಿಪ್ತ ರೂಪವು `ಅವ್ಟೊಮತ್ ನಿಕೊನೊವಾ’ ಮಾಡೆಲ್ 1994 ಅನ್ನು ಸೂಚಿಸುತ್ತದೆ. ಎಎನ್-94 ಅನ್ನು ಅದರ ಮುಖ್ಯ ವಿನ್ಯಾಸಕ ಗೆನ್ನಡಿ ನಿಕೊನೊವ್ ಹೆಸರಿಡಲಾಗಿದೆ. ಅವರು ಈ ಹಿಂದೆ ನಿಕೊನೊವ್ ಮೆಷಿನ್ ಗನ್ ಅನ್ನು ವಿನ್ಯಾಸಗೊಳಿಸಿದ್ದರು. 1980 ರಲ್ಲಿ ಎಎನ್-94 ತಯಾರಿಸುವ ಕಾರ್ಯ ಪ್ರಾರಂಭವಾಗಿ 1994 ರಲ್ಲಿ ಪೂರ್ಣಗೊಂಡಿತು. ನಂತರ 1997ರಲ್ಲಿ ರಷ್ಯಾ ಸೈನ್ಯಕ್ಕೆ ಎಎನ್-47 ರೈಫಲ್ ಅನ್ನು ಸೇರಿಸಲಾಯಿತು. ಈಗಲೂ ರಷ್ಯಾ ಸೈನ್ಯ ಇದನ್ನು ಬಳಸುತ್ತಿದೆ. ಕೆಲವು ಶಸ್ತ್ರಾಸ್ತ್ರಗಳ ಅವಶ್ಯಕತೆಗಳನ್ನು ಪೂರೈಸಲು ಇದನ್ನು ಬಳಸಲಾಗುತ್ತಿದೆ ಎಂದು ಸುದ್ದಿ ಮಾಧ್ಯಮಗಳು ವರದಿಮಾಡಿವೆ.
ಎಎನ್-94 ರೈಫಲ್‌ನ ವಿಶೇಷತೆಗಳೇನು?
- ಎಎನ್-94 ಒಂದು ಸುತ್ತಿನ ಮೋಡ್‌ನಲ್ಲಿ ನಿಮಿಷಕ್ಕೆ 600 ಗುಂಡುಗಳು ಪೂರ್ಣ ಮೋಡ್‌ನಲ್ಲಿದ್ದರೆ 1,800 ಬುಲೆಟ್‌ಗಳನ್ನು ಹಾರಿಸಬಲ್ಲದು.
- ಎಕೆ-47 ರೈಫಲ್ 715 ಮೀಟರ್ ವೇಗದಲ್ಲಿ ಗುಂಡು ಹಾರಿದರೆ ಎಎನ್-94 900 ಮೀಟರ್ ವೇಗದಲ್ಲಿ ಅಂದರೆ ಪ್ರತಿ ಸೆಕೆಂಡಿಗೆ 3 ಸಾವಿರ ಅಡಿ ವೇಗದಲ್ಲಿ ಬುಲೆಟ್ ಹಾರುತ್ತದೆ.
- ಮಾರಣಾಂತಿಕ ರೈಫಲ್ ಆಗಿರುವ ಎಎನ್-94 30 ರಿಂದ 45 ಕಾರ್ಟ್ರಿಡ್ಜ್ ಮ್ಯಾಗಜೀನ್ ಸಾಮರ್ಥ್ಯ ಹೊಂದಿದೆ.
- ಎಎನ್-94 ಅಸಾಲ್ಟ್ ರೈಫಲ್ 3.85 ಕೆಜಿ ತೂಕವಿದ್ದು, 37.1 ಇಂಚಿನಷ್ಟು ಸ್ಟಾಕ್‌ಬಟ್ ಹಾಗೂ 28.7 ಇಂಚಿನಷ್ಟು ಅಗಲವಿರಲಿದೆ, 15.9 ಇಂಚು ಉದ್ದವಿದೆ.