– ಮೈತ್ರಿ ಇರುತ್ತೋ ಇಲ್ಲವೋ ಮುಂದೆ ನೋಡೋಣ
– ಮೈತ್ರಿ ಮಾಡಿಕೊಂಡಿರೋದು ದೀರ್ಘ ಅವಧಿಗೆ ಎಂದ ಮಾಜಿ ಸಿಎಂ
ಬೆಂಗಳೂರು: ಬಿಜೆಪಿ ಜೊತೆಗೆ ಮೈತ್ರಿ (BJP JDS Alliance) ಆಗಿರೋದು ಸುದೀರ್ಘ ಅವಧಿಗೆ. ಈ ಪ್ರಕರಣದಿಂದ ಬಿಜೆಪಿ ಅವರಿಗೆ ಮುಜುಗರ ಆಗುತ್ತದೆ ಅನ್ನೋದಾದ್ರೆ, ಅವರು ತೀರ್ಮಾನ ಮಾಡಲಿ. ನಮ್ಮದೇನು ವಿರೋಧ ಇಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.
ಪೆನ್‌ಡ್ರೈವ್ ಪ್ರಕರಣಕ್ಕೆ (Prajwal Pendrive Case) ಸಂಬಂಧಿಸಿದಂತೆ ಸುದೀರ್ಘ ಸುದ್ದಿಗೋಷ್ಠಿ ನಡೆಸಿದ ಅವರು, ಮೈತ್ರಿ ಮುಂದುವರಿಸುವ ಬಗ್ಗೆ ಆರ್.ಅಶೋಕ್ ಹೇಳಿಕೆ ಪ್ರಸ್ತಾಪಿಸಿ ಮಾತನಾಡಿದರು. ಇದನ್ನೂ ಓದಿ: ಅಮೆರಿಕದಿಂದ ಹುಬ್ಬಳ್ಳಿಗೆ ಬಂದು ಮೊದಲ ವೋಟ್ ಮಾಡಿದ ವಿದ್ಯಾರ್ಥಿನಿ
Advertisement
Advertisement
ರಾಷ್ಟ್ರೀಯ ಪಕ್ಷ ಅವರದ್ದು. ಅವರು ಏನ್ ತೀರ್ಮಾನ ಮಾಡ್ತಾರೋ ಮಾಡಲಿ. ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳೊಲ್ಲ. ಮೈತ್ರಿ ಇರೋತ್ತೋ ಇಲ್ಲವೋ ಮುಂದೆ ನೋಡೋಣ. ತನಿಖೆ ಆಗಿ ಸತ್ಯ ಹೊರಬರಲಿದೆ. ಮೈತ್ರಿ ಆಗಿರೋದು ದೀರ್ಘ ಅವಧಿಗೆ. ಈ ಪ್ರಕರಣದಿಂದ ಬಿಜೆಪಿ ಅವರಿಗೆ ಮುಜುಗರ ಆಗುತ್ತದೆ ಅನ್ನೋದಾದ್ರೆ, ಅವರು ತೀರ್ಮಾನ ಮಾಡಲಿ. ನಮ್ಮದೇನು ವಿರೋಧ ಇಲ್ಲ ಎಂದು ಹೇಳಿದ್ದಾರೆ.
Advertisement
ಬಿಜೆಪಿ ಜೊತೆಗೆ ಮೈತ್ರಿ ಆಗಿದ್ದೇ ತಡೆಯೋಕೆ ಆಗ್ತಿಲ್ಲ. ಅದಕ್ಕೆ ಹೀಗೆಲ್ಲ ಮಾತನಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ನಮ್ಮ ಹೆಸರನ್ನ ಪದೇ ಪದೇ ಬಳಕೆ ಮಾಡಿಕೊಳ್ಳುತ್ತಿದ್ದರು, ಅದಕ್ಕೆ ನಾನೇ ಸ್ಟೇ ತಂದಿದ್ದೆ. ನಮ್ಮ ಒತ್ತಾಯ ಪಾರದರ್ಶಕ ತನಿಖೆ ಆಗಬೇಕು ಎಂಬುದು ಅಷ್ಟೇ. ಈ ಸರ್ಕಾರ ಅಧಿಕಾರವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಅಂತ ರಾಜ್ಯಪಾಲರಿಗೂ ದೂರು ಕೊಡ್ತೀವಿ ಎಂದು ಅವರು ಹೇಳಿದ್ದಾರೆ.
Advertisement
ಈ ಎಸ್‌ಐಟಿ ತನಿಖೆಯಿಂದ (SIT Investigation) ಸಂತ್ರಸ್ತರಾದ ಮಹಿಳೆಯರಿಗೆ ನ್ಯಾಯ ಸಿಗುವುದಿಲ್ಲ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ(CBI) ನೀಡಬೇಕು. ಸಿಬಿಐಗೆ ನೀಡಲು ಸಾಧ್ಯವಾಗದೇ ಇದ್ದರೆ ನ್ಯಾಯಾಂಗ ತನಿಖೆ ನಡೆಸಬೇಕು. ಈ ತನಿಖೆ ಪೂರ್ಣಗೊಳ್ಳುವವರೆಗೂ ಡಿಕೆಶಿಯನ್ನು ಕ್ಯಾಬಿನೆಟ್‌ನಿಂದ ವಜಾಮಾಡಬೇಕು. ಈ ಪ್ರಕರಣವನ್ನು ನಾವು ಸುಲಭಕ್ಕೆ ಬಿಡುವುದಿಲ್ಲ. ತಪ್ಪು ಮಾಡಿರುವವರು ಶಿಕ್ಷೆ ಅನುಭವಿಸಲೇಬೇಕು ಎಂದು ಹೇಳಿದರು. ಇದನ್ನೂ ಓದಿ: ಚಿಕ್ಕೋಡಿಯಲ್ಲಿ ಭರ್ಜರಿ ಪ್ರತಿಕ್ರಿಯೆ, ಕಲಬುರಗಿಯಲ್ಲಿ ಕಡಿಮೆ ಮತದಾನ : ಎಲ್ಲಿ ಎಷ್ಟು ವೋಟಿಂಗ್ ನಡೆದಿದೆ?
ಡಿಕೆ ಶಿವಕುಮಾರ್ ಇತಿಹಾಸ ತೆಗೆದರೆ ಯಾವುದರಲ್ಲಿ ಎಕ್ಸ್‌ಪರ್ಟ್ ಅನ್ನೋದು ಎಲ್ಲರಿಗೆ ಗೊತ್ತಿದೆ. ರೇವಣ್ಣ ಸಂತ್ರಸ್ತೆಯನ್ನು ಅಪಹರಣ ಮಾಡಿಸಿದ್ದಾರಾ? ಸತ್ಯ ಎಲ್ಲವೂ ಹೊರಗೆ ಬರಲಿ. ಪೆನ್ ಡ್ರೈವ್ ರಿಲೀಸ್ ಮಾಡಿದವರ ಬಗ್ಗೆ ಮುಖ್ಯಮಂತ್ರಿ ಇನ್ನೂ ಏನು ಮಾತನಾಡುತ್ತಿಲ್ಲ ಯಾಕೆ? ಡಿಕೆಶಿವಕುಮಾರ್ ಯಾವ ತರಹ ಬಂದಿದ್ದೀರ? ನಿನ್ನೆಯ ಮೊದಲು ಹೇಳಿಕೆ, ಅಮೇಲೆ ವಿಡಿಯೋ, ಬಳಿಕ ಬೈಟ್ ಕೊಟ್ಟಿದ್ದೀರಿ. ಡಿಕೆಶಿ ನಿಮ್ಮ ಮುಖ ನೋಡಿದ್ರೆ ಗೊತ್ತಾಗುತ್ತದೆ. ಬಾಲ ಸುಟ್ಟ ಬೆಕ್ಕಿನ ರೀತಿ ಡಿಕೆ ಶಿವಕುಮಾರ್ ಮುಖ ಆಗಿತ್ತು ಎಂದು ವ್ಯಂಗ್ಯವಾಡಿದರು.