ಹಳೆ ಸಂಸತ್‌ ಭವನದ ಮುಂದಿನ ಕಥೆ ಏನು?

Public TV
3 Min Read
parliament monsoon session 2020 1599402841

ನವದೆಹಲಿ: ಸಂವಿಧಾನದ ಅಂಗೀಕಾರ ಸೇರಿದಂತೆ ಸ್ವತಂತ್ರ ಭಾರತದ ರಾಜಕೀಯ ವ್ಯವಸ್ಥೆಯ ಸಾಕ್ಷಿಪ್ರಜ್ಞೆಯಂತಿದ್ದ ಹಳೆ ಸಂಸತ್‌ ಭವನ (Old Parliament Building) ಈಗ ಇತಿಹಾಸದ ಪುಟ ಸೇರಿದೆ. ಸಂಸತ್‌ ಕಲಾಪ ಇಂದಿನಿಂದ (ಸೆ.19) ಹೊಸ ಸಂಸತ್‌ ಭವನಕ್ಕೆ ಸ್ಥಳಾಂತರಗೊಂಡಿದೆ.

ಪ್ರಧಾನಿ ಮೋದಿ (Narendra Modi) ಸೇರಿದಂತೆ ಎಲ್ಲಾ ಸಂಸದರು ಇದು ಮೆಗಾ ಫೋಟೋಶೂಟ್‌ ಮಾಡಿಸಿದರು. ಸುಂದರ ನೆನಪುಗಳೊಂದಿಗೆ ಹಳೆ ಸಂಸತ್‌ ಭವನಕ್ಕೆ ವಿದಾಯ ಹೇಳಿದರು. ಹಳೆ ಸಂಸತ್‌ ಭವನಕ್ಕೆ ‘ಸಂವಿಧಾನ ಸದನ’ ಅಂತ ಹೆಸರಿಡಬೇಕು ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ. ಈಗ ಎಲ್ಲಾ ಕಾರ್ಯ, ಕಲಾಪ ಹೊಸ ಸಂಸತ್‌ ಭವನಕ್ಕೆ ಶಿಫ್ಟ್‌ ಆಗಿದೆ. ಹಾಗಾದ್ರೆ ಹಳೆ ಸಂಸತ್‌ ಭವನ ಕಥೆ ಏನು? ಈ ಪ್ರಶ್ನೆ ಈಗ ಎಲ್ಲರಲ್ಲೂ ಮೂಡಿದೆ. ಇದನ್ನೂ ಓದಿ: ಹಳೆ ಸಂಸತ್‌ ಭವನದಲ್ಲಿ ಸಂಸದರ ಮೆಗಾ ಫೋಟೋಶೂಟ್‌ – ಸುಂದರ ನೆನಪುಗಳೊಂದಿಗೆ ವಿದಾಯ

parliament building

ಹಳೆ ಸಂಸತ್‌ ಭವನ ರಚನೆ ಆಗಿದ್ದು ಯಾವಾಗ?
ಇದು 1927 ರಲ್ಲಿ ಪೂರ್ಣಗೊಂಡಿತು. ಈಗ ಹಳೆ ಸಂಸತ್‌ ಭವನಕ್ಕೆ 96 ವರ್ಷ. ಈ ಕಟ್ಟಡವನ್ನು ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಎಡ್ವಿನ್ ಲುಟಿಯೆನ್ಸ್ ಮತ್ತು ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದರು. ಇದನ್ನು 1921-1927 ರ ನಡುವೆ ನಿರ್ಮಿಸಲಾಯಿತು. ಇದನ್ನು ಜನವರಿ 1927 ರಲ್ಲಿ ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್‌ನ ಸ್ಥಾನವಾಗಿ ತೆರೆಯಲಾಯಿತು. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿ ಹೊರಟ ಬಳಿಕ, ಇದನ್ನು ಭಾರತದ ಸಂವಿಧಾನ ಸಭೆಯು ಸ್ವಾಧೀನಪಡಿಸಿಕೊಂಡಿತು. 26 ಜನವರಿ 1950 ರಂದು ಭಾರತದ ಸಂವಿಧಾನವು ಜಾರಿಗೆ ಬಂದ ನಂತರ ಭಾರತವು ಗಣರಾಜ್ಯವಾಯಿತು.

ಕಟ್ಟಡವನ್ನು ಬೀಳಿಸಲ್ಲ
ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಸರ್ ಎಡ್ವಿನ್ ಲುಟಿಯೆನ್ಸ್ ಮತ್ತು ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದ ಸಾಂಪ್ರದಾಯಿಕ ಸಂಸತ್ತಿನ ಕಟ್ಟಡವು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾತ್ರವಲ್ಲ, ದೇಶದ ಉದಯಕ್ಕೂ ಸಾಕ್ಷಿಯಾಗಿದೆ. ಹೀಗಾಗಿ ಕಟ್ಟಡವನ್ನು ಕೆಡವಲಾಗುವುದಿಲ್ಲ. ಸಂಸತ್ತಿನ ಕಾರ್ಯಕ್ರಮಗಳಿಗೆ ಸ್ಥಳಗಳನ್ನು ಒದಗಿಸಲು ಅದನ್ನು “ರಿಟ್ರೊಫಿಟ್” ಮಾಡಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: Women’s Reservation Bill: ಹಾಲಿ ಮಹಿಳಾ ಸದಸ್ಯರ ಸಂಖ್ಯೆ 82, ಜಾರಿಯಾದ್ರೆ 181ಕ್ಕೆ ಏರಿಕೆ – ಜಾರಿ ಯಾವಾಗ?

new parliament building 2

ಈ ಐತಿಹಾಸಿಕ ರಚನೆಯನ್ನು ಸಂರಕ್ಷಿಸಲಾಗುವುದು. ಏಕೆಂದರೆ ಇದು ದೇಶದ ಪುರಾತತ್ವ ಆಸ್ತಿಯಾಗಿದೆ. ಸಂಸತ್‌ ರಚನೆಯನ್ನು ಸರಿಪಡಿಸಬೇಕು. ಪರ್ಯಾಯ ಬಳಕೆಗೆ ಲಭ್ಯವಾಗುವಂತೆ ಮಾಡಬೇಕು ಎಂದು 2021 ರಲ್ಲಿ ಆಗಿನ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದರು.

ರಾಷ್ಟ್ರೀಯ ವಸ್ತು ಸಂಗ್ರಹಾಲಯ
ರಾಷ್ಟ್ರೀಯ ವಸ್ತು ಸಂಗ್ರಹಾಗಾರದ ರೂಪದಲ್ಲಿ ಹಳೆಯ ಕಟ್ಟಡ ಕಾರ್ಯ ನಿರ್ವಹಿಸಲಿದೆ. ಭಾರತದ ಪುರಾತನ ಹಾಗೂ ಸೂಕ್ಷ್ಮ ವಸ್ತುಗಳನ್ನು ಇಲ್ಲಿ ಇರಿಸಲಾಗುತ್ತದೆ. ಈ ಕಟ್ಟಡದ ಕೆಲವು ಭಾಗವನ್ನು ಮ್ಯೂಸಿಯಂ ರೂಪದಲ್ಲಿ ಬದಲಿಸಲು ತೀರ್ಮಾನಿಸಲಾಗಿದೆ.

ಹೊಸ ಸಂಸತ್‌ ಭವನ ವಿಶೇಷತೆ ಏನು?
ಸೆ.19 ರಿಂದ ಹೊಸ ಸಂಸತ್‌ ಭವನದಲ್ಲಿ ವಿಶೇಷ ಅಧಿವೇಶನ ಆರಂಭವಾಗಿದೆ. 2023ರ ಮೇ ತಿಂಗಳಲ್ಲಿ ಇದು ಉದ್ಘಾಟನೆಯಾಯಿತು. ಈ ಭವನದಲ್ಲಿ 888 ಲೋಕಸಭಾ ಸದಸ್ಯರು ಹಾಗೂ 300 ರಾಜ್ಯಸಭಾ ಸದಸ್ಯರು ಕುಳಿತುಕೊಳ್ಳುವಷ್ಟು ಆಸನದ ವ್ಯವಸ್ಥೆ ಇದೆ. ಒಟ್ಟಿಗೆ 1,280 ಸದಸ್ಯರು ಕುಳಿತುಕೊಳ್ಳಬಹುದು. ಇದನ್ನೂ ಓದಿ: Women’s Reservation Bill: ಹಲವು ವರ್ಷಗಳಿಂದ ಚರ್ಚೆ ನಡೆದಿದೆ, ನಾವು ಇತಿಹಾಸ ನಿರ್ಮಿಸಿದ್ದೇವೆ: ಮೋದಿ

ಹೊಸ ಸಂಸತ್‌ ಭವನ ತ್ರಿಭುಜಾಕಾರದಲ್ಲಿದ್ದು, 4 ಅಂತಸ್ತಿನ ಕಟ್ಟಡವಾಗಿದೆ. ಇದು ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ. ವಿಐಪಿಗಳು, ಸಂಸದರು, ಭೇಟಿ ಮಾಡಲು ಬರುವವರಿಗೆ ಪ್ರತ್ಯೇಕ ಪ್ರವೇಶ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article