ತಮಿಳು ನಟ ವಿಶಾಲ್ ‘ಮದಗಜರಾಜ’ (Madha Gaja Raja) ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದ ಕಾರ್ಯಕ್ರಮದಲ್ಲಿ ನಟನನ್ನು ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ವಿಶಾಲ್ ಮಾತನಾಡುವಾಗ ತೊದಲಿದ್ದಾರೆ, ಕೈ ನಡುಗುತ್ತಿದೆ ಇದನ್ನು ವಿಶಾಲ್ (Vishal) ಸ್ಥಿತಿ ಕಂಡು ಫ್ಯಾನ್ಸ್ ಆಘಾತಗೊಂಡಿದ್ದಾರೆ. ನಟನ ಹೆಲ್ತ್ ಬಗ್ಗೆ ವೈದ್ಯರು ವರದಿ ನೀಡಿದ್ದಾರೆ. ಇದನ್ನೂ ಓದಿ:ಮಾ.1 ರಿಂದ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಸಿಎಂ
12 ವರ್ಷಗಳ ಹಿಂದೆ ರಿಲೀಸ್ ಆಗಬೇಕಿದ್ದ ಸಿನಿಮಾ ‘ಮದಗಜರಾಜ’ ಇದೀಗ ಜ.12ಕ್ಕೆ ರಿಲೀಸ್‌ಗೆ ಸಜ್ಜಾಗಿದೆ. ಇದರ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮೈಕ್ ಹಿಡಿದು ಮಾತನಾಡುವ ವೇಳೆ ಅವರ ಕೈ ನಡುಗ್ತಾ ಇತ್ತು. ಮೈಕ್ ಹಿಡಿಯಲು ಆಗದಷ್ಟೂ ಕೈ ನಡುಗಿದೆ. ಮಾತುಗಳು ತೊದಲುತ್ತಿದ್ದವು. ಪದಗಳ ಉಚ್ಛಾರಣೆ ಕೂಡ ಸರಿಯಾಗಿ ಆಗಿಲ್ಲ. ತೀವ್ರ ಅಸ್ವಸ್ಥರಾದಂತೆ ಕಂಡು ಬಂದ ವಿಶಾಲ್ ದೇಹ ಶೇಕ್ ಆಗ್ತಿದ್ದು, ಅವರ ಕಣ್ಣುಗಳಿಂದ ಕಣ್ಣೀರು ಉಮ್ಮಳಿಸಿತ್ತು. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಭಿಮಾನಿಗಳು ಆತಂಕಕ್ಕೆ ಒಳಗಾಗದೇ ಇರಲಿ ಎಂದು ವಿಶಾಲ್ ಕೂಡ ಆರೋಗ್ಯದ ಬಗ್ಗೆ ಕಾರ್ಯಕ್ರಮದಲ್ಲಿ ತಿಳಿಸಿದರು. ನನಗೆ ವೈರಲ್ ಫೀವರ್ ಬಂದಿದೆ. ಅದನ್ನು ಲೆಕ್ಕಿಸದೇ ಸಿನಿಮಾ ಪ್ರಚಾರಕ್ಕೆ ಬಂದಿರೋದಾಗಿ ತಿಳಿಸಿದರು.
ನಟನ ಆರೋಗ್ಯದ ಕುರಿತು ವೈದ್ಯರು ಹೆಲ್ತ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ವಿಶಾಲ್ ವೈರಲ್ ಫೀವರ್‌ನಿಂದ ಬಳಲುತ್ತಿದ್ದಾರೆ. ಅವರಿಗೆ ಬೆಸ್ಟ್ ರೆಸ್ಟ್ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ವರದಿಯಲ್ಲಿದೆ.
ಇನ್ನೂ ಈ ಸಿನಿಮಾದಲ್ಲಿ ವಿಶಾಲ್ ಜೊತೆ ವರಲಕ್ಷ್ಮಿ ಶರತ್‌ಕುಮಾರ್, ರಣವಿಕ್ರಮ ನಟಿ ಅಂಜಲಿ (Anjali), ಸೋನು ಸೂದ್ (Sonu Sood) ಸೇರಿದಂತೆ ಅನೇಕರು ‘ಮದಗಜರಾಜ’ ಚಿತ್ರದಲ್ಲಿ ನಟಿಸಿದ್ದಾರೆ.