ನೆನ್ನೆ ರಾತ್ರಿ 10.14ಕ್ಕೆ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಆತಂಕ ಹೆಚ್ಚಿಸಿದ್ದಾರೆ ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್. ಅವರು ಆ ರೀತಿಯಲ್ಲಿ ಯಾಕೆ ಟ್ವೀಟ್ ಮಾಡಿದರು? ಅವರ ಆರೋಗ್ಯದಲ್ಲಿ ಸಮಸ್ಯೆಯಾಗಿದೆಯಾ? ಅರ್ಥವೇ ಆಗದಂತೆ ಮಾಡಿರುವ ಟ್ವೀಟ್ ಹಿಂದಿರುವ ಉದ್ದೇಶವೇನು ಎನ್ನುವ ಪ್ರಶ್ನೆಯೊಂದಿಗೆ ಆತಂಕ ವ್ಯಕ್ತಪಡಿಸಿದ್ದಾರೆ ಅಮಿತಾಭ್ ಅಭಿಮಾನಿಗಳು. ಅಲ್ಲದೇ, ಏನಾಗಿದೆ ಅಂತ ಬೇಗ ಹೇಳಿ ದೇವರೆ? ಎಂದು ಮರುಟ್ವೀಟ್ ಮಾಡಿದ್ದಾರೆ ಸಾಕಷ್ಟು ಅಭಿಮಾನಿಗಳು. ಇದನ್ನೂ ಓದಿ : ಕಂಠೀರವ ಸ್ಟುಡಿಯೋ ಆವರಣದಲ್ಲಿ 14 ಅಡಿ ಎತ್ತರದ ಅಂಬರೀಶ್ ಪ್ರತಿಮೆ
ಆರೋಗ್ಯದ ವಿಷಯದಲ್ಲಿ ಅಮಿತಾಭ್ ಬಚ್ಚನ್ ಪದೇ ಪದೇ ಸುದ್ದಿಯಾಗುತ್ತಿದ್ದಾರೆ. ಒಂದೊಂದು ಬಾರಿ ಅವರೇ ತಮಗಾದ ಆರೋಗ್ಯ ಸಮಸ್ಯೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡರೆ, ಮತ್ತಷ್ಟು ಬಾರಿ ಸುಳ್ಳು ಸುದ್ದಿಗಳು ಹಬ್ಬಿವೆ. ಆದರೆ, ಈ ಬಾರಿ ಸ್ವತಃ ಅಮಿತಾಭ್ ಅವರೇ, “heart pumping .. concerned .. and the hope” ಎಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದ್ದಾರೆ. ಇದನ್ನೂ ಓದಿ : ಉಪಗ್ರಹವಾದ ಪುನೀತ್ ರಾಜ್ ಕುಮಾರ್: 100 ಸಾಹಸಿ ಮಕ್ಕಳ ಕೆಲಸವಿದು
T 4205 – heart pumping .. concerned .. and the hope ..????❤️
— Amitabh Bachchan (@SrBachchan) February 27, 2022
ಅವರು ಟ್ವೀಟ್ ಮಾಡುತ್ತಿದ್ದಂತೆಯೇ ಲಕ್ಷಾಂತರ ಅಭಿಮಾನಿಗಳು ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಮರು ಟ್ವೀಟ್ ಮಾಡಿದ್ದಾರೆ. ಆಗಿರುವ ಸಮಸ್ಯೆಯನ್ನು ಹೇಳಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಆದರೆ, ಅಮಿತಾಭ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಇನ್ನೂ ಅವರ ಅಭಿಮಾನಿಗಳು ಆತಂಕದಲ್ಲೇ ಇದ್ದಾರೆ.