2024ರ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಕರ್ನಾಟಕದಲ್ಲಿ 2 ಹಂತದಲ್ಲಿ ಮತದಾನ ನಡೆಯಲಿದೆ. ಇದೇ ಏಪ್ರಿಲ್ 26ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಮೇ 7ರಂದು 2ನೇ ಹಂತದ ಮತದಾನ ನಡೆಯಲಿದೆ. ದೇಶಾದ್ಯಂತ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಜೂನ್ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಈ ಹೊತ್ತಿನಲ್ಲಿ ಕಳೆದ ಮೂರು (2009, 2014, 2019) ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು ಮೆಲುಕುಹಾಕಬಹುದಾಗಿದೆ. ಕರ್ನಾಟಕದಲ್ಲಿ ಯಾವ ಕ್ಷೇತ್ರಗಳಲ್ಲಿ ಯರ‍್ಯಾರು ಗೆದ್ದಿದ್ದರು? ಯಾವ ಪಕ್ಷ ಹಿಡಿತ ಸಾಧಿಸಿತ್ತು ಎಂಬ ವಿವರ ಇಲ್ಲಿದೆ.
Advertisement
ಬಾಗಲಕೋಟೆ:
ಕಳೆದ ಮೂರು ಲೋಕಸಭಾ ಚುನಾವಣೆಯಲ್ಲೂ ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ತನ್ನ ಹಿಡಿತ ಸಾಧಿಸುತ್ತಾ ಬಂದಿದೆ. ಪಿ.ಸಿ ಗದ್ದಿಗೌಡರ್ 2009, 2014, 2019ರಲ್ಲಿ ಮೂರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. 2009ರಲ್ಲಿ 4,13,272 ಮತಗಳಿಂದ ಗೆಲುವು ಸಾಧಿಸಿದ್ದ ಗದ್ದಿಗೌಡರ್, 2014ರಲ್ಲಿ 5,71,548 ಮತಗಳಿಂದ, 2019ರಲ್ಲಿ 6,64,638 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.
Advertisement
Advertisement
ಬೆಳಗಾವಿ:
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಯಲ್ಲೂ ಬಿಜೆಪಿ ಹಿಡಿತ ಸಾಧಿಸಿದೆ. ಕಳೆದ ಮೂರು ಚುನಾವಣೆಯಲ್ಲಿ ಸುರೇಶ್ ಅಂಗಡಿ ಗೆಲುವು ಸಾಧಿಸಿದ್ದಾರೆ. 2009ರಲ್ಲಿ ಸುರೇಶ್ ಅಂಗಡಿ 3,84,324 ಮತಗಳು, 2014ರಲ್ಲಿ 5,54,417 ಮತಗಳು ಹಾಗೂ 2019ರಲ್ಲಿ 7,61,991 ಮತಗಳನ್ನು ಪಡೆದು ಹೆಲುವು ಸಾಧಿಸಿದ್ದಾರೆ.
Advertisement
ಬಳ್ಳಾರಿ:
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ 2009ರಲ್ಲಿ ಜೆ.ಶಾಂತಾ 4,02,213 ಮತಗಳಿಂದ ಗೆಲುವು ಸಾಧಿಸಿದ್ದರು. 2014ರಲ್ಲಿ ಶ್ರೀರಾಮುಲು 5,34,406 ಮತಗಳು ಹಾಗೂ 2019ರಲ್ಲಿ 6,16,338 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಈಮೂವರು ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು.
ಬೆಂಗಳೂರು ಕೇಂದ್ರ:
ಕಳೆದ 2009, 2014, 2019ರ ಚುನಾವಣೆಗಳಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಬಿಜೆಪಿ ಹಿಡಿತ ಸಾಧಿಸಿದೆ. ಬಿಜೆಪಿ ಅಭ್ಯರ್ಥಿಯಾಗಿ ಪಿ.ಸಿ ಮೋಹನ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. 2009ರಲ್ಲಿ 3,40,162 ಮತಗಳು, 2014ರಲ್ಲಿ 5,57,130 ಮತಗಳು ಹಾಗೂ 2019ರಲ್ಲಿ 6,02,853 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಬೆಂಗಳೂರು ಉತ್ತರ:
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 2019ರಲ್ಲಿ ಬಿಜೆಪಿಯಿಂದ ಡಿ.ಬಿ ಚಂದ್ರೇಗೌಡ 4,52,920 ಮತಗಳನ್ನ ಪಡೆದು ಗೆಲುವು ಸಾಧಿಸಿದ್ದರು. ನಂತರ ಬಿಜೆಪಿಯಿಂದಲೇ ಸ್ಪರ್ಧಿಸಿದ್ದ ಡಿ.ವಿ ಸದಾನಂದಗೌಡ ಅವರು 2014, 2019ರಲ್ಲಿ ಕ್ರಮವಾಗಿ 7,18,326 ಮತಗಳು ಮತ್ತು 8,24,500 ಮತಗಳನ್ನ ಪಡೆದು ಗೆಲುವು ಸಾಧಿಸಿದ್ದರು.
ಬೆಂಗಳೂರು ಗ್ರಾಮಾಂತರ:
2009ರ ಲೋಕಸಭಾ ಚುನಾವಣೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಜೆಡಿಎಸ್‌ನಿಂದ ಸ್ಪರ್ಧಿಸಿ 4,93,302 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಆ ನಂತರ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಿ.ಕೆ ಸುರೇಶ್ ಸತತ 2 ಬಾರಿ ಗೆಲುವು ಸಾಧಿಸಿದ್ದಾರೆ. 2014ರಲ್ಲಿ 6,52,723 ಮತಗಳನ್ನು ಪಡೆದು, 2019ರಲ್ಲಿ 8,78,258 ಮತಗಳನ್ನ ಪಡೆದು ಗೆಲುವು ಸಾಧಿಸಿದ್ದಾರೆ.
ಬೆಂಗಳೂರು ದಕ್ಷಿಣ:
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ 2009 (4,37,953 ಮತಗಳಿಂದ) ಮತ್ತು 2014ರಲ್ಲಿ (6,33,816 ಮತಗಳಿಂದ) ಬಿಜೆಪಿಯಿಂದ ಅನಂತ್‌ಕುಮಾರ್ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಿದ್ದ ತೇಜಸ್ವಿಸೂರ್ಯ ಅವರು 7,39,229 ಮತಗಳನ್ನ ಪಡೆದು ಗೆಲುವು ಸಾಧಿಸಿದ್ದರು.
ಬೀದರ್:
ಬೀದರ್ ಲೋಕಸಭಾ ಕ್ಷೇತ್ರದಿಂದ 2009ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎನ್.ಧರಂ ಸಿಂಗ್ 3,37,957 ಮತಗಳನ್ನ ಪಡೆದು ಗೆಲುವು ಸಾಧಿಸಿದ್ದರು. ಆ ನಂತರ ಬಿಜೆಪಿಯಿಂದ ಕಣಕ್ಕಿಳಿದ ಭಗವಂತ್ ಖೂಬಾ 2014ರಲ್ಲಿ 4,59,290 ಮತಗಳು ಮತ್ತು 2019ರಲ್ಲಿ 5,85,471 ಮತಗಳನ್ನು ಪಡೆದು ಗೆಲುವು ಸಾಧಿಸಿದರು.
ಚಾಮರಾಜನಗರ:
ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ 2009 ಮತ್ತು 2014ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆರ್. ಧ್ರುವನಾರಾಯಣ ಅವರು ಕ್ರಮವಾಗಿ 3,69,970 ಮತಗಳು ಮತ್ತು 5,67,782 ಮತಗಳನ್ನ ಪಡೆದು ಗೆಲುವು ಸಾಧಿಸಿದ್ದರು. 2019ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ.ಶ್ರೀನಿವಾಸ್ ಪ್ರಸಾದ್ 5,68,537 ಮತಗಳನ್ನು ಪಡೆದು ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
ಚಿಕ್ಕಬಳ್ಳಾಪುರ:
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಎರಡು ಬಾರಿ, ಬಿಜೆಪಿ ಒಮ್ಮೆ ಮಾತ್ರ ಗೆಲುವು ಸಾಧಿಸಿದೆ. 2009 ಮತ್ತು 2014ರಲ್ಲಿ ವೀರಪ್ಪ ಮೊಯ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಕ್ರಮವಾಗಿ 3,90,500 ಮತ್ತು 4,24,800 ಮತಗಳನ್ನ ಪಡೆದು ಗೆಲುವು ಸಾಧಿಸಿದ್ದರು. 2019ರಲ್ಲಿ ಬಿಜೆಪಿಯಿಂದ ಬಿ.ಎನ್ ಬಚ್ಚೇಗೌಡ 7,45,912 ಮತಗಳನ್ನು ಪಡೆದು ಗದ್ದುಗೆ ಏರಿದರು.
ಚಿಕ್ಕೋಡಿ:
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 2009ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರಮೇಶ್ ಕತ್ತಿ 4,38,081 ಮತಗಳಿಂದ ಗೆದ್ದರೆ, 2014ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಪ್ರಕಾಶ್ ಹುಕ್ಕೇರಿ 4,74,373 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ನಂತರ 2019ರ ಚುನಾವಣೆಯಲ್ಲಿ ಬಿಜೆಪಿಯ ಅಣ್ಣಾ ಸಾಹೇಬ್ ಜೊಲ್ಲೆ 6,45,017 ಮತಗಳನ್ನು ಪಡೆದು ಗೆದ್ದರು.
ಚಿತ್ರದುರ್ಗ:
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 2009ರಲ್ಲಿ ಬಿಜೆಪಿಯ ಜನಾರ್ದನ ಸ್ವಾಮಿ 3,70,920 ಮತಗಳನ್ನು ಪಡೆದು ಗೆದ್ದರೆ, 2014ರಲ್ಲಿ ಕಾಂಗ್ರೆಸ್‌ನ ಬಿ.ಎನ್ ಚಂದ್ರಪ್ಪ 4,67,511 ಮತಗಳನ್ನು ಪಡೆದು ಗೆದ್ದಿದ್ದರು. 2019ರಲ್ಲಿ ಎ. ನಾರಾಯಣಸ್ವಾಮಿ 6,26,195 ಮತಗಳನ್ನು ಪಡೆಯುವ ಮೂಲಕ ಗೆಲುವು ತನ್ನದಾಗಿಸಿಕೊಂಡರು.
ದಕ್ಷಿಣ ಕನ್ನಡ:
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಳಿನ್ ಕುಮಾರ್ ಕಟೀಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. 2008ರಲ್ಲಿ 4,99,385 ಮತಗಳು, 2014ರಲ್ಲಿ 6,42,739 ಮತಗಳು ಹಾಗೂ 2019ರಲ್ಲಿ 7,74,285 ಮತಗಳನ್ನು ಪಡೆಯುವ ಮೂಲಕ ಸತತ ಮೂರು ಬಾರಿ ಗೆಲುವು ಸಾಧಿಸಿದ್ದಾರೆ.
ದಾವಣಗೆರೆ:
ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಬಿಜೆಪಿಯ ಜಿ.ಎಂ.ಸಿದ್ದೇಶ್ವರ್ ಅವರೇ ಗೆಲುವು ಸಾಧಿಸಿದ್ದಾರೆ. 2009ರಲ್ಲಿ 4,23,447 ಮತಗಳು, 2014ರಲ್ಲಿ 5,18,894 ಮತಗಳು ಹಾಗೂ 2019ರಲ್ಲಿ 6,52,996 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಧಾರವಾಡ:
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಗಳಲ್ಲೂ ಬಿಜೆಪಿಯ ಹಾಲಿ ಸಂಸದ ಪ್ರಹ್ಲಾದ್ ಜೋಶಿ ಅವರು ಗೆಲುವು ಸಾಧಿಸಿದ್ದಾರೆ. 2009ರಲ್ಲಿ 6,46,786 ಮತಗಳು, 2014ರಲ್ಲಿ 5,45,395 ಮತಗಳು ಮತ್ತು 2019ರಲ್ಲಿ 6,84,837 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಹಾಸನ:
ಹಾಸನ ಕ್ಷೇತ್ರದಲ್ಲಿ ಜೆಡಿಎಸ್‌ನ ಹೆಚ್.ಡಿ ದೇವೇಗೌಡ ಅವರು 2009ರಲ್ಲಿ 4,96,429 ಮತಗಳು, 2014ರಲ್ಲಿ 5,09,841 ಮತಗಳನ್ನು ಪಡೆದು ಗೆದ್ದಿದ್ದರು. 2019ರ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ 6,76,606 ಮತಗಳನ್ನು ಪಡೆದು ಗೆಲುವು ಸಾಧಿಸಿದರು.
ಹಾವೇರಿ:
ಹಾವೇರಿ ಕ್ಷೇತ್ರದಿಂದ ಶಿವಕುಮಾರ್ ಉದಾಸಿ 2009ರಲ್ಲಿ 4,30,293 ಮತಗಳನ್ನು ಪಡೆದು ಗೆದ್ದಿದ್ದರೆ, 2014ರಲ್ಲಿ 5,66,790 ಮತಗಳು ಮತ್ತು 2019ರಲ್ಲಿ 6,83,660 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಕಲಬುರಗಿ:
2009ರಲ್ಲಿ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ 2009ರಲ್ಲಿ 3,45,241 ಮತಗಳು, 2014ರಲ್ಲಿ 5,07,193 ಮತಗಳನ್ನ ಪಡೆದು ಗೆಲುವು ಸಾಧಿಸಿದ್ದರು. 2019ರಲ್ಲಿ ಬಿಜೆಪಿಯ ಡಿ. ಉಮೇಶ್ ಜಾದವ್ 6,20,192 ಮತಗಳನ್ನ ಪಡೆದು ಜಯ ಗಳಿಸಿದರು.
ಕೋಲಾರ:
ಕೋಲಾರದಲ್ಲಿ ಕಾಂಗ್ರೆಸ್‌ನ ಕೆ.ಹೆಚ್ ಮುನಿಯಪ್ಪ 2009ರಲ್ಲಿ 3,44,771 ಮತಗಳು, 2014ರಲ್ಲಿ 4,18,926 ಮತಗಳನ್ನು ಪಡೆದು ಗೆಲುವು ಕಂಡಿದ್ದರು. 2019ರಲ್ಲಿ ಬಿಜೆಪಿಯ ಎಸ್. ಮುನಿಸ್ವಾಮಿ 7,09,165 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು.
ಕೊಪ್ಪಳ:
ಕಳೆದ ಮೂರು ಚುನಾವಣೆಯಲ್ಲೂ ಕೊಪ್ಪಳ ಲೋಕಸಭಾ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿದೆ. 2009ರಲ್ಲಿ ಶಿವರಾಮನಗೌಡ ಶಿವನಗೌಡ 2,91,639 ಮತಗಳನ್ನು ಪಡೆದು ಗೆದ್ದಿದ್ದರೆ, ಕರಡಿ ಸಂಗಣ್ಣ 2014ರಲ್ಲಿ 4,86,383 ಮತಗಳು ಹಾಗೂ 2019ರಲ್ಲಿ 5,86,783 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಮಂಡ್ಯ:
ಹೈವೋಲ್ಟೇಜ್ ಲೋಕಸಭಾ ಕ್ಷೇತ್ರದಲ್ಲಿ 2009ರಲ್ಲಿ ಜೆಡಿಎಸ್‌ನಿಂದ ಚಲುವರಾಯಸ್ವಾಮಿ 3,84,443 ಮತಗಳನ್ನು ಪಡೆದು ಗೆದ್ದಿದ್ದರು. 2014ರಲ್ಲಿ ಜೆಡಿಎಸ್‌ನ ಸಿಎಸ್ ಪುಟ್ಟರಾಜು 5,24,370 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. 2019ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅವರು 7,03,660 ಮತಗಳನ್ನು ಪಡೆಯುವ ಮೂಲಕ ಯಶಸ್ಸುಕಂಡಿದ್ದಾರೆ.
ಮೈಸೂರು:
2009ರ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿದ್ದ ಹೆಚ್. ವಿಶ್ವನಾಥ್ ಅವರು 3,54,810 ಮತಗಳನ್ನು ಪಡೆದು ಗೆದ್ದಿದ್ದರು. ನಂತರ ಬಿಜೆಪಿಯ ಪ್ರತಾಪ್ ಸಿಂಹ 2014ರಲ್ಲಿ 5,03,908 ಮತಗಳು ಹಾಗೂ 2019ರಲ್ಲಿ 6,88,973 ಮತಗಳನ್ನು ಪಡೆದು ಸತತ 2 ಬಾರಿ ಗೆಲುವು ಸಾಧಿಸಿದ್ದರು.
ರಾಯಚೂರು:
ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಯಲ್ಲೂ ಬಿಜೆಪಿಯೇ ಗೆಲುವು ಸಾಧಿಸಿದೆ. 2009ರಲ್ಲಿ ಸಣ್ಣ ಪಕೀರಪ್ಪ 3,16,450 ಮತಗಳು, 2014ರಲ್ಲಿ ಬಿ.ವಿ ನಾಯಕ 4,43,659 ಮತಗಳು ಹಾಗೂ 2019ರಲ್ಲಿ ಅಮರೇಶ್ವರ ನಾಯಕ ಅವರು 5,98,337 ಮತಗಳನ್ನು ಪಡೆದು ಗೆಲುವು ಸಾಧಿಸಿದರು.
ಶಿವಮೊಗ್ಗ:
ಶಿವಮೊಗ್ಗ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಯಲ್ಲೂ ಬಿಜೆಪಿಯದ್ದೇ ಪಾರಮ್ಯವಿದೆ. 2009ರಲ್ಲಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ರಾಘವೇಂದ್ರ 4,82,783 ಮತಗಳನ್ನು ಪಡೆದು ಗೆದ್ದರೆ, 2014ರಲ್ಲಿ ಯಡಿಯೂರಪ್ಪ ಅವರೇ ಕಣಕ್ಕಿಳಿದು 6,06,216 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. 2019ರಲ್ಲಿ ಮತ್ತೆ ಬಿ.ವೈ ರಾಘವೇಂದ್ರ 7,29,872 ಮತಗಳನ್ನು ಪಡೆಯುವ ಮೂಲಕ ಗೆದ್ದುಬೀಗಿದರು.
ತುಮಕೂರು:
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಗಳಲ್ಲಿ 2 ಬಾರಿ ಬಿಜೆಪಿ ಒಮ್ಮೆ ಕಾಂಗ್ರೆಸ್ ಗೆದ್ದಿದೆ. 2009ರಲ್ಲಿ ಬಿಜೆಪಿಯ ಜಿ.ಎಸ್ ಬಸವರಾಜು 3,31,064 ಮತಗಳಿಂದ ಗೆದ್ದಿದ್ದರು. 2014ರಲ್ಲಿ ಮುದ್ದ ಹನುಮೇಗೌಡ ಕಾಂಗ್ರೆಸ್‌ನಿಂದ ಗೆದ್ದರೆ, 2019ರಲ್ಲಿ ಜಿ.ಎಸ್ ಬಸವರಾಜು 5,96,127 ಮತಗಳೊಂದಿಗೆ ಗೆಲುವು ಸಾಧಿಸಿ, ಅಧಿಕಾರದ ಗದ್ದುಗೆ ಏರಿದರು.
ಉಡುಪಿ ಮತ್ತು ಚಿಕ್ಕಮಗಳೂರು:
ಈ ಕ್ಷೇತ್ರದಲ್ಲಿ ನಡೆದ ಕಳೆದ ಮೂರು ಚುನಾವಣೆಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. 2009ರಲ್ಲಿ ಡಿ.ವಿ ಸದಾನಂದಗೌಡ 4,01,441 ಮತಗಳನ್ನು ಪಡೆದು ಗೆದ್ದರೆ, ಶೋಭಾ ಕರಂದ್ಲಾಜೆ 2014 ರಲ್ಲಿ 5,81,168 ಮತಗಳು ಮತ್ತು 2019ರಲ್ಲಿ 7,18,916 ಮತಗಳನ್ನು ಪಡೆಯುವ ಮೂಲಕ ಸತತ 2ನೇ ಬಾರಿಗೆ ಗೆಲುವಿನ ನಗೆ ಬೀರಿದರು.
ಉತ್ತರ ಕನ್ನಡ:
ಬಿಜೆಪಿ ಭದ್ರಕೋಟೆಯಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಹೆಗಡೆ ಅವರೇ ಗೆಲುವು ಸಾಧಿಸಿದ್ದಾರೆ. 2009ರಲ್ಲಿ 3,39,300 ಮತಗಳು, 2014ರಲ್ಲಿ 5,46,939 ಮತಗಳು ಹಾಗೂ 2019 ರಲ್ಲಿ 7,86,042 ಮತಗಳನ್ನು ಪಡೆಯುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ವಿಜಯಪುರ:
ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ನಡೆದ ಕಳೆದ ಮೂರು ಚುನಾಣೆಗಳಲ್ಲೂ ಬಿಜೆಪಿಯ ರಮೇಶ್ ಜಿಗಜಿಣಗಿ ಗೆಲುವು ಸಾಧಿಸಿದ್ದಾನೆ. 2009ರಲ್ಲಿ 3,08,939 ಮತಗಳು, 2014ರಲ್ಲಿ 4,71,757 ಮತಗಳು ಹಾಗೂ 2019ರಲ್ಲಿ 6,35867 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.