ಅಹಮದಾಬಾದ್: 16ನೇ ಐಪಿಎಲ್ ಆವೃತ್ತಿ ಯಶಸ್ವಿಯಾಗಿ ಮುಕ್ತಾಯಗೊಂಡ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಪದಾರ್ಪಣೆ ಆವೃತ್ತಿಯಲ್ಲಿ (2022) ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಗುಜರಾತ್ ಟೈಟಾನ್ಸ್ ತಂಡ 2023ರಲ್ಲಿ ಚೆನ್ನೈ ವಿರುದ್ಧ ಸೋತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
Advertisement
2023ರ ಐಪಿಎಲ್ ಆವೃತ್ತಿಯನ್ನ ಸಮರ್ಪಕವಾಗಿ ಬಳಸಿಕೊಂಡ ಆಟಗಾರರು ಉದಯೋನ್ಮುಖ ಪ್ರತಿಭೆಗಳಾಗಿ ಬೆಳಕಿಗೆ ಬಂದರು. ಆಟಗಾರರ ಸ್ಫೋಟಕ ಪ್ರದರ್ಶನದಿಂದ ಅತಿಹೆಚ್ಚು ಬಾತಿ ತಂಡಗಳು ಇನ್ನಿಂಗ್ಸ್‌ವೊಂದರಲ್ಲಿ 200 ರನ್‌ಗಳ ಗಡಿ ದಾಟಿದ ದಾಖಲೆಯ ಆವೃತ್ತಿ ಅದಾಗಿತ್ತು. ಉತ್ತಮ ಪ್ರದರ್ಶನ ನೀಡಿದ ಆಟಗಾರರು ಲಕ್ಷ ಲಕ್ಷ ಬಾಚಿಕೊಂಡರು. ಈ ಐಪಿಎಲ್ ಬಳಿಕ ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ಜಿತೇಶ್ ಶರ್ಮಾ, ರಿಂಕು ಸಿಂಗ್, ಶಿವಂ ದುಬೆ, ಸರ್ಫರಾಜ್ ಖಾನ್ ಮೊದಲಾದ ಆಟಗಾರರು ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟರು.
Advertisement
Advertisement
ಅಲ್ಲದೇ 2023ರ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ 257 ರನ್ ಗಳಿಸಿ ಅತಿಹೆಚ್ಚು ರನ್ ಗಳಿಸಿ ಐಪಿಎಲ್ ಇತಿಹಾಸದಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಹೆಚ್ಚು ರನ್ ಗಳಿಸಿದ 2ನೇ ತಂಡವಾಯಿತು. ಈ ಸೀಸನ್‌ನಲ್ಲಿ ಆರ್‌ಸಿಬಿ ವಿರುದ್ಧ ರಾಜಸ್ಥಾನ್ ರಾಯಲ್ಸ್ 59 ರನ್‌ಗಳಿಗೆ ಆಲೌಟ್ ಆಗಿದ್ದು, ಅತ್ಯಂತ ಕಳಪೆ ಪ್ರದರ್ಶನ ನೀಡಿದ ಪಂದ್ಯವಾಗಿತ್ತು.
Advertisement
2024ರಲ್ಲಿ 10 ತಂಡಗಳೂ ತಂಡದ ಆಟಗಾರರಲ್ಲಿ ಬದಲಾವಣೆ ಮಾಡಿಕೊಂಡಿವೆ. ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ನಂತಹ ಬಲಿಷ್ಠ ತಂಡಗಳ ನಾಯಕತ್ವದಲ್ಲೂ ಬದಲಾವಣೆಯಾಗಿದೆ. ಹಾಗಾಗಿ 2024ರ ಐಪಿಎಲ್ ರೋಚಕತೆಯಿಂದ ಕೂಡಿರಲಿದೆ.
2023ರ ಐಪಿಎಲ್ ಪ್ರಶಸ್ತಿ ಮತ್ತು ನಗದು ಬಹುಮಾನ ಪಡೆದವರ ಪಟ್ಟಿ:
ಚಾಂಪಿಯನ್ಸ್: ಸಿಎಸ್‌ಕೆ – 20 ಕೋಟಿ ರೂ.
ರನ್ನರ್ ಅಪ್: ಗುಜರಾತ್ ಟೈಟಾನ್ಸ್ – 12.5 ಕೋಟಿ ರೂ.
ಆರೆಂಜ್ ಕ್ಯಾಪ್: ಶುಭಮನ್ ಗಿಲ್- 890 ರನ್ -10 ಲಕ್ಷ ರೂ.
ಪರ್ಪಲ್ ಕ್ಯಾಪ್: ಮೊಹಮ್ಮದ್ ಶಮಿ- 28 ವಿಕೆಟ್- 10 ಲಕ್ಷ ರೂ.
ಸೀಸನ್‌ನ ಉದಯೋನ್ಮುಖ ಆಟಗಾರ: ಯಶಸ್ವಿ ಜೈಸ್ವಾಲ್ – ರಾಜಸ್ಥಾನ್ ರಾಯಲ್ಸ್ – 10 ಲಕ್ಷ ರೂ.
ಸೂಪರ್ ಸ್ಟ್ರೈಕರ್ – ಗ್ಲೆನ್ ಮ್ಯಾಕ್ಸ್‌ವೆಲ್: ಆರ್‌ಸಿಬಿ, ಸ್ಟ್ರೈಕ್‌ರೇಟ್ -183.48 – 10 ಲಕ್ಷ ರೂ.
ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್: ಶುಭಮನ್ ಗಿಲ್ – 10 ಲಕ್ಷ ರೂ.
ಗೇಮ್ ಚೇಂಜರ್- ಶುಭಮನ್ ಗಿಲ್- 10 ಲಕ್ಷ ರೂ.
ಅತಿ ಹೆಚ್ಚು ಬೌಂಡರಿ: ಶುಭಮನ್ ಗಿಲ್ – 85 – 10 ಲಕ್ಷ ರೂ.
ಅತಿ ದೊಡ್ಡ ಸಿಕ್ಸರ್ – ಫಾಫ್ ಡು ಪ್ಲೆಸಿಸ್: ಆರ್‌ಸಿಬಿ – 115 ಮೀಟರ್ – 10 ಲಕ್ಷ ರೂ.
ಸೀಸನ್‌ನ ಅದ್ಭುತ ಕ್ಯಾಚ್: ರಶೀದ್ ಖಾನ್ – ಗುಜರಾತ್ ಟೈಟಾನ್ಸ್- 10 ಲಕ್ಷ ರೂ.
ಮನರಂಜಿಸಿದ ತಂಡ – ಡೆಲ್ಲಿ ಕ್ಯಾಪಿಟಲ್ಸ್
2023ರ ಫೈನಲ್ ಪಂದ್ಯದ ಪ್ರಶಸ್ತಿಗಳ ವಿವರ:
ಸೂಪರ್ ಸ್ಟ್ರೈಕರ್: ಅಜಿಂಕ್ಯ ರಹಾನೆ- 1 ಲಕ್ಷ ರೂ.
ಗೇಮ್ ಚೇಂಜರ್: ಸಾಯಿ ಸುದರ್ಶನ್- 1 ಲಕ್ಷ ರೂ.
ವ್ಯಾಲ್ಯುಯೆಬಲ್ ಪ್ಲೇಯರ್: ಸಾಯಿ ಸುದರ್ಶನ್- 1 ಲಕ್ಷ ರೂ.
ಅತಿ ದೊಡ್ಡ ಸಿಕ್ಸರ್: ಸಾಯಿ ಸುದರ್ಶನ್- 1 ಲಕ್ಷ ರೂ.
ಅದ್ಭುತ ಕ್ಯಾಚ್: ಎಂ.ಎಸ್ ಧೋನಿ- 1 ಲಕ್ಷ ರೂ.
ಪಂದ್ಯ ಶ್ರೇಷ್ಠ: ಡಿವೋನ್ ಕಾನ್ವೇ – 1 ಲಕ್ಷ ರೂ