ನವದೆಹಲಿ: ಗುಜರಾತ್ ಹಾಗೂ ಹಿಮಾಚಲಪ್ರದೇಶ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಗುಜರಾತ್‍ನಲ್ಲಿ ಬಿಜೆಪಿ ಸತತ 6ನೇ ಬಾರಿ ಸರ್ಕಾರ ರಚಿಸಲು ಸಿದ್ಧವಾಗ್ತಿದೆ. ಹಾಗೆ ಕಾಂಗ್ರೆಸ್ ಕೂಡ ಉತ್ತಮ ಸಾಧನೆ ಮಾಡಿದೆ ಎಂದೇ ಸುದ್ದಿಯಾಗ್ತಿದೆ. ಆದ್ರೆ ಈ ಮಧ್ಯೆ ಗುಜರಾತ್‍ನ ಒಟ್ಟು 182 ಕ್ಷೇತ್ರಗಳಲ್ಲಿ ಸುಮಾರು 30 ಸ್ಥಾನಗಳಿಗೆ ಸ್ಪರ್ಧಿಸಿದ್ದ ಆಮ್ ಆದ್ಮಿ ಪಾರ್ಟಿ ಧೂಳಿಪಟವಾಗಿದೆ.
2 ವರ್ಷಗಳ ಹಿಂದೆ ದೆಹಲಿಯಲ್ಲಿ ಬಿಜೆಪಿಯನ್ನೇ ಮುಳುಗಿಸಿದ್ದ ಆಪ್ ಈ ಬಾರಿಯ ಗುಜರಾತ್ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಸ್ಪರ್ಧೆಯೊಡ್ಡಿದ್ದು ಬಿಟ್ಟರೆ ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಅಲ್ಲದೆ ಕೆಲವರಂತೂ ಎರಡಂಕಿ ಮತಗಳನ್ನ ಪಡೆದಿದ್ದಾರೆ.
Advertisement
Advertisement
ಆಪ್ ತನ್ನ ಇರುವಿಕೆಯನ್ನ ತೋರಿಸಿದ ಮೂರು ಕ್ಷೇತ್ರಗಳೆಂದರೆ ಚೋಟಾ ಉದೇಪುರ್, ವಂಕಾನೇರ್ ಹಾಗೂ ಬಾಪೂನಗರ್. ಚೋಟಾ ಉದೇಪುರ್‍ನಲ್ಲಿ ಆಪ್‍ನ ಅರ್ಜುನ್ ಭಾಯ್ ವಸಿಂಗ್‍ಭಾಯ್ ರತ್ವಾ 4500 ಮತಗಳನ್ನ ಪಡೆದಿದ್ದು, ಗುಜರಾತ್ ನಲ್ಲಿ ಇದೇ ಆಪ್ ನ ಅತ್ಯುತ್ತಮ ಸಾಧನೆ ಎಂದು ವರದಿಯಾಗಿದೆ.
Advertisement
ಚೋಟಾ ಉದೇಪುರ್ ಕ್ಷೇತ್ರದಲ್ಲಿ ಗೆಲುವಿನ ಅಂತರವನ್ನ ನೋಡಿದಾಗ ರತ್ವಾ ಅವರ ಮತಗಳಿಕೆ ಗಮನಾರ್ಹವಾಗಿದೆ. ಇಲ್ಲಿ ಜಯ ಗಳಿಸಿರೋ ಕಾಂಗ್ರೆಸ್‍ನ ಮೋಹನ್ ಸಿನ್ ಚೋಟುಭಾಯ್ ಬಿಜೆಪಿಯ ಜಶುಭಾಯ್ ಭಿಲುಭಾಯ್ ರತ್ವಾ ಅವರನ್ನ ಕೇವಲ 1000 ಮತಗಳಿಂದ ಸೋಲಿಸಿದ್ದಾರೆ.
Advertisement
ಅದರಂತೆ ವಾಂಕನೇರ್‍ನಲ್ಲಿ ಆಪ್‍ನ ಶೇರಾಸಿಯಾ ಉಸ್ಮಾಂಗನಿ ಹುಶೇನ್ 3000 ಕ್ಕೆ ಹತ್ತಿರದ ಮತಗಳನ್ನ ಗಳಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಮತ್ತೊಮ್ಮೆ ಗೆಲುವಿನ ಅಂತರ 3 ಸಾವಿರ ಮತಗಳಿಗಿಂತ ಕಡಿಮೆ.
ಇನ್ನು ಪಾಟಿದಾರ್ ಪ್ರಾಬಲ್ಯವಿರೋ ಉಂಜಾ ಕ್ಷೇತ್ರದಲ್ಲಿ ಆಪ್‍ನ ರಮೇಶ್ ಪಟೇಲ್ 8ನೇ ಸ್ಥಾನದಲ್ಲಿದ್ದು, 400ಕ್ಕಿಂತ ಕಡಿಮೆ ಮತ ಪಡೆದಿದ್ದಾರೆ. ಇಲ್ಲಿ ಕಾಂಗ್ರೆಸ್‍ನ ಡಾ. ಆಶಾ ಪಟೇಲ್ 80,927 ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ.
ವರದಿಗಳ ಪ್ರಕಾರ ಆಪ್ ಸುಮಾರು 30 ಸ್ಥಾನಗಳಿಗೆ ಸ್ಪರ್ಧಿಸಲು ನಿರ್ಧರಿಸಿದ್ದರೂ, 10 ಸ್ಥಾನಗಳ ಮೇಲೆ ಮಾತ್ರ ಗಮನ ಹರಿಸಲು ತೀರ್ಮಾನಿಸಿತ್ತು. ಆಂತರಿಕ ಸಮೀಕ್ಷೆಯ ಪ್ರಕಾರ ಆಪ್ ಈ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆಂಬ ನಿರೀಕ್ಷೆಯಲ್ಲಿತ್ತು. ಆ ಹತ್ತು ಕ್ಷೇತ್ರಗಳಲ್ಲಿ ಉಂಜಾ, ಚೋಟಾ ಉದೇಪುರ್ ಹೊರತುಪಡಿಸಿ ಉಳಿದ ಕಡೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಹಾಗೂ ಅವರು ಪಡೆದ ಮತಗಳು ಈ ಕೆಳಕಂಡಂತಿವೆ
ಪಲಂಪುರ್- ನಭಾನಿ ರಮೇಶ್‍ಕುಮಾರ್ ಖೇಮ್‍ರಾಜ್‍ಬಾಯ್ (452 ಮತಗಳು)
ರಾಜ್‍ಕೋಟ್(ಪೂರ್ವ)- ಅಜಿತ್ ಘುಸಾಭಾಯ್ ಲೋಕಿಲ್(1927 ಮತಗಳು)
ಗೋಂಡಾಲ್- ಕುಂಟ್ ನಿಮಿಶಾಬೇನ್ ಧೀರಜ್‍ಲಾಲ್(2179 ಮತಗಳು)
ಲಾತಿ ಎಂಡಿ ಭಾನುಭಾಯ್ ಮಂಜಾರಿಯಾ( 797 ಮತಗಳು)
ಕಮ್ರೇಜ್- ರಾಮ್ ಧಡುಕ್(1454 ಮತಗಳು)
ಕರಂಜ್- ಮೆಹ್ತಾ ಜಿಗ್ನೇಶ್ ಧೀರಜ್‍ಲಾಲ್(325 ಮತಗಳು)
ಪರ್ದಿ ಡಾ ರಾಜೀವ್ ಶಂಭುನಾತ್ ಪಾಂಡೇ ( 539 ಮತಗಳು)
ಧ್ರಾಂಗಧ್ರಾ- ದಧಾನಿಯಾ ಕಮ್ಲೇಶ್ ಮುಲ್ಜಿಭಾಯ್(505 ಮತಗಳು)