ನೂರಾರು ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಜೈಲಿನ ಕಂಬಿ ಎಣಿಸುತ್ತಿರುವ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿ ಇದ್ದುಕೊಂಡೆ ರಂಪಾಟ ಮಾಡುತ್ತಿದ್ದಾನಂತೆ. ಪದೇ ಪದೇ ಪತ್ನಿಯ ಜೊತೆ ಮಾತಾಡಬೇಕೆಂದು ಹಠ ಹಿಡಿದಿದ್ದಾನಂತೆ. ಜೊತೆಗೆ ಉಪವಾಸ ಕೂಡ ಮಾಡುತ್ತಿದ್ದಾನಂತೆ. ಸುಕೇಶ್ ಈ ನಡೆ ಜೈಲು ಅಧಿಕಾರಿಗಳಿಗೆ ತಲೆನೋವು ತಂದಿದೆ. ಇದನ್ನೂ ಓದಿ : ಹೊಂಬಾಳೆ ಫಿಲ್ಮಸ್ ಬಘೀರನಿಗೆ ಮೇ 20ಕ್ಕೆ ಮುಹೂರ್ತ : ಶ್ರೀಮುರುಳಿ ನಾಯಕ
Advertisement
ಅನಾರೋಗ್ಯದ ಕಾರಣಕ್ಕಾಗಿ ಸುಕೇಶ್ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಇವನಿಗೆ ಚಿಕಿತ್ಸೆ ನೀಡಲು ವೈದ್ಯ ತಂಡ ಹರಸಾಹಸಪಡುತ್ತಿದೆ. ಕೆಲ ದಿನಗಳಿಂದ ಉಪವಾಸವಿದ್ದ ಕಾರಣಕ್ಕಾಗಿ ತೂಕ ಕೂಡ ಕಡಿಮೆ ಆಗಿದೆಯಂತೆ. ಹೀಗಾಗಿ ಚಿಕಿತ್ಸೆ ನೀಡುವುದು ಕಷ್ಟವಾಗಿದೆ ಎಂದು ವರದಿಯಾಗಿದೆ. ಜೈಲು ನಿಯಮದ ಪ್ರಕಾರ ತಿಂಗಳಿಗೆ ಎರಡೇ ಬಾರಿ ಒಳ ಜೈಲಿನ ಕೈದಿಗಳಿಗೆ ಭೇಟಿಗೆ ಅವಕಾಶ ನೀಡಲಾಗುತ್ತದೆ. ಸುಕೇಶ್ ಹೆಂಡತಿ ಕೂಡ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಇರುವುದರಿಂದ ಈಗಾಗಲೇ ಹಲವು ಬಾರಿ ಪತ್ನಿಯನ್ನು ಭೇಟಿ ಆಗಿದ್ದಾನಂತೆ. ಹೀಗಾಗಿ ಮತ್ತೆ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ. ಇದನ್ನೂ ಓದಿ : ಮನೆಗೆ ಕರೆಯಿಸಿಕೊಳ್ಳುವಂಥ ಅರ್ಹತೆ ಬಾಲಿವುಡ್ ನಲ್ಲಿ ಯಾರಿಗೂ ಇಲ್ಲ : ಕಂಗನಾ ರಣಾವತ್
Advertisement
Advertisement
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ವಿಚಾರಣೆಯ ನಂತರ ಅಧಿಕಾರಿಗಳಿಗೆ ಬೆಚ್ಚಿ ಬೀಳಿಸುವಂತಹ ಮಾಹಿತಿ ಸಿಕ್ಕಿದೆ ಎನ್ನಲಾಗುತ್ತಿದೆ. ಜಾಕ್ವೆಲಿನ್ ಸ್ನೇಹ ಬೆಳೆಸುವುದಕ್ಕಾಗಿ ಸುಕೇಶ್ ಸಾಕಷ್ಟು ದುಬಾರಿಯ ಗಿಫ್ಟ್ಗಳನ್ನು ನೀಡಿದ್ದಾನಂತೆ. ಇದನ್ನೂ ಓದಿ : ಕಾನ್ ಫೆಸ್ಟಿವಲ್ನಲ್ಲಿ ತಾರೆಯರ ದಂಡು
Advertisement
ದುಬಾರಿ ವಾಚ್, ಕಿವಿಯೋಲೆಗಳು, ಜಿಮ್ ಉಡುಗೆ, ಶೂಗಳು, ಐಷಾರಾಮಿ ಹೋಟೆಲ್ ಬುಕ್, ಬಳೆಗಳು, ಪರ್ಷಿಯನ್ ಬೆಕ್ಕು, ರತ್ನ ಖಚಿತ ಓಲೆಗಳು, ಬ್ರೇಸ್ಲೆಟ್, ಅರ್ಧ ಕೋಟಿ ಬೆಲೆಬಾಳುವ ಕುದುರೆ, ಹೆಸರಾಂತ ಬ್ರ್ಯಾಂಡ್ಗಳ ವಸ್ತುಗಳನ್ನೇ ಸುಕೇಶ್ ನೀಡಿದ್ದಾನೆ ಅಂತ ಸ್ವತಃ ಜಾಕ್ವೆಲಿನ್ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.