Connect with us

Bengaluru City

ಗೌರಿ ಲಂಕೇಶ್ ಹತ್ಯೆ ಬಗ್ಗೆ ಪ್ರತ್ಯಕ್ಷದರ್ಶಿ ಹೇಳಿದ್ದೇನು?

Published

on

ಬೆಂಗಳೂರು: ಮಂಗಳವಾರ ರಾತ್ರಿ ನಡೆದ ಗೌರಿ ಲಂಕೇಶ್ ಹತ್ಯೆಯನ್ನು ಅವರ ಮನೆಯ ಮುಂದಿನ ಅಪಾರ್ಟ್‍ಮೆಂಟ್ ನ ಸೆಕ್ಯೂರಿಟಿಯೊಬ್ಬರು ನೋಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಅಪಾರ್ಟ್‍ಮೆಂಟ್ ನಿವಾಸಿಯೊಬ್ಬರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದಾರೆ.

ನಾನು ಮನೆಯಲ್ಲಿ ಟಿವಿ ನೋಡುವಾಗ ಪಟಾಕಿ ಹೊಡೆದ ಶಬ್ದ ಕೇಳಿಸಿತು. ಗಣಪತಿ ಹಬ್ಬ ಇದೆಯಲ್ಲಾ ಎಂದು ನಾವು ಕೂಡ ಸುಮ್ಮನಾಗಿದ್ದೆವು. ಕೆಲ ಸಮಯದ ಬಳಿಕ ನಮ್ಮ ಅಪಾರ್ಟ್‍ಮೆಂಟ್ ಸೆಕ್ಯೂರಿಟಿ ಬಂದು ವಿಷಯ ತಿಳಿಸಿದಾಗ ಗೌರಿ ಅವರ ಕೊಲೆ ನಡೆದಿರುವುದು ಗೊತ್ತಾಯ್ತು ಎಂದು ಅಪಾರ್ಟ್‍ಮೆಂಟ್ ನಿವಾಸಿ ಹೇಳಿದ್ದಾರೆ.

ಸೆಕ್ಯೂರಿಟಿ ಹೇಳಿದ್ದೇನು: ಗೌರಿ ಅವರು ಕಾರ್ ನಿಲ್ಲಿಸಿ ಗೇಟ್ ತೆಗೆದು ಒಳಗಡೆ ಹೋಗುವಾಗ ಸುಮಾರು ಮೂರರಿಂದ ನಾಲ್ಕು ಆಗಂತುಕರು ಬಂದರು. ಬಂದವರೇ ನೇರವಾಗಿ ಗೌರಿಯವರನ್ನು ಹಿಡಿದು ಶೂಟ್ ಮಾಡಿದ್ರು. ಹತ್ಯೆಯ ಬಳಿಕ ಮನೆಯ ಕಾಂಪೌಂಡ್ ಜಿಗಿದು ಪರಾರಿಯಾದ್ರು ಎಂದು ಸೆಕ್ಯೂರಿಟಿ ಹೇಳಿದ್ದಾರೆ.

ನಾವು ಮನೆಯಿಂದ ಹೊರ ಬಂದು ನೋಡಿದಾಗ ಗೌರಿಯವರ ಮೃತ ದೇಹ ವರಾಂಡದಲ್ಲಿ ಬಿದ್ದಿತ್ತು. ನಾನು ಬರುಷ್ಟರಲ್ಲೇ ತುಂಬಾ ಜನರು ಘಟನಾ ಸ್ಥಳದಲ್ಲಿ ಸೇರಿದ್ದರು. ಈ ಬಡವಾಣೆಯಲ್ಲಿ ಹೆಚ್ಚಾಗಿ ಗಣ್ಯ ವ್ಯಕ್ತಿಗಳು ವಾಸವಾಗಿದ್ದು, ಇಲ್ಲಿ ಈ ತರಹದ ಘಟನೆ ನಡೆದಿದ್ದು ಸಹಜವಾಗಿಯೇ ನಮ್ಮಲ್ಲಿ ಭಯದ ವಾತವಾರಣವನ್ನುಂಟು ಮಾಡಿದೆ ಎಂದು ಅಪಾರ್ಟ್‍ಮೆಂಟ್ ನಿವಾಸಿ ತಿಳಿದ್ದಾರೆ.

https://youtu.be/jtfEPQsG_LQ

 

Click to comment

Leave a Reply

Your email address will not be published. Required fields are marked *