ಭಾರತವು ಸುಮಾರು 7600 ಕಿಮೀ ಉದ್ದದ ಕರಾವಳಿಯನ್ನು ಹೊಂದಿದ್ದು, ಅಡೆತಡೆ ರಹಿತವಾದ ಗಾಳಿಯ ಶಕ್ತಿಯನ್ನು ಬಳಸಿಕೊಂಡು ದೇಶದ ಎರಡು ಪ್ರಮುಖ ಬಂದರನ್ನು ಆಯ್ದುಕೊಂಡು ಕಡಲ ಪವನ ಶಕ್ತಿ (Offshore Wind Energy Projects) ಬಳಸಿಕೊಂಡು ವಿದ್ಯುತ್ ಉತ್ಪಾದಿಸಲು ಭಾರತ ಮುಂದಾಗಿದೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಕಡಲ ಪವನ ಶಕ್ತಿ ಯೋಜನೆಗೆ ಅಂತರ ನಿಧಿ (Viability Gap Funding) 7,453 ಕೋಟಿ ರೂ. ವೆಚ್ಚದ ಅನುಮೋದನೆ ನೀಡಿದೆ. ಇದು 1 ಗಿಗಾ ವ್ಯಾಟ್, ಕಡಲತೀರದ ಪವನ ಶಕ್ತಿ ಯೋಜನೆಗಳ (ಗುಜರಾತ್ ಮತ್ತು ತಮಿಳುನಾಡು ಕರಾವಳಿಯಲ್ಲಿ ತಲಾ 500 ಮೆ.ವ್ಯಾ) ಸ್ಥಾಪನೆ ಮತ್ತು ಕಾರ್ಯಾರಂಭಕ್ಕೆ 6853 ಕೋಟಿ ರೂ. ವೆಚ್ಚವನ್ನು ಮತ್ತು ಕಡಲ ಪವನ ಶಕ್ತಿ ಯೋಜನೆಗಳಿಗೆ ಸಾರಿಗೆ ಅವಶ್ಯಕತೆಗಳನ್ನು ಪೂರೈಸಲು ಎರಡು ಬಂದರುಗಳ ಉನ್ನತೀಕರಣಕ್ಕಾಗಿ 600 ಕೋಟಿ ರೂ. ಅನುದಾನವನ್ನು ಒಳಗೊಂಡಿದೆ.
Advertisement
Advertisement
ಅಂತರ ನಿಧಿ (ವಿಜಿಎಫ್) ಯೋಜನೆಯು 2015 ರಲ್ಲಿ ಸೂಚಿಸಲಾದ ರಾಷ್ಟ್ರೀಯ ಕಡಲ ಪವನ ಶಕ್ತಿ ನೀತಿಯ ಅನುಷ್ಠಾನಕ್ಕೆ ಒಂದು ಪ್ರಮುಖ ಹೆಜ್ಜೆಯಾಗಿದೆ. ಭಾರತದ ವಿಶೇಷ ಆರ್ಥಿಕ ವಲಯದಲ್ಲಿ ಅಸ್ತಿತ್ವದಲ್ಲಿರುವ ವಿಶಾಲವಾದ ಕಡಲ ಪ್ರದೇಶವನ್ನು ಬಳಸಿಕೊಳ್ಳುವ ಗುರಿಯನ್ನು ಈ ಯೋಜನೆ ಹೊಂದಿದೆ. ಸರ್ಕಾರದ ವಿಜಿಎಫ್ ಯೋಜನೆಯ ಬೆಂಬಲವು ಕಡಲ ಪವನ ಶಕ್ತಿ ಯೋಜನೆಗಳಿಂದ ವಿದ್ಯುತ್ ಉತ್ಪಾದನೆ ಹೆಚ್ಚಿಸಲಿದೆ.
Advertisement
ಕಡಲ ಪವನಶಕ್ತಿ ಯೋಜನೆಗಳ ನಿರ್ಮಾಣ ಮತ್ತು ಅದರ ಕಾರ್ಯಾಚರಣೆಗಳಿಗೆ ನಿರ್ದಿಷ್ಟ ಬಂದರಿನ ಮೂಲಸೌಕರ್ಯ ಅಗತ್ಯವಿರುತ್ತದೆ. ಭಾರೀ ಮತ್ತು ದೊಡ್ಡ ದೊಡ್ಡ ಉಪಕರಣಗಳ ಸಂಗ್ರಹಣೆ ಮತ್ತು ಸಾಗಾಣಿಕೆಯ ಅಗತ್ಯವಿರುವುದರಿಂದ ಗುಜರಾತ್ ಹಾಗೂ ತಮಿಳು ನಾಡಿನ ಬಂದರನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ.
Advertisement
ಕಡಲ ಪವನಶಕ್ತಿ ಕರಾವಳಿ ಭಾಗಗಳಲ್ಲಿ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ಆರ್ಥಿಕವಾಗಿ ವ್ಯಾಪಕ ಪ್ರಯೋಜನಗಳಿಗೆ ದಾರಿ ಮಾಡಿಕೊಡಲಿದೆ. ದೇಶದ ಉತ್ಪಾದನಾ ಸಾಮರ್ಥ್ಯದ ಅಭಿವೃದ್ಧಿ, ಉದ್ಯೋಗಾವಕಾಶಗಳ ಸೃಷ್ಟಿ ಮತ್ತು ದೇಶದಲ್ಲಿ ಕಡಲ ಗಾಳಿಗಾಗಿ ತಂತ್ರಜ್ಞಾನ ಅಭಿವೃದ್ಧಿಗೆ ಕಾರಣವಾಗಲಿದೆ.
ಕಡಲ ಪವನ ಶಕ್ತಿ ಯೋಜನೆಯಿಂದ ವಾರ್ಷಿಕವಾಗಿ ಸುಮಾರು 3.72 ಶತಕೋಟಿ ಯೂನಿಟ್ ಗಳ ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸಬಹುದಾಗಿದೆ. ಇದು 25 ವರ್ಷಗಳ ಅವಧಿಗೆ 2.98 ಮಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ವಾರ್ಷಿಕವಾಗಿ ಕಡಿಮೆ ಮಾಡುತ್ತದೆ.
ಭಾರತವು ಕಡಲತೀರದ ಪವನ ಶಕ್ತಿ ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ, ಸುಮಾರು 24 ಜಿಡಬ್ಲ್ಯೂ ಪವನ ಶಕ್ತಿ ಸಾಮಥ್ರ್ಯವು ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಆದಾಗ್ಯೂ, ಕಡಲಾಚೆಯ ಗಾಳಿ ಶಕ್ತಿಯ ಸಾಮರ್ಥ್ಯ ಹೆಚ್ಚಾಗಿ ಬಳಕೆಯಾಗದೆ ಉಳಿದಿದೆ. ಈ ನೀತಿಯ ಅನುಷ್ಠಾನದ ಮೂಲಕ, ಕಡಲ ಪವನ ಶಕ್ತಿಯ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಸಾಂಪ್ರದಾಯಿಕ ಇಂಧನ ಮೂಲಗಳ ಮುಂಚೂಣಿಗೆ ತರಲು ಸರ್ಕಾರ ಮುಂದಾಗಿದೆ.
ಯೋಜನೆಯ ಹಿನ್ನೆಲೆ
ಭಾರತವು ಸುಮಾರು 7600 ಕಿಮೀ ಉದ್ದದ ಕರಾವಳಿಯನ್ನು ಹೊಂದಿದ್ದು, ಇದು ಕಡಲಾಚೆಯ ಪವನ ಶಕ್ತಿ ಯೋಜನೆಗಳಿಗೆ ಸೂಕ್ತವಾಗಿದೆ.
ಕಡಲ ಪವನ ಶಕ್ತಿ ನೀತಿಯ ಉದ್ದೇಶಗಳು
* ಇಂಧನ ಮೂಲಸೌಕರ್ಯದಲ್ಲಿ ಹೂಡಿಕೆಗೆ ಉತ್ತೇಜಿಸಲು.
*ಸೂಕ್ತವಾದ ಉತ್ತೇಜನಗಳ ಮೂಲಕ ಭಾರತದ ಕಡಲ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳ ಪ್ರಾದೇಶಿಕ ಯೋಜನೆ ಮತ್ತು ನಿರ್ವಹಣೆ.
*ವಿದ್ಯುತ್ ಶಕ್ತಿಯಲ್ಲಿ ಸ್ವಾವಲಂಬನೆ
*ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು.
*ಕಡಲ ಪವನ ಶಕ್ತಿ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಮತ್ತು ನುರಿತ ಮಾನವ ಸಂಪನ್ಮೂಲದ ಬಳಕೆ ಮಾಡಿಕೊಳ್ಳಲು.
*ಭಾರೀ ನಿರ್ಮಾಣ ಮತ್ತು ತಯಾರಿಕೆಯ ಕೆಲಸ ಮತ್ತು ಕಾರ್ಯಾಚರಣೆ ಮತ್ತು ನಿರ್ವಹಣೆ ಚಟುವಟಿಕೆಗಳನ್ನು ಬೆಂಬಲಿಸಲು ಕರಾವಳಿ ಮೂಲಸೌಕರ್ಯ ಮತ್ತು ಪೂರೈಕೆ ಸರಪಳಿಯನ್ನು ಅಭಿವೃದ್ಧಿಪಡಿಸಲು.
ಕಡಲ ಗಾಳಿ ಶಕ್ತಿಯ ಕಾರ್ಯವಿಧಾನ
*ಕಡಲ ಗಾಳಿಯ ಶಕ್ತಿಯನ್ನು ಸಮುದ್ರದಲ್ಲಿನ ಗಾಳಿಯ ಶಕ್ತಿಯಿಂದ ಬಳಸಿಕೊಳ್ಳಲಾಗುತ್ತದೆ. ಅಡೆತಡೆಗಳಿಲ್ಲದ ಕಾರಣ ಸಮುದ್ರದಲ್ಲಿ ಗಾಳಿಯ ವೇಗವು ಹೆಚ್ಚಾಗಿರುತ್ತದೆ ಮತ್ತು ಹೆಚ್ಚು ಸ್ಥಿರವಾಗಿರುತ್ತದೆ ಇದರಿಂದ ಈ ಯೋಜನೆ ಮಹತ್ವ ಪಡೆದಿದೆ.
*ಕಡಲಾಚೆಯ ಗಾಳಿ ಶಕ್ತಿಯು ನವೀಕರಿಸಬಹುದಾದ ಮತ್ತು ಶುದ್ಧ ಶಕ್ತಿಯ ಮೂಲವಾಗಿದೆ, ಇದು ಎತ್ತರದ ಸಮುದ್ರಗಳಲ್ಲಿ ಉತ್ಪತ್ತಿಯಾಗುವ ಗಾಳಿಯ ಬಲವನ್ನು ಬಳಸಿಕೊಳ್ಳುತ್ತದೆ.
*ಈ ಶಕ್ತಿಯನ್ನು ಬಳಸಿಕೊಳ್ಳಲು, ಸಮುದ್ರದ ತಳದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ಪ್ರಸ್ತುತ ತಾಂತ್ರಿಕ ಪ್ರಗತಿಯು ಕಡಲಾಚೆಯ ಗಾಳಿ ಸಾಕಣೆ ಕೇಂದ್ರಗಳನ್ನು ಆಳವಿಲ್ಲದ ನೀರಿನಲ್ಲಿ (60 ಮೀ ಆಳದವರೆಗೆ) ಸ್ಥಾಪಿಸಲು ಅನುವು ಮಾಡಿಕೊಡುತ್ತದೆ.
ಭಾರತದಲ್ಲಿ ಕಡಲಾಚೆಯ ಪವನ ಶಕ್ತಿಯ ಅಭಿವೃದ್ಧಿಗೆ ಚೆನ್ನೈನಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವಿಂಡ್ ಎನರ್ಜಿ ಸಂಸ್ಥೆಯು ಡೆವಲಪರ್‌ಗಳೊಂದಿಗೆ ಸಹಕರಿಸುವ ಮೂಲಕ ಕಡಲ ಪವನ ಶಕ್ತಿ ಫಾರ್ಮ್‍ಗಳನ್ನು ಸ್ಥಾಪಿಸಲು ಸಹಕರಿಸುತ್ತಿದೆ.
ಕಡಲ ಪವನ ಶಕ್ತಿಯೊಂದಿಗೆ ಸಂಬಂಧಿಸಿದ ಸವಾಲುಗಳು
ಸಮುದ್ರದಲ್ಲಿ ಬಲವಾದ ಅಡಿಪಾಯ ಹಾಗೂ ನಿರ್ಮಾಣದ ಅಗತ್ಯತೆಯಿಂದಾಗಿ ಕಡಲಾಚೆಯ ಗಾಳಿ ಶಕ್ತಿ ಯೋಜನೆಗಳು ಹೆಚ್ಚಿನ ವೆಚ್ಚದ ಸವಾಲನ್ನು ಎದುರಿಸುತ್ತದೆ. ಕಡಲಾಚೆಯ ಗಾಳಿ ಟರ್ಬೈನ್‍ಗಳು ಉತ್ತಮ ಗುಣಮಟ್ಟ ಮತ್ತು ಹೆಚ್ಚಿನ ದಕ್ಷತೆಯನ್ನು ಹೊಂದಿರಬೇಕಾಗಿರುತ್ತದೆ.