ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಸಿನಿಮಾ ರಿಲೀಸ್, ಹಾಡುಗಳಿಗೆ ಸ್ಪಂದನೆ, ಟ್ರೈಲರ್ ರಿಲೀಸ್ ಹೀಗೆ ನಾನಾ ರೀತಿಯ ಕಾರ್ಯಕ್ರಮಗಳ ಕುರಿತು ಅವರು ಅಧಿಕೃತ ಸಾಮಾಜಿಕ ತಾಣಗಳ ಮೂಲಕ ಅಭಿಮಾನಿಗಳ ಜತೆ ವ್ಯವಹರಿಸುತ್ತಲೇ ಇದ್ದಾರೆ. ಈ ಬಾರಿ ಅವರು ಯುಗಾದಿ ಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಇದನ್ನೂ ಓದಿ : ಸಿನಿಮಾ ಶೀರ್ಷಿಕೆ ಮೂಲಕ ಅಪ್ಪುನ ನೆನಪಿಸಿಕೊಂಡ ಗೋಲ್ಡನ್ ಸ್ಟಾರ್ : ಗಣಿ-ಗುಬ್ಬಿ ಕಾಂಬಿನೇಷನ್ ಚಿತ್ರಕ್ಕೆ ‘ಬಾನದಾರಿಯಲ್ಲಿ’ ಟೈಟಲ್
ಯುಗಾದಿ ಅಂದಾಕ್ಷಣ ಹೋಳಿಗೆ ಇರಲೇಬೇಕು. ಅದರಲ್ಲೂ ನಾನಾ ಬಗೆಯ ಹೋಳಿಗೆಗಳನ್ನು ಮಾಡಲಾಗುತ್ತದೆ. ಹಾಗಾಗಿ ನಿಮಗೆ ಯಾವ ಹೋಳಿಗೆ ಇಷ್ಟ ಎಂದು ಕೇಳಿದ್ದಾರೆ. ಹಾಗಂತ ನೀವು ಇಷ್ಟ ಬಂದದ್ದನ್ನು ಹೇಳುವ ಹಾಗಿಲ್ಲ. ಅವರೇ ಆಪ್ಷನ್ ಕೂಡ ಕೊಟ್ಟಿದ್ದಾರೆ. ಅದರ ಪ್ರಕಾರ ನೀವು ಯಾವ ಹೋಳಿಗೆ ನಿಮಗೆ ಇಷ್ಟವೆಂದು ಹೇಳಬೇಕು. ಇದನ್ನೂ ಓದಿ : ಜುಲೈ 28ರಂದು ಗುಮ್ಮನ ಕಥೆ – ಯುಗಾದಿ ದಿನ ಡಬಲ್ ಖುಷಿ ಕೊಟ್ಟ ‘ವಿಕ್ರಾಂತ್ ರೋಣ’ ಟೀಮ್
ಅಷ್ಟಕ್ಕೂ ಅವರು ಕೊಟ್ಟಿರುವ ಆಪ್ಷನ್ ನಲ್ಲಿ ಎರಡು ಹೋಳಿಗೆಗಳು ಮಾತ್ರ ಇವೆ. ಒಂದು ಕಾಯಿ ಹೋಳಿಗೆ ಮತ್ತೊಂದು ಬೇಳೆ ಹೋಳಿಗೆ. ಇವೆರಡರಲ್ಲಿ ಮಾತ್ರ ನಿಮ್ಮ ಇಷ್ಟದ ಹೋಳಿಗೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಮತ್ತೊಂದು ಹೇಳುವುದಕ್ಕೂ ಅವರು ಅವಕಾಶವನ್ನು ಕೊಟ್ಟಿಲ್ಲ.
Which one do you prefer?
I’m team Kayi Obbattu! ???? #HappyUgadi
— Divya Spandana/Ramya (@divyaspandana) April 2, 2022
ಆದರೆ, ತಮಗಿಷ್ಟವಾದ ಹೋಳಿಗೆಯನ್ನೂ ಅವರು ಹೇಳಿಕೊಂಡಿದ್ದು, ಕಾಯಿ ಹೋಳಿಗೆಯೇ ಅವರಿಗೆ ಫೆವರೆಟ್ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಏ. 2 ರಂದು ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ : ತೆಲುಗಿನಲ್ಲಿ ಚಿರಂಜೀವಿ, ಮಲಯಾಳಂನಲ್ಲಿ ಮೋಹನ್ ಲಾಲ್
ಮೊನ್ನೆಯಷ್ಟೇ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಹಿಗ್ಗಾಮುಗ್ಗಾ ಹೊಗಳಿದ್ದ ರಮ್ಯಾ, ಡಿಂಪಲ್ ರಚಿತಾ ಅವರನ್ನು ಬಾಯ್ತುಂಬಾ ಹೊಗಳಿದ್ದರು. ರಚಿತಾ ರಾಮ್ ಕೂಡ ರಮ್ಯಾ ಅವರ ಬಗ್ಗೆ ಗೌರವದ ಮಾತುಗಳನ್ನು ಆಡಿದ್ದರು. ಮತ್ತೆ ಸಿನಿಮಾ ರಂಗಕ್ಕೆ ಬರುವಂತೆ ಕರೆ ನೀಡಿದ್ದರು. ರಮ್ಯಾ ಬಹುಶಃ ಸಿನಿಮಾ ರಂಗಕ್ಕೆ ಮತ್ತೆ ಬರಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಸಿನಿಮಾ ಸಂಬಂಧಿ ಸಾಕಷ್ಟು ಚಟುವಟಿಕೆಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.