ಪಬ್ಲಿಕ್ ಟಿವಿ ನಡೆಸಿದ ಎಕ್ಸ್‌ಕ್ಲೂಸೀವ್ ಸಂದರ್ಶನದಲ್ಲಿ ನಟ ಯಶ್, ವರನಟ ಡಾ.ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡರು. ಇದು ಅಣ್ಣಾವ್ರ ನಾಡು. ಈ ನಾಡಿನಲ್ಲಿ ನಾವು ಹುಟ್ಟಿದ್ದೇ ಪುಣ್ಯ ಎಂದರು. ಈ ಮಾತನ್ನು ಅವರು ಆಡುವುದಕ್ಕೂ ಕಾರಣವಿದೆ. ಯಶ್ ಈಗ ಎಲ್ಲೇ ಹೋದರೂ, ಅವರನ್ನು ಪ್ರೀತಿಸುವ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ದೇಶದ ವಿವಿಧ ರಾಜ್ಯಗಳಿಗೆ ಹೋದಾಗಲೂ ಅಭಿಮಾನಿಗಳು ಅಷ್ಟೇ ಪ್ರೀತಿ ತೋರಿಸುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳ ಪ್ರೀತಿಯ ಕುರಿತು ಮಾತನಾಡುವಾಗ ಯಶ್, ಅಣ್ಣಾವ್ರನ್ನು ನೆನಪಿಸಿಕೊಂಡರು. ಇದನ್ನು ಓದಿ:`ಕೆಜಿಎಫ್ 2′ ನಟಿ ಅರ್ಚನಾ ನಟನೆಯ `ಮ್ಯೂಟ್’ ಟ್ರೇಲರ್ ಮೆಚ್ಚಿದ ರವೀನಾ ಟಂಡನ್
Advertisement
‘ಅಣ್ಣಾವ್ರು ತಮ್ಮ ಅಭಿಮಾನಿಗಳನ್ನು ದೇವರು ಎಂದು ಕರೆಯುತ್ತಿದ್ದರು. ಅವರು ಯಾಕೆ ಹಾಗೆ ಕರೆಯುತ್ತಿದ್ದರು ಎಂದು ಈಗೀಗ ನನಗೆ ಅರ್ಥವಾಗುತ್ತಿದೆ. ನನ್ನ ನಟನೆಯ ಕೆಜಿಎಫ್ ಸಿನಿಮಾ ಬಂದು ಮೂರು ವರ್ಷಗಳಾಯಿತು. ಅಷ್ಟೂ ದಿನಗಳ ಕಾಲ ನಾನು ಅಭಿಮಾನಿಗಳ ಜತೆ ಇದ್ದದ್ದು ಕಡಿಮೆ. ನನ್ನ ಯಾವ ಸಿನಿಮಾಗಳು ಬಂದಿಲ್ಲ. ಆದರೂ, ಅವರು ಅಷ್ಟೊಂದು ಪ್ರೀತಿ ತೋರಿಸುತ್ತಿದ್ದಾರೆ ಅಂದರೆ, ಅದಕ್ಕೆ ಕಾರಣ ಅವರ ನನ್ನ ಮೇಲಿಟ್ಟ ನಂಬಿಕೆ. ಅದಕ್ಕಾಗಿಯೇ ಅಣ್ಣಾವ್ರು ಅವರನ್ನು ಅಭಿಮಾನಿ ದೇವರು ಅಂತ ಕರೆದದ್ದು’ ಎಂದು ನೆನಪಿಸಿಕೊಂಡರು ಯಶ್. ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್
Advertisement
Advertisement
ಪಬ್ಲಿಕ್ ಟಿವಿ ಡಿಜಿಟಲ್ ಅಣ್ಣಾವ್ರ ಹುಟ್ಟು ಹಬ್ಬಕ್ಕಾಗಿಯೇ ‘ಡಾ.ರಾಜ್ ಉತ್ಸವ’ ಹೆಸರಿನಲ್ಲಿ ಸ್ಪೆಷಲ್ ಸ್ಟೋರಿಗಳನ್ನು ಮಾಡುತ್ತಿದೆ. ನಾಡಿನ ದಿಗ್ಗಜರು ಮತ್ತು ಡಾ.ರಾಜ್ ಕುಮಾರ್ ಅವರ ಜತೆ ಒಡನಾಡಿದ ಧೀಮಂತರು ಡಾ.ರಾಜ್ ಕುಮಾರ್ ಕುರಿತಾಗಿ ಮಾತನಾಡಿದ್ದಾರೆ. ಸಾಕಷ್ಟು ಘಟನೆಗಳನ್ನು ಹಂಚಿಕೊಂಡಿದ್ದಾರೆ. ಏ.10 ರಿಂದ ಶುರುವಾದ ಈ ವಿಶೇಷ ಕಂತುಗಳು ಏ.24ರವರೆಗೂ ಪಬ್ಲಿಕ್ ಮ್ಯೂಸಿಕ್ ಯೂಟ್ಯೂಬ್ ನಲ್ಲಿ ನೋಡಲು ಸಿಗುತ್ತವೆ.