ನಟ ಶಿವರಾಜ್‌ಕುಮಾರ್ (Shivarajkumar) ಹಾಗೂ ಸಿಂಪಲ್ ಸುನಿ (Simple Suni) ನಿರ್ದೇಶನದ `ಮನಮೋಹಕ’ ಸಿನಿಮಾ (Manamohaka Cinema) ಸುಮಾರು 10 ವರ್ಷಗಳ ಹಿಂದೆ ಸೆಟ್ಟೇರಬೇಕಿತ್ತು. ಆ ಸಿನಿಮಾಗಾಗಿ ಫೋಟೋ ಶೂಟ್ ಕೂಡಾ ಮಾಡಲಾಗಿತ್ತು. ನವಿರಾದ ಪ್ರೇಮಕಥೆಯುಳ್ಳ ಮನಮೋಹಕ ಸಿನಿಮಾದ ಕಥೆ ಕೇಳಿ ಶಿವಣ್ಣ ತುಂಬಾನೇ ಖುಷಿಯಿಂದ ಒಪ್ಪಿಕೊಂಡಿದ್ದರು. ಆದ್ರೆ ಆ ಸಿನಿಮಾ ಕಾರಣಾಂತರಗಳಿಂದ ನಿಂತು ಹೋಯ್ತು.
ಮನಮೋಹಕ ಸಿನಿಮಾದ ವಿಶೇಷ ಪಾತ್ರದಲ್ಲಿ ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಐಶ್ವರ್ಯ ರೈ ಅವರನ್ನ ಕರೆತರಲು ಕೂಡಾ ಪ್ಲ್ಯಾನ್ ಮಾಡಲಾಗಿತ್ತಂತೆ. ಸುಮಾರು 10 ವರ್ಷಗಳಾದರೂ ಆ ಸಿನಿಮಾದ ಇಂಚಿಂಚೂ ಘಟನೆಗಳನ್ನ, ನೆನಪುಗಳನ್ನ ಇತ್ತೀಚೆಗೆ ನಿರ್ದೇಶಕ ಸಿಂಪಲ್ ಸುನಿ ಶಿವರಾಜ್‌ಕುಮಾರ್ ಮುಂದೆ ಹಂಚಿಕೊಂಡಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ `ಗತವೈಭವ’ ಸಿನಿಮಾದ ಹಾಡೊಂದರ ರಿಲೀಸ್ ಇವೆಂಟ್‌ನಲ್ಲಿ ಈ ಬಗ್ಗೆ ನಿರ್ದೇಶಕ ಸುನಿ ಮಾತ್ನಾಡಿದ್ದಾರೆ.
ಮನಮೋಹಕ ಸಿನಿಮಾದ ಬಗ್ಗೆ ನಿರ್ದೇಶಕ ಸುನಿ ಮಾತಾಡೋಕು ಕಾರಣ ಇದೆ. ಸುನಿ ನಿರ್ದೇಶನದ `ಗತವೈಭವ’ ಚಿತ್ರದ ಹಾಡು ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಶಿವಣ್ಣನ ಮುಂದೆ ಹಳೆ ನೆನಪು ಬಿಚ್ಚಿಟ್ಟಿದ್ದಾರೆ. ಬಳಿಕ ಮಾತಾಡಿದ ಶಿವಣ್ಣ `ಮನಮೋಹಕ’ ಸಿನಿಮಾ ಖಂಡಿತಾ ಆಗುತ್ತೆ. ಟೈಂ ಕೂಡಿ ಬರಬೇಕು. ಸುನಿ ಜೊತೆ ಸಿನಿಮಾ ಮಾಡುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಿಂಪಲ್ ಸುನಿಗೆ ಶಿವಣ್ಣ ಅವಕಾಶ ಮಾಡಿಕೊಟ್ಟರೆ ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರೋ ನಿರೀಕ್ಷೆಗಳು ಹೆಚ್ಚಾಗಿವೆ.


