ನವದೆಹಲಿ: 17 ಮಂದಿ ಬಿಜೆಪಿ ಸಂಸದರಿರುವ ಕರ್ನಾಟಕಕ್ಕೆ (Karnataka) ಕೇಂದ್ರ ಬಜೆಟ್‌ನಲ್ಲಿ (Union Budget) ಬಿಹಾರ, ಆಂಧ್ರಕ್ಕೆ ಸಿಕ್ಕಿದಷ್ಟು ಸಿಕ್ಕಿಲ್ಲ. ಮೂಲಸೌಕರ್ಯ, ಕೈಗಾರಿಕೆ, ಕೃಷಿ, ನೀರಾವರಿ ಸೇರಿದಂತೆ ಅನೇಕ ವಲಯಗಳ ನಿರೀಕ್ಷೆಯಿತ್ತು. ಆದರೆ ಅದೆಲ್ಲಾ ಹುಸಿಯಾಗಿದೆ.
ಬೆಂಗಳೂರು ಮೆಟ್ರೋದ 3ನೇ ಹಂತ, ಸಬ್ ಅರ್ಬನ್ ರೈಲಿಗೆ ಅನುದಾನ ನಿರೀಕ್ಷೆ ಹುಸಿಯಾಗಿದೆ. ರೈಲ್ವೇ ಡಬ್ಲಿಂಗ್, ವಿದ್ಯುದ್ದೀಕರಣ, ಮಧ್ಯ ಕರ್ನಾಟಕಜಿಲ್ಲೆಗಳಲ್ಲಿ ಹೆದ್ದಾರಿಗಳ ಅಭಿವೃದ್ಧಿಗೆ ಒತ್ತು ಸಿಗುವ ನಿರೀಕ್ಷೆಯೂ ಈಡೇರಿಲ್ಲ. ಇದನ್ನೂ ಓದಿ: ಬೆಂಗಳೂರು 5 ಭಾಗಗಳಾಗಿ ವಿಭಜನೆ – ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಸೂದೆಯಲ್ಲಿ ಏನಿದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಕರ್ನಾಟಕಕ್ಕೆ ಸಿಕ್ಕಿದ್ದೇನು?
– ಹೈದರಾಬಾದ್ -ಬೆಂಗಳೂರು ಕೈಗಾರಿಕಾ ಕಾರಿಡಾರ್ (12 ಪಥಗಳ ಯೋಜನೆ), ರೈಲ್ವೆ ಯೋಜನೆಗೆ 7500 ಕೋಟಿ ರೂ. ಅನುದಾನ ಸಿಕ್ಕಿದೆ. ಇವು ಎರಡೂ ಹೊಸ ಯೋಜನೆಗಳಾಗಿವೆ.
ಕರ್ನಾಟಕಕ್ಕೆ ಅನ್ಯಾಯವಾಗಿದ್ದೆಲ್ಲಿ?
> ಬೆಂಗಳೂರು ಪೆರಿಫೆರಲ್ ರಿಂಗ್ ರೋಡ್‌ಗೆ ಹಣವಿಲ್ಲ
> ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಘೋಷಿಸಿಲ್ಲ
> ರಾಯಚೂರು ಏಮ್ಸ್ ಬೇಡಿಕೆ ಈಡೇರಿಲ್ಲ ಇದನ್ನೂ ಓದಿ: ಬಜೆಟ್ ಭಾಷಣ ಮುಗಿದ ಬೆನ್ನಲ್ಲೇ ಚಿನ್ನ, ಬೆಳ್ಳಿ ದರ ದಿಢೀರ್ ಭಾರೀ ಇಳಿಕೆ