Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸತ್ಯ ಹೇಳಿದ್ದಕ್ಕೆ ಎಸ್ಟಿ ನಾಯಕನ ಕತ್ತು ಹಿಡಿದು ಹೊರದಬ್ಬಿದೆ ಕಾಂಗ್ರೆಸ್: ಪ್ರಹ್ಲಾದ್ ಜೋಶಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ಸತ್ಯ ಹೇಳಿದ್ದಕ್ಕೆ ಎಸ್ಟಿ ನಾಯಕನ ಕತ್ತು ಹಿಡಿದು ಹೊರದಬ್ಬಿದೆ ಕಾಂಗ್ರೆಸ್: ಪ್ರಹ್ಲಾದ್ ಜೋಶಿ

Karnataka

ಸತ್ಯ ಹೇಳಿದ್ದಕ್ಕೆ ಎಸ್ಟಿ ನಾಯಕನ ಕತ್ತು ಹಿಡಿದು ಹೊರದಬ್ಬಿದೆ ಕಾಂಗ್ರೆಸ್: ಪ್ರಹ್ಲಾದ್ ಜೋಶಿ

Public TV
Last updated: August 12, 2025 8:56 pm
Public TV
Share
3 Min Read
Pralhad Joshi 1
SHARE

– ರಾಜಣ್ಣ ಹೇಳಿದ್ದರಲ್ಲಿ ತಪ್ಪೇನಿದೆ? ಆತ್ಮವಿಮರ್ಶೆ ಮಾಡಿಕೊಳ್ಳಲಿ ರಾಹುಲ್ ಗಾಂಧಿ

ನವದೆಹಲಿ: ಸತ್ಯ ಹೇಳಿದ್ದಕ್ಕೆ ಕಾಂಗ್ರೆಸ್ ಪಕ್ಷ ಒಬ್ಬ ಎಸ್ಟಿ ನಾಯಕನನ್ನು ಕತ್ತು ಹಿಡಿದು ಹೊರದಬ್ಬಿದ್ದು, ಇದು ಅತ್ಯಂತ ಖಂಡನೀಯ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಕಿಡಿಕಾರಿದ್ದಾರೆ.

ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟದಕಲ್ಲಿ ಕೆ.ಎನ್ ರಾಜಣ್ಣ (KN Rajanna) ಎಸ್ಟಿ ಸಮುದಾಯದ ಒಬ್ಬ ಹಿರಿಯ ನಾಯಕರು. ರಾಹುಲ್ ಗಾಂಧಿ ಅವರ `ಮತಗಳ್ಳತನ’ ಆರೋಪ ಸಂಬಂಧ ರಾಜಣ್ಣ ಇರುವ ಸತ್ಯವನ್ನು ಹೇಳಿದ್ದರು. ಆ ಕಾರಣಕ್ಕೆ ಅವರನ್ನೀಗ ಹೊರದಬ್ಬಲಾಗಿದೆ ಎಂದರು. ಇದನ್ನೂ ಓದಿ: 1990ರ ಕಾಶ್ಮೀರಿ ಪಂಡಿತ್ ನರ್ಸ್ ಹತ್ಯೆ ಕೇಸ್; ಶ್ರೀನಗರದ 8 ಸ್ಥಳಗಳ ಮೇಲೆ ಎಸ್‌ಐಎ ದಾಳಿ

ಕಾಂಗ್ರೆಸ್‌ನಲ್ಲಿ (Congress) ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವುದು ರಾಹುಲ್ ಗಾಂಧಿ ಅಹಂಕಾರಕ್ಕೆ ನಿದರ್ಶನವಾಗಿದೆ. ರಾಜಣ್ಣ ಮಾಡಿದ ತಪ್ಪೇನು? ಎಂಬ ಬಗ್ಗೆ ಇಡೀ ಕಾಂಗ್ರೆಸ್ ಪಕ್ಷ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ತಿವಿದಿದ್ದಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿ ನಿರ್ದೇಶನದ ಮೇಲೆ ರಾಜಣ್ಣರನ್ನ ಸಂಪುಟದಿಂದ ವಜಾ ಮಾಡಲಾಗಿದೆ: ಸಿದ್ದರಾಮಯ್ಯ

ರಾಜಣ್ಣ ಹೇಳಿದ್ದು ಸರಿಯಾಗೇ ಇದೆ
ರಾಹುಲ್ ಗಾಂಧಿ ಅವರ ಮತಗಳ್ಳತನ ಆರೋಪ ಕುರಿತಂತೆ ರಾಜಣ್ಣ ಸರಿಯಾಗೇ ಹೇಳಿದ್ದಾರೆ. ಕರ್ನಾಟಕದಲ್ಲಿ (Karnataka) ಲೋಕಸಭೆ ಚುನಾವಣೆ ತಯಾರಿ ನಡೆದಾಗ ನಮ್ಮ ಸರ್ಕಾರವೇ ಇತ್ತು. ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರಿಂದ ಹಿಡಿದು ಎಲ್ಲಾ ಅಧಿಕಾರ ವರ್ಗ ನಮ್ಮವರೇ ಇದ್ದರು. ಚುನಾವಣಾ ಆಯೋಗ ಕೊಟ್ಟ ಮತದಾರರ ಪಟ್ಟಿಯನ್ನು ನಾವು ನೋಡಿಕೊಳ್ಳಬೇಕಿತ್ತು ಎಂದಿದ್ದಾರೆ. ಇದರಲ್ಲಿ ಅವರ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ಪರಿಶಿಷ್ಟ ವಿರೋಧಿ ನಡೆ
ಕೆ.ಎನ್. ರಾಜಣ್ಣ 72 ವರ್ಷದ ಹಿರಿಯರು ಮತ್ತು ಎಸ್ಟಿ ಸಮುದಾಯದ ಪ್ರಬಲ ರಾಜಕಾರಣಿ. ಇಂಥವರನ್ನು ವಜಾಗೊಳಿಸಿರುವುದು ಕಾಂಗ್ರೆಸ್ ಪಕ್ಷ ಪರಿಶಿಷ್ಟರನ್ನು, ಸತ್ಯವಂತರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ನಿದರ್ಶನ ಇದಾಗಿದೆ ಎಂದಿದ್ದಾರೆ.

ರಾಹುಲ್ ಗಾಂಧಿ (Rahul Gandhi) ಅವರ ಅಹಂಕಾರದಿಂದಾಗಿ ರಾಜಣ್ಣ ಸತ್ಯ ಹೇಳಿದ್ದಕ್ಕೆ ಶಿಕ್ಷೆ ಅನುಭವಿಸುವಂತಾಗಿದೆ. ನಿಜಕ್ಕೂ ಇದು ದುರಂತ ಮತ್ತು ಖಂಡನೀಯ. ರಾಹುಲ್ ಗಾಂಧಿ ತಮ್ಮ ನಡೆ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರವಾಸಿಗರಿಗೆ ದರ ಏರಿಕೆ ಶಾಕ್‌ – ರಂಗನತಿಟ್ಟು ಪಕ್ಷಿಧಾಮದಲ್ಲಿ ಟಿಕೆಟ್‌ ದರ ಹೆಚ್ಚಳ

ದೇಶಕ್ಕೆ ಸುಳ್ಳು ಹೇಳಿದ ರಾಹುಲ್
ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರ ಬಳಿ ಇರುವುದೆಲ್ಲ ಸುಳ್ಳಿನ ಕಂತೆಗಳು. ರಾಹುಲ್ ಬಳಿಯಿರುವ ದಾಖಲೆಗಳೆಲ್ಲ ರಾಜ್ಯ ಮುಖ್ಯ ಚುನಾವಣಾ ಆಯುಕ್ತರು ಕೊಟ್ಟ ದಾಖಲೆಗಳಲ್ಲ. ದೇಶದ ಜನರಿಗೆ ರಾಹುಲ್ ಗಾಂಧಿ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಒಂದೂ ಆಕ್ಷೇಪಣೆ ಸಲ್ಲಿಸಿಲ್ಲ
ಕರ್ನಾಟಕದಲ್ಲಿ ಚುನಾವಣಾ ಆಯೋಗ 27 ಅಕ್ಟೋಬರ್‌ಗೆ ಕರುಡು ವೋಟರ್ ಲಿಸ್ಟ್ ಕೊಟ್ಟಿದೆ. ಜನವರಿ ತಿಂಗಳಲ್ಲಿ ಅಂತಿಮ ಮತದಾರರ ಪಟ್ಟಿ ಕೊಟ್ಟಿದೆ. ಹಾಗಿದ್ದರೂ ಕಾಂಗ್ರೆಸ್ ಪಕ್ಷ ಯಾವುದೇ ಒಂದು ಆಕ್ಷೇಪಣೆಯನ್ನೂ ಸಲ್ಲಿಸಿಲ್ಲ. ಎಲ್ಲಾ ಅಭ್ಯರ್ಥಿಗಳು, ಪಕ್ಷದವರು ಅದನ್ನು ಸ್ವೀಕರಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜಣ್ಣ ವಜಾ ಹಿಂದೆ ಮಹಾನಾಯಕನ ಪಾತ್ರ ಇದೆ: ರಾಜುಗೌಡ ಹೊಸಬಾಂಬ್

ಇನ್ನು ಡೋರ್ ನಂಬರ್ 35ರ ಒಂದೇ ಕೊಠಡಿಯ ಮನೆಯಿಂದ 80 ಜನ ಮತ ಚಲಾಯಿಸಿದ್ದಾರೆ ಎಂಬ ಆರೋಪ ರಾಹುಲ್ ಗಾಂಧಿ ಮಾಡಿದ್ದಾರೆ. ಆದರೆ, ಇವರಿಗೆ ವಾಸ್ತವದ ಅರಿವೇ ಇಲ್ಲ. ಸತ್ಯಾಂಶ ಏನೆಂಬುದನ್ನು ತಿಳಿಯುವ ಕನಿಷ್ಠ ಪ್ರಯತ್ನವನ್ನೂ ಮಾಡಿಲ್ಲ ಎಂದು ಟೀಕಿಸಿದ್ದಾರೆ.

`35′ ಒಂದೇ ರೂಮ್ ಅಲ್ಲ
`35’ರಲ್ಲಿ ಇರುವುದು ಒಂದೇ ಒಂದು ರೂಮ್ ಅಲ್ಲ. ಒಂದೇ ನಂಬರ್‌ನಲ್ಲಿ ಚಿಕ್ಕ ಚಿಕ್ಕ ಮನೆಗಳಿರುವ ಒಂದು ದೊಡ್ಡ ವಟಾರ. ಅಲ್ಲಿನ ವಿವಿಧ ಕುಟುಂಬಗಳಲ್ಲಿ 80 ಜನ ಮತದಾರರಿದ್ದರು. ಇದನ್ನು ಸ್ವತಃ ಆ ಕಟ್ಟಡದ ಮಾಲೀಕರೂ ಸ್ಪಷ್ಟಪಡಿಸಿದ್ದಾರೆ. ರಾಹುಲ್ ಗಾಂಧಿ ಇಂಥ ಸತ್ಯ ಸಂಗತಿ ಮರೆ ಮಾಚಿ ದೇಶದ ಜನರೆದುರು ಬರೀ ಸುಳ್ಳನ್ನೇ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

TAGGED:congresskarnatakaKN RajannanewdelhiPralhad JoshiRahul Gandhiಕರ್ನಾಟಕಕಾಂಗ್ರೆಸ್ಪ್ರಹ್ಲಾದ್ ಜೋಶಿರಾಹುಲ್ ಗಾಂಧಿ
Share This Article
Facebook Whatsapp Whatsapp Telegram

Cinema news

Rashika
ರಾಶಿಕಾ ಹೇಳೋ ಆ 5 ಫೈನಲಿಸ್ಟ್‌ಗಳ್ಯಾರು?
Cinema Districts Karnataka Latest Sandalwood Top Stories
Allu Arjun Lokesh Kanagaraj
ಅಲ್ಲು ಅರ್ಜುನ್, ಲೋಕೇಶ್ ಕಾಂಬಿನೇಷನ್ ಅದ್ಧೂರಿ ಬಜೆಟ್ ಚಿತ್ರ..!
Cinema Latest South cinema Top Stories
yash
ನಟ ಯಶ್ ಬರ್ತಡೇಗೆ ರಸ್ತೆಯಲ್ಲಿ ಬ್ಯಾನರ್ ಹಾಕಿದ್ದಕ್ಕೆ FIR
Bengaluru City Cinema Districts Karnataka Latest Main Post Sandalwood
YASH 5
ಮುಂಬೈ ಏರ್‌ಪೋರ್ಟ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ರಾಕಿಭಾಯ್
Cinema Sandalwood

You Might Also Like

Upendra Dwivedi
Latest

ಭಾರತ, ಪಾಕ್‌ ಗಡಿ ಬಳಿ 2, ಎಲ್‌ಒಸಿಯಲ್ಲಿ 6 ಉಗ್ರರ ಶಿಬಿರಗಳು ಸಕ್ರಿಯ: ಜನರಲ್ ಉಪೇಂದ್ರ ದ್ವಿವೇದಿ

Public TV
By Public TV
14 minutes ago
rahul gandhi siddaramaiah dk shivakumar 1
Latest

ಸಿಎಂ, ಡಿಸಿಎಂ ಜೊತೆ ರಾಹುಲ್ ಪ್ರತ್ಯೇಕ ಮಾತುಕತೆ – ತಿಂಗಳಾಂತ್ಯಕ್ಕೆ ದೆಹಲಿಗೆ ಬುಲಾವ್ ಭರವಸೆ

Public TV
By Public TV
41 minutes ago
Yellow Line Metro
Bengaluru City

ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಸಂಕ್ರಾಂತಿಯಂದು ಟ್ರ್ಯಾಕ್‌ಗೆ 7ನೇ ರೈಲು

Public TV
By Public TV
2 hours ago
Janardhana Reddy 2
Bellary

ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮತ್ತೆ ಗಣಿ ಸಂಕಷ್ಟ 

Public TV
By Public TV
2 hours ago
supreme Court 1
Court

ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಅಪರಾಧಗಳ ತನಿಖೆಗೆ ಪೂರ್ವಾನುಮತಿ ಕಡ್ಡಾಯ – ಸೆಕ್ಷನ್ 17Aಯ ಸಾಂವಿಧಾನಿಕ ಸಿಂಧುತ್ವ ಬಗ್ಗೆ ಸುಪ್ರೀಂ ವಿಭಜಿತ ತೀರ್ಪು

Public TV
By Public TV
3 hours ago
sabarimala kerala karnataka
Chikkamagaluru

ಕೇರಳಿಗರ ಕ್ಯಾತೆ; ಕರ್ನಾಟಕದ ಮಾಲಾಧಾರಿಗಳ ವಾಹನಗಳನ್ನು 100 ಕಿಮೀ ದೂರದಲ್ಲೇ ತಡೆದ ಕೇರಳ ಸರ್ಕಾರ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?