ಚಿಕ್ಕಬಳ್ಳಾಪುರ: ಸಿಎಂ ಸಿದ್ದರಾಮಯ್ಯ (Siddaramaiah) ಅವರಿಂದು 16ನೇ ಬಾರಿ ಬಜೆಟ್ ಮಂಡಿಸುವ ಮೂಲಕ ದಾಖಲೆಯ ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಜನ ಸಹ ಈ ಬಾರಿಯ ಬಜೆಟ್ ನಲ್ಲೂ ಸಾಕಷ್ಟು ನೀರಿಕ್ಷೆಗಳನ್ನ ಇಟ್ಟುಕೊಂಡಿದ್ದು ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Advertisement
ಚಿಕ್ಕಬಳ್ಳಾಪುರ ಜಿಲ್ಲೆಗೆ ಸಿಕ್ಕಿದ್ದೇನು..?
1. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಡಿ ಚಿಕ್ಕಬಳ್ಳಾಪುರದಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆ ಸ್ಥಾಪನೆ.
2. ಚಿಂತಾಮಣಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಘಟಕ 150 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ.
3. ಗೌರಿಬಿದನೂರು ಶಿಕ್ಷಣ ತಜ್ಞ ಡಾ.ಹೆಚ್.ಎನ್ ನರಸಿಂಹಯ್ಯ ಪ್ರಾಧಿಕಾರ ರಚನೆ- ವ್ಯಾಸಂಗ ಮಾಡಿದ ಶಾಲೆಯ ಉನ್ನತೀಕರಣ.
4. ಶಿಡ್ಲಘಟ್ಟ ಹಾಗೂ ರಾಮನಗರ ರೇಷ್ಮಗೂಡು ಮಾರುಕಟ್ಟೆಯ 2ನೇ ಹಂತದ ಕಾಮಗಾರಿಗೆ 250 ಕೋಟಿ ರೂ. ಅನುದಾನ.
5. ನೂತನ ಚೇಳೂರು ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ.
6. ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಹಾಗೂ ಚೇಳೂರು ನೂತನ ತಾಲೂಕುಗಳಲ್ಲಿ ಪ್ರಜಾಸೌಧ ನಿರ್ಮಾಣ ಮಾಡಲು ಕ್ರಮ.
7. ಹೆಚ್.ಎನ್ ವ್ಯಾಲಿ ಯೋಜನೆ ವಿಸ್ತರಣೆಗೆ 70 ಕೋಟಿ ರೂ. ಅನುದಾನ.
Advertisement
Advertisement
ಚಿಕ್ಕಬಳ್ಳಾಪುರ ಜಿಲ್ಲೆಯ ನೀರಿಕ್ಷೆಗಳು ಇದ್ದದ್ದು ಏನು..?
1. ಅಂತಾರಾಷ್ಟ್ರೀಯ ಹೂವಿನ ಮಾರುಕಟ್ಟೆಗೆ ಅನುದಾನ ನಿರೀಕ್ಷೆಯಿತ್ತು. ಆದ್ರೆ ಪಿಪಿಪಿ ಮಾಡೆಲ್ ಎಂಬುದಾಗಿ ಘೋಷಣೆ ಮಾಡಲಾಗಿದೆ.
2. ಬಾಗೇಪಲ್ಲಿಯ ಗಂಟಲಮಲ್ಲಮ್ಮ ಜಲಾಶಯದ ಡ್ಯಾಂ ನಿರ್ಮಾಣಕ್ಕೆ ಅನುದಾನ ನಿರೀಕ್ಷೆ ಇತ್ತು, ಅನುದಾನದ ಬಗ್ಗೆ ಉಲ್ಲೇಖವಿಲ್ಲ.
3. ಶಿಡ್ಲಘಟ್ಟದಲ್ಲಿ ಹೈಟೆಕ್ ಸಿಲ್ಕ್ ಮಾರುಕಟ್ಟೆಗೆ ಅನುದಾನ ನಿರೀಕ್ಷೆಯಿತ್ತು – ರಾಮನಗರ ಸೇರಿಸಿ 250 ಕೋಟಿ ಅನುದಾನ ನೀಡಲಾಗಿದೆ.
4. ಗೌರಿಬಿದನೂರಿನ ಹೆಚ್.ನರಸಿಂಹಯ್ಯ ಶಾಲೆ ಹಾಗೂ ಸ್ಮಾರಕ ಅಭಿವೃದ್ಧಿಗೆ ಅನುದಾನದ ನಿರೀಕ್ಷೆ – ಘೋಷಣೆ ಮಾಡಲಾಗಿದೆ.
5. ಹೆಚ್.ಎನ್.ವ್ಯಾಲಿ ಯೋಜನೆ ವಿಸ್ತರಣೆಗೆ ಅನುದಾನ 70 ಕೋಟಿ ಮೊತ್ತದ ಅನುದಾನ ಹಾಗೂ ತೃತೀಯ ಹಂತದ ಸಂಸ್ಕರಣೆ ಘೋಷಣೆ- ತೃತೀಯ ಹಂತದ ಸಂಸ್ಕರಣೆ ಇಲ್ಲ.
6. ಚಿಕ್ಕಬಳ್ಳಾಪುರ ನಂದಿ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡದ ಬಾಕಿ ಹಣ ಹಾಗೂ ಆಸ್ಪತ್ರೆಗೆ ಮೂಲಭೂತ ಸೌಕರ್ಯಗಳು, ಆಸ್ಪತ್ರೆ ಅರಂಭಕ್ಕೆ ಅನುದಾನ ಇಲ್ಲ.
7 ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನೂತನವಾಗಿ ಆರಂಭವಾಗಿರುವ ಸರ್ಕಾರಿ ಇಂಜನಿಯರಿಂಗ್ ಕಾಲೇಜಿಗೆ ಅನುದಾನದ ನಿರೀಕ್ಷೆ ಇತ್ತು ಮಾಡಲಾಗಿದೆ.
8. ಜಿಲ್ಲೆಯ ಕೆರೆಗಳ ಅಭಿವೃದ್ಧಿಗೆ ಅನುದಾನದ ನಿರೀಕ್ಷೆ, ಶಾಶ್ವತ ನೀರಾವರಿ ಯೋಜನೆ ಜಾರಿ ವಿಚಾರ ಪ್ರಸ್ತಾಪ ಇಲ್ಲ.
Advertisement
ಜಿಲ್ಲೆಗೆ ಬಜೆಟ್ ನಲ್ಲಿ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿರುವ ಶಾಶ್ವತ ನೀರಾವರಿ ಹೋರಾಟದ ಆಧ್ಯಕ್ಷ ಆರ್. ಆಂಜನೇಯರೆಡ್ಡಿ, ಬಯಲುಸೀಮೆಗೆ ಶಾಶ್ವತ ನೀರಾವರಿ ಎಂಬುದಿನ್ನು ಮರೀಚಿಕೆ. ಅಂತರ್ಜಲ ಪಾತಾಳ ತಲುಪಿದೆ, ಕುಡಿಯುವ ನೀರಿನ ಮೂಲಗಳು ವಿಷಮಯವಾಗಿವೆ, ಆದರೂ ಎತ್ತಿನಹೊಳೆಯ ಭ್ರಮೆಯಿಂದ ಹೊರಬಾರದ, ಕೆಸಿ ವ್ಯಾಲಿ ಮತ್ತು ಹೆಚ್ ಎನ್ ವ್ಯಾಲಿ ಯೋಜನೆಗಳ ಮೂರನೇ ಹಂತದ ಶುದ್ಧೀಕರಣಕ್ಕೂ ಮುಂದಾಗದ, ಜೀವನಾಡಿಗಳಾದ ಕೆರೆ ಕುಂಟೆ ಕಾಲುವೆಗಳ ಸಮಗ್ರ ಅಭಿವೃದ್ಧಿಗೂ ಗಮನ ಕೊಡದ, ಕೃಷ್ಣ-ಪೆನ್ನಾರ್ ನದಿ ಜೋಡಣೆ ಬಗ್ಗೆಯೂ ಚಕಾರವೆತ್ತದ ನಿರಾಶಾದಾಯಕ ಬಜೆಟ್ ಆಗಿದೆ ಎಂದು ವ್ಯಾಖ್ಯಾನ ಮಾಡಿದ್ದಾರೆ. ಮತ್ತೊಂದೆಡೆ ಸಂಸದ ಸುಧಾಕರ್ ಸಹ ಬಜೆಟ್ ನಲ್ಲಿ ಮಹಾ ಅನ್ಯಾಯ ಆಗಿದೆ ಅಂತ ಟೀಕಿಸಿದ್ದಾರೆ.