ನೀನು ಮುಸ್ಲಿಂ ಸಮುದಾಯಕ್ಕೆ ಕಳಂಕ ಎಂದವರಿಗೆ ನಟಿ ಸಾರಾ ಹೇಳಿದ್ದೇನು?

Public TV
1 Min Read
SARA ALI KHAN 1

ಹಿಂದೂ ದೇವಾಲಯಕ್ಕೆ (Temple) ಭೇಟಿ ನೀಡಿದರು ಎನ್ನುವ ಕಾರಣಕ್ಕಾಗಿ ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ (Saif Ali Khan) ಪುತ್ರಿ ಸಾರಾ ಅಲಿಖಾನ್ ಅವರನ್ನು ಕೆಲ ಸಂಪ್ರದಾಯವಾದಿಗಳು ತರಾಟೆಗೆ ತಗೆದುಕೊಂಡಿದ್ದರು. ನೀನು ಮುಸ್ಲಿಂ ಸಮುದಾಯಕ್ಕೆ ಕಳಂಕ ಎಂದು ಟೀಕಿಸಿದ್ದರು. ಪದೇ ಪದೇ ಹಿಂದೂ ದೇವಾಲಯಗಳಿಗೆ ಭೇಟಿ ನೀಡುತ್ತಿರುವುದನ್ನು ಆಕ್ಷೇಪಿಸಿದ್ದರು. ಇಂಥವರಿಗೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಸಾರಾ.

sara ali khan

ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ ವಿಚಾರವಾಗಿ ತಮ್ಮನ್ನು ಟ್ರೋಲ್ ಮಾಡುತ್ತಿದ್ದವರಿಗೆ ಸರಿಯಾಗಿಯೇ ಮಾತಿನ ಪೆಟ್ಟು ಕೊಟ್ಟಿರುವ ಸಾರಾ, ನೀವು ಎಷ್ಟೇ ಟ್ರೋಲ್ ಮಾಡಿದರೂ ನಾನು ಪದೇ ಪದೇ ದೇವಸ್ಥಾನಕ್ಕೆ ಹೋಗುತ್ತಲೇ ಇರುತ್ತೇನೆ ಎಂದಿದ್ದಾರೆ. ಇಂತಹ ಟ್ರೋಲ್ ಗಳಿಗೆ ಕೇರ್ ಮಾಡುವುದಿಲ್ಲ ಎಂದೂ ಅವರು ಹೇಳಿದ್ದಾರೆ. ನಾನು ಎಲ್ಲಿಗೆ ಹೋಗಬೇಕು ಅಥವಾ ಹೋಗಬಾರದು ಎಂದು ನಿರ್ಧರಿಸೋಕೆ ನೀವ್ಯಾರು ಎಂದು ಸಾರಾ ಮರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ನಿರಾಶ್ರಿತರ ಜೊತೆ ನಿಂತುಕೊಂಡು ನಟ ಕಿರಣ್ ರಾಜ್

sara ali khan

ಸಾರಾ ಅಲಿ ಖಾನ್ (Sara Ali Khan) ಮೊನ್ನೆ ಉಜ್ಜಯಿನಿಯಲ್ಲಿನ ಮಹಾಕಾಳೇಶ್ವರ ದೇವಸ್ಥಾನಕ್ಕೆ (Ujjain Mahakaleshwar) ಭೇಟಿ ನೀಡಿದ್ದರು. ವಿಕ್ಕಿ ಕೌಶಲ್, ಸಾರಾ ನಟನೆಯ ‘ಝರಾ ಹಟ್ಕೆ ಝರಾ ಬಚ್ಕೆ’ ರಿಲೀಸ್ ಬೆನ್ನಲ್ಲೇ ನಟಿ ದೇವರ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ತಮ್ಮ ಚಿತ್ರಕ್ಕೆ ಗೆಲುವು ತಂದುಕೊಡುವಂತೆ ಅವರು ಪ್ರಾರ್ಥಿಸಿದ್ದರು. ಸೈಫ್ ಪುತ್ರಿ ಸಾರಾ ಅವರು ಆಗಾಗ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಹೀಗೆ ಸುದ್ದಿ ಆಗುತ್ತಲೇ ಇರುತ್ತಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಅವರು ಕೇದಾರನಾಥಕ್ಕೆ ಹೋಗಿದ್ದರು.

 

ಸಾರಾ ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿರೋದ್ದಕ್ಕೆ ಕೆಲವರು ತಕರಾರು ತೆಗೆದು, ಇದೆಲ್ಲ ಪ್ರಚಾರದ ಗಿಮಿಕ್ ಎಂದು ವ್ಯಂಗ್ಯವಾಡಿದ್ದರು. ಸಾರಾ ಅಲಿ ಖಾನ್ ಹಿಂದೂ ಧರ್ಮಕ್ಕೆ ಬಂದ್ರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಇಂಥವರಿಗೆ ತಿರುಗೇಟು ನೀಡಿ ತಮ್ಮ ಪಾಡಿಗೆ ತಾವು ಸಿನಿಮಾ ಪ್ರಚಾರದಲ್ಲಿ ತೊಡಗಿದ್ದಾರೆ.

Share This Article