ನವದೆಹಲಿ: ನೇಪಾಳದಲ್ಲಿ 6.4 ತೀವ್ರತೆಯಲ್ಲಿ ಭೂಕಂಪನ (Earthquake) ಸಂಭವಿಸಿದ ಪರಿಣಾಮ ರಾಷ್ಟ್ರ ರಾಜಧಾನಿ ದೆಹಲಿ (Delhi) ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಭೂಕಂಪನದ ಅನುಭವವಾಗಿದೆ. ಭೂಕಂಪನದ ಅನುಭವವಾಗುತ್ತಿದ್ದಂತೆ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಒಂದೇ ತಿಂಗಳಲ್ಲಿ ದೆಹಲಿಯಲ್ಲಿ ಮೂರನೇ ಬಾರಿಗೆ ಭೂಮಿ ಕಂಪಿಸಿದ್ದು, ಆತಂಕಕ್ಕೂ ಕಾರಣವಾಗಿದೆ.
ದೆಹಲಿಯಲ್ಲಿ ಪದೇ ಪದೇ ಭೂಕಂಪನ ಯಾಕೆ ಎನ್ನುವ ಪ್ರಶ್ನೆ ಈಗ ಮೂಡಿದ್ದು, ಅದಕ್ಕೆ ತಜ್ಞರು ಉತ್ತರ ನೀಡಿದ್ದಾರೆ. ದೆಹಲಿ ಮತ್ತು ರಾಜಧಾನಿ ಪ್ರದೇಶದಲ್ಲಿ ಭೂಕಂಪನ ವಲಯ-IV ರಲ್ಲಿ ಕಂಡು ಬರುತ್ತದೆ. ಇದನ್ನು ಭಾರತೀಯ ಮಾನದಂಡಗಳ ಬ್ಯೂರೋ ಭೂಕಂಪನ ವಲಯ ನಕ್ಷೆಯ ಪ್ರಕಾರ ಹೆಚ್ಚಿನ ಭೂಕಂಪನ ಅಪಾಯದ ವಲಯವೆಂದು ಪರಿಗಣಿಸಲಾಗಿದೆ. ಈ ವಲಯ ಮಧ್ಯಮದಿಂದ ಹೆಚ್ಚಿನ ಮಟ್ಟದ ತೀವ್ರತೆಯೊಂದಿಗೆ ಭೂಕಂಪಗಳನ್ನು ಅನುಭವಿಸುವ ಸಂಭವ ಇದೆ ಎಂದು ತಜ್ಞರು ಹೇಳಿದ್ದಾರೆ. ಇದನ್ನೂ ಓದಿ: Nepal Earthquake: ಭೀಕರ ಭೂಕಂಪನಕ್ಕೆ ಬೆಚ್ಚಿಬಿದ್ದ ನೇಪಾಳ- 70 ಮಂದಿ ದುರ್ಮರಣ
Advertisement
Advertisement
ಈ ವರ್ಗೀಕರಣವು ಮುಖ್ಯವಾಗಿ ದೆಹಲಿಯ ಭೌಗೋಳಿಕ ಸ್ಥಾನದ ಮೇಲೆ ನಿರ್ಧರಿತವಾಗುತ್ತದೆ. ದೆಹಲಿ ಹಿಮಾಲಯ ಶ್ರೇಣಿಗಳಿಗೆ ಸಮೀಪದಲ್ಲಿದೆ. ಸರಿಸುಮಾರು 200-300 ಕಿಲೋಮೀಟರ್‌ಗಳ ಆಸುಪಾಸಿನಲ್ಲಿದೆ. ಭಾರತೀಯ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್‍ಗಳ ನಿರಂತರ ಘರ್ಷಣೆಯಿಂದಾಗಿ ಹಿಮಾಲಯವು ರೂಪುಗೊಂಡಿತು. ಈ ನಿರಂತರ ಟೆಕ್ಟೋನಿಕ್ ಚಟುವಟಿಕೆಯು ನಿಯಮಿತ ಕಂಪನಗಳಿಗೆ ಕಾರಣವಾಗುತ್ತದೆ. ಭೂಕಂಪಗಳು ಮತ್ತು ಭೂಕುಸಿತಗಳಂತಹ ಮರುಕಳಿಸುವ ನೈಸರ್ಗಿಕ ವಿಪತ್ತುಗಳಿಗೆ ಈ ಪ್ರದೇಶವನ್ನು ಕೇಂದ್ರ ಬಿಂದುವನ್ನಾಗಿ ಮಾಡುತ್ತದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
Advertisement
ಭೂಮಿಯ ಹೊರಪದರದ ಮೇಲಿನ ಪದರದಲ್ಲಿರುವ ಟೆಕ್ಟೋನಿಕ್ ಪ್ಲೇಟ್‍ಗಳ ಚಲನೆಯಿಂದ ನಡುಕಗಳು ಸಾಮಾನ್ಯವಾಗಿ ಉಂಟಾಗುತ್ತವೆ. ಈ ಪದರದಲ್ಲಿ ಹೆಚ್ಚಿನ ಚಟುವಟಿಕೆಗಳಿಂದ ಭೂಕಂಪನದ ಸಾಧ್ಯತೆಗಳು ಹೆಚ್ಚು. ಪ್ರದೇಶದ ಭೂಕಂಪನದ ಅಪಾಯವು ಪ್ರಾಥಮಿಕವಾಗಿ ಹಿಮಾಲಯದ ಟೆಕ್ಟೋನಿಕ್ ಪ್ಲೇಟ್ ಗಡಿಯ ಸಾಮೀಪ್ಯದೊಂದಿಗೆ ಸಂಬಂಧಿಸಿದೆ, ಭಾರತೀಯ ಪ್ಲೇಟ್ ಯುರೇಷಿಯನ್ ಪ್ಲೇಟ್‍ನೊಂದಿಗೆ ಡಿಕ್ಕಿ ಹೊಡೆಯುತ್ತದೆ ಇದು ದೆಹಲಿ ಮತ್ತು ಅದರ ನೆರೆಹೊರೆಯ ಪ್ರದೇಶಗಳು ಸೇರಿದಂತೆ ಉತ್ತರ ಭಾರತದಲ್ಲಿ ಗಮನಾರ್ಹ ಭೂಕಂಪನ ಚಟುವಟಿಕೆಗಳಿಗೆ ಘರ್ಷಣೆ ಕಾರಣವಾಗಿದೆ. ಇದೇ ಕಾರಣಕ್ಕಾಗಿ ನೇಪಾಳ, ಉತ್ತರಾಖಂಡ ಮತ್ತು ಪಕ್ಕದ ಹಿಮಾಲಯ ಪ್ರದೇಶವು ರಿಕ್ಟರ್ ಮಾಪಕದಲ್ಲಿ 8.5 ಕ್ಕಿಂತ ಹೆಚ್ಚು ತೀವ್ರತೆಯ ವಿನಾಶಕಾರಿ ಭೂಕಂಪಕ್ಕೆ ಒಳಗಾಗುತ್ತದೆ. ಹಿಮಾಲಯದ ಸಾಮೀಪ್ಯವು ದೆಹಲಿಯನ್ನು ವಲಯ IVರಲ್ಲಿ ಇರಿಸಿದ್ದು, ಹಿಮಾಲಯ ಪ್ರದೇಶವು ವಲಯ 5ರಲ್ಲಿ ಬರುತ್ತದೆ, ಇದು ಭೂಕಂಪಗಳಿಂದ ಹಾನಿಗೊಳಗಾಗುವ ಪ್ರದೇಶವಾಗಿ ಗುರುತಿಸಲಾಗಿದೆ.
Advertisement
ಭೌಗೋಳಿಕ ಅಂಶಗಳ ಹೊರತಾಗಿ ದೆಹಲಿ ವಿಶಿಷ್ಟ ಮಾದರಿಯು ದುರ್ಬಲತೆ ಭೂಕಂಪನಕ್ಕೆ ಕಾರಣವಾಗಿದೆ. ಹಲವಾರು ಬಹುಮಹಡಿ ಕಟ್ಟಡಗಳಿರುವ ಯಮುನಾ ಮತ್ತು ಹಿಂಡನ್ ನದಿಗಳ ದಡದಲ್ಲಿರುವ ಪ್ರದೇಶಗಳು ಹೆಚ್ಚು ಭೂಕಂಪನ-ಪೀಡಿತ ವಲಯಗಳಲ್ಲಿದೆ. ಹಳೆಯ ದೆಹಲಿಯ ಭಾಗಗಳು ಮತ್ತು ನದಿ ದಂಡೆಗಳಲ್ಲಿರುವ ಅನಧಿಕೃತ ಕಟ್ಟಡಗಳು ಈ ಅಪಾಯವನ್ನು ಹೆಚ್ಚಿಸುತ್ತವೆ.
ಭವಿಷ್ಯದಲ್ಲಿ ಈ ಪ್ರದೇಶದಲ್ಲಿ ಗಮನಾರ್ಹ ಭೂಕಂಪನದ ಸಂಭಾವ್ಯತೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದು, ಜನಸಾಂದ್ರತೆಯಿರುವ ನಗರ ಪ್ರದೇಶ, ಹಳೆಯದಾದ ಕಟ್ಟಡಗಳು ತೀವ್ರವಾಗಿ ಹಾನಿಗೊಳಗಾಗುವ ಭೀತಿ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಗಡಿ ದಾಟಿ ಅಕ್ರಮವಾಗಿ ಅಮೆರಿಕ ಪ್ರವೇಶ – ಒಂದು ವರ್ಷದಲ್ಲಿ 96,917 ಮಂದಿ ಭಾರತೀಯರ ಬಂಧನ
Web Stories