ಬೆಂಗಳೂರು: ಸಿಸಿಬಿ ಡ್ರಿಲ್ ತಪ್ಪಿಸಿಕೊಳ್ಳಲು ಬಾಯಲ್ಲಿ ನೊರೆ ಸೃಷ್ಟಿಸಿಕೊಂಡು ಮೂರ್ಛೆ ರೋಗದ ನಾಟಕವಾಡಿದ್ದ ವಂಚನೆ ಪ್ರಕರಣದ ಆರೋಪಿ ಚೈತ್ರಾ ಕುಂದಾಪುರ (Chaitra Kundapura) ಆಸ್ಪತ್ರೆ ಎಪಿಸೋಡ್‌ಗೆ ಬ್ರೇಕ್ ಬಿದ್ದಿದೆ. 3 ದಿನಗಳಿಂದ ವಿಕ್ಟೋರಿಯಾ ಆಸ್ಪತ್ರ‍್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಚೈತ್ರಾಳನ್ನ ಸೋಮವಾರ ಡಿಸ್ಚಾರ್ಜ್ ಮಾಡಲಾಗಿದೆ.
ಆಸ್ಪೆçಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ಪೊಲೀಸರು ಸಿಸಿಬಿ (CCB Police) ಕಚೇರಿಗೆ ಕರೆದೊಯ್ದಿದ್ದರು. ಇದೀಗ ಚೈತ್ರಾ ಆರೋಗ್ಯವಾಗಿದ್ದರು ಕೂಡ ತನಿಖಾಧಿಕಾರಿಗಳ ಮುಂದೆ ಮೌನಂ ಸಮ್ಮತ್ತಿ ಲಕ್ಷಣಂ ಎಂಬಂತೆ ಚೈತ್ರಾ ಮೌನ್ಯಕ್ಕೆ ಜಾರಿದ್ದಾಳೆ. ತನಿಖಾಧಿಕಾರಿಗಳ ಮುಂದೆ ಜಪ್ಪಯ್ಯ ಅಂದರೂ ಬಾಯ್ಬಿಡ್ತಿಲ್ಲ. ತನಿಖಾಧಿಕಾರಿಗಳ ಪ್ರಶ್ನೆಗೆ ಮೌನವೇ ಚೈತ್ರಾಳ ಉತ್ತರವಾಗಿದ್ದು, ಸುಸ್ತಾಗಿರುವಂತೆ ನಾಟಕವಾಡಲು ಶುರು ಮಾಡಿಕೊಂಡಿದ್ದಾಳೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ಮೇಲೆ ಮತ್ತೊಂದು FIR – ಸನಾತನ ಧರ್ಮ ಬಟ್ಟೆ ಮಳಿಗೆ ಪ್ರಕರಣದಲ್ಲೂ ವಂಚನೆ
ಚೈತ್ರಾ ಮೌನಕ್ಕೆ ಜಾರಿರೋದ್ರಿಂದ ಉತ್ತರಿಸುವಂತೆ ಪ್ರಶ್ನಾವಳಿಗಳನ್ನ ಪಟ್ಟ ಮಾಡಿ ಸಿಸಿಬಿ ಕೊಟ್ಟಿದೆ. ರಿಕವರಿ ಮಾಡಿದ ಹಣ ಹೊರತುಪಡಿಸಿ ಉಳಿದ ಹಣದ ಎಲ್ಲಿ? ಸ್ವಾಮೀಜಿಗೆ ಎಷ್ಟು ಹಣ ಕೊಟ್ಟಿದ್ದಿರಿ? ಹೀಗೆ 30ಕ್ಕೂ ಹೆಚ್ಚು ಪ್ರಶ್ನಾವಳಿಗಳನ್ನ ಮಾಡಿ ಚೈತ್ರಾಗೆ ಉತ್ತರಿಸುವಂತೆ ಸೂಚಿಸಲಾಗಿದೆ. ಪ್ರಶ್ನಾವಳಿಗೂ ಸರಿಯಾಗಿ ಉತ್ತರ ಕೊಡಲು ನಿರಾಕರಿಸಿದ್ರೆ ಉಳಿದ ಆರೋಪಿಗಳ ಸಮ್ಮುಖದಲ್ಲಿ ವಿಚಾರಣೆ ಮಾಡಲು ಸಿಸಿಬಿ ತಯಾರಿ ಮಾಡಿಕೊಂಡಿದೆ. ಇದನ್ನೂ ಓದಿ: ಚೈತ್ರಾ ಕುಂದಾಪುರಗೆ ಪಿಟ್ಸ್ ಬಂದಿಲ್ಲ, ನೊರೆ ಅವರೇ ಮಾಡಿಕೊಂಡಿರೋದು: ಡಾ.ದಿವ್ಯಪ್ರಕಾಶ್
ನಿನ್ನೆಯಷ್ಟೇ PMSSY ಆಸ್ಪತ್ರೆಯ ಸ್ಪೆಷಲ್ ಆಫೀಸರ್ ದಿವ್ಯ ಪ್ರಕಾಶ್ ಮಾತನಾಡಿ, ಎಲ್ಲ ತಪಾಸಣೆಯಲ್ಲೂ ನಾರ್ಮಲ್ ಇದೆ. ಇಸಿಜಿ ಕೂಡ ನಾರ್ಮಲ್ ಇದೆ. ನ್ಯೂರಾಲಾಜಿಸ್ಟ್, ಮನೋ ವೈದ್ಯರು ತಪಾಸಣೆ ಮಾಡಿದ್ದಾರೆ. ಎಲ್ಲರೂ ಕೂಡ ಸಮಸ್ಯೆ ಇಲ್ಲ. ಪಿಟ್ಸ್ ಬಗ್ಗೆ ಏನೂ ಕಂಡು ಬಂದಿಲ್ಲ, ನೊರೆಯನ್ನು ಅವರೇ ಸೃಷ್ಟಿ ಮಾಡಿಕೊಂಡಿದ್ದಾರೆ. ವೈದ್ಯರ ಸ್ಪಷ್ಟನೆ ಬಳಿಕ ಆಸ್ಪತ್ರೆ ಹಿಂಭಾಗದಿಂದ ಸಿಸಿಬಿ ಪೊಲೀಸರು ಚೈತ್ರಾಳನ್ನ ಸಿಸಿಬಿ ಕಚೇರಿಗೆ ಕರೆದೊಯ್ದಿದ್ದರು.
Web Stories