ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ಏರಿಕೆ ಆದರೆ ಬೆಂಗಳೂರು ಹಾಟ್ ಸ್ಪಾಟ್ ಆಗುವ ಭಯದ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಕಳೆದ ಮೂರು ಅಲೆಗಳಲ್ಲೂ ಕರ್ನಾಟಕದ ಒಟ್ಟು ಕೊವಿಡ್ (COVID 19) ಕೇಸ್‍ಗಳ ಪಟ್ಟಿಯಲ್ಲಿ ಬೆಂಗಳೂರಿನದ್ದು ಬಹುಪಾಲು. ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣ ಮಾಡಲು ಮತ್ತು ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಸಭೆ ಮೇಲೆ ಸಭೆ ಮಾಡುತ್ತಿದೆ. ಬಿಬಿಎಂಪಿ (BBMP) ಅಧಿಕಾರಿಗಳ ಜೊತೆ ಬುಧವಾರ ಕೂಡ ಆರೋಗ್ಯ ಸಚಿವರು ಸಭೆ ಮಾಡಿದ್ದಾರೆ.
Advertisement
Advertisement
ಬೆಂಗಳೂರಿನಲ್ಲಿ (Bengaluru) ಹಲವು ಮುನ್ನೆಚ್ಚರಿಕಾ ಕ್ರಮ ವಹಿಸಲು ಮುಂದಾಗಿದೆ. ಯಾಕಂದ್ರೆ ಬುಧವಾರ ರಾಜ್ಯದಲ್ಲಿ ಒಟ್ಟು 22 ಕೊರೊನಾ ಪ್ರಕರಣ ದಾಖಲಾಗಿದ್ದು, ಬೆಂಗಳೂರಲ್ಲೇ 19 ಕೇಸ್‍ಗಳು ವರದಿಯಾಗಿದೆ. ಹೀಗಾಗಿ ರಾಜಧಾನಿ ಬೆಂಗಳೂರು ಕೊರೊನಾ ಹಾಟ್‍ಸ್ಪಾಟ್ ಆಗುತ್ತಾ..? ಅನ್ನೋ ಅನುಮಾನ ಮೂಡಿದೆ.
Advertisement
ಕೊರೊನಾ ಮುನ್ನೆಚ್ಚರಿಕಾ ಕ್ರಮ: ಹೋಂ ಐಸೋಲೇಷನ್ (Home Isolation) ನಿಯಮ ಕಟ್ಟುನಿಟ್ಟಾಗಿ ಪಾಲಿಸುವುದು. ಕ್ವಾರಂಟೈನ್ ಆದವರ ಮೇಲೆ ಹೆಚ್ಚು ನಿಗಾ ಇಡುವುದು. ಬೆಂಗಳೂರಿನಲ್ಲಿ ಕೋವಿಡ್ ಟೆಸ್ಟ್ ಹೆಚ್ಚಿಸುವುದು. ಐಎಲ್‍ಐ, ಸಾರಿ ಕೇಸ್‍ಗಳನ್ನ ಪತ್ತೆ ಮಾಡಿ ಟೆಸ್ಟ್ ಮಾಡುವುದು. ನೆರೆ ರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ಇಡುವುದು ಹಾಗೂ ಆಕ್ಸಿಜನ್, ವೆಂಟಿಲೇಟರ್ ಹಾಗೂ ವೈದ್ಯಕೀಯ ಉಪಕರಣ ಸಿದ್ಧ ಪಡಿಸುವುದು.
Advertisement