ಬೆಂಗಳೂರು : ನೆಲಮಂಗಲದಲ್ಲಿ ನಿರ್ಮಾಣ ಆಗಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಕೇಂದ್ರ ಕ್ಷೇಮವನವನ್ನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟನೆ ಮಾಡಿದ್ದಾರೆ. 20 ಎಕರೆ ವಿಶಾಲವಾದ ಜಾಗದಲ್ಲಿ ಕ್ಷೇಮವನ ನಿರ್ಮಾಣವಾಗಿದ್ದು, ಸಂಪೂರ್ಣ ಪ್ರಕೃತಿ ಚಿಕಿತ್ಸೆ ಇಲ್ಲಿ ಸಿಗಲಿದೆ.
ಕ್ಷೇಮವನದ ವಿಶೇಷತೆ ಏನು?
20 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿದೆ ಕ್ಷೇಮವನ. ನಿಸರ್ಗದತ್ತ ಪುನರುಜ್ಜೀವನ ಸೌಲಭ್ಯಗಳು ಇಲ್ಲಿ ಇವೆ. ಈ ಕೇಂದ್ರದ ವಿನ್ಯಾಸವನ್ನ ತಜ್ಞ ಮಹೇಶ್ ಡಿಯೋಫೋಡೆ ಮಾಡಿದ್ದಾರೆ. ಪರಿಕಲ್ಪನೆ ವಿನ್ಯಾಸವನ್ನ ಆಯುಷ್ ಕಾಸ್ಲಿವಾಲ್ ಅವರು ಮಾಡಿದ್ದಾರೆ.
Advertisement
Advertisement
ಪ್ರಾಚೀನ ವಾಸ್ತು ವಿನ್ಯಾಸಗಳಿಗೆ ಅನುಗುಣವಾದ ಬಣ್ಣ, ವಿನ್ಯಾಸ ಮತ್ತು ಸಂರಚನೆಗಳು ರೂಪುಗೊಂಡಿದೆ. ಆಮೆ, ನಂದಿ, ಗರುಡ ಸಂಕೇತಿಸುವ ವಿನ್ಯಾಸದ ಕಟ್ಟಡಗಳು ನಿರ್ಮಾಣ ಮಾಡಲಾಗಿದೆ. ಸಮುದ್ರ, ಭೂಮಿ, ಮತ್ತು ಆಕಾಶ ತತ್ವದ ನೆಲೆಯಲ್ಲಿ ಸಂರಚಿತವಾಗಿದೆ. ಇದನ್ನೂ ಓದಿ: ಬೆಂಗಳೂರಿಗೆ ಇನ್ಮುಂದೆ ಸಾಂಪ್ರದಾಯಿಕ ವೈದ್ಯ ಪದ್ಧತಿ ಹಬ್ ಆಗೋ ಅವಕಾಶ- ಯೋಗಿ ಆದಿತ್ಯನಾಥ್
Advertisement
ಯೋಗ, ಧ್ಯಾನಕ್ಕೆ ವಿನೂತನ ಕಟ್ಟಡ ʼಕೂರ್ಮಾʼ ನಿರ್ಮಾಣ ಮಾಡಲಾಗಿದೆ. ಕೇಂದ್ರವು ಎಸಿ ಈಜುಕೊಳದ ಸೌಲಭ್ಯ ಒಳಗೊಂಡಿದೆ. ಕೂರ್ಮಾವತಾರದ ಪೌರಾಣಿಕ ಪರಿಕಲ್ಪನೆಯಲ್ಲಿ ಈ ಕಟ್ಟಡ ಅರಳಿದೆ. ನಂದಿ ಹೆಸರಿನ ಕಟ್ಟಡ ಶಾಖೆ ಊಟದ ವಿಭಾಗವಾಗಿದೆ. ಡಯಟ್ ಮಾದರಿಗಳು 25 ಬಗೆಯ ಥೆರಪಿ ಶುಶ್ರೂಷಾ ಕ್ರಮಗಳನ್ನು ಒಳಗೊಂಡಿದೆ.
Advertisement
ಕ್ಷೇಮವನ 400 ಜನರಿಗೆ ಶುಶ್ರೂಷೆ ನೀಡಬಲ್ಲದು. 86 ವಿಶೇಷ ಕೊಠಡಿಗಳು, 30 ಡಿಲಕ್ಸ್ ವಿಂಗ್ ಗಳು ಇವೆ.16 ಕಾಟೇಜ್ ಗಳು ಇವೆ. ನಿಸರ್ಗ, ಮೌನ ಮತ್ತು ಸರಳತೆ ಕೇಂದ್ರೀಕರಿಸಿಕೊಂಡ ಜೈವಿಕ ಮೌಲಿಕತೆಯನ್ನ ಈ ಕೇಂದ್ರ ಬಿಂಬಿಸುತ್ತದೆ. ಇದನ್ನೂ ಓದಿ: ಕ್ಷೇಮವನ ಜೀವನದ ಸೂತ್ರವಾಗಲಿ: ಬೊಮ್ಮಾಯಿ
5 ಬಗೆಯ ಶುಶ್ರೂಷಾ ವಿಧಾನ ಇಲ್ಲಿ ಲಭ್ಯವಿದೆ.
1.ಮನಸ್ಸು ಮತ್ತು ದೈಹಿಕ ಆರೋಗ್ಯ
2.ಶಯನಾರೋಗ್ಯ
3.ಪೌಷ್ಟಿಕ ಆಹಾರ
4.ಗಟ್ ಆರೋಗ್ಯ
5.ಶಕ್ತಿ ಔಷಧಿ