ರಾಮನಗರ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಮಕ್ಕಳಂತೆ ಹಠ ಮಾಡ್ತಾರೆ, ಸರಿಯಾಗಿ ಊಟಾನೆ ಮಾಡಲ್ಲ ಎಂದು ಪತ್ನಿ ಅನಿತಾ ಕುಮಾರಸ್ವಾಮಿ (Anita Kumaraswamy) ಹೇಳಿದ್ದಾರೆ.
ಹೆಚ್ಡಿಕೆ ಅವರ ಆರೋಗ್ಯ (Health) ವಿಚಾರ ಕುರಿತು ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಊಟದ ವಿಚಾರದಲ್ಲಿ ಮಕ್ಕಳಂತೆ ಹಠ ಮಾಡುತ್ತಾರೆ. ಬರೀ ಮೊಸರನ್ನ ತಿನ್ನುತ್ತಾರೆ. ಹೆಚ್ಚು ನೀರು ಕುಡಿಯಲ್ಲ, ಸರಿಯಾಗಿ ಊಟ ಮಾಡಲ್ಲ. ಹೀಗಾಗಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಾಗಿ ಒಂದು ದಿನ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸದ್ಯ ಸ್ವಲ್ಪ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ 10 ಪರ್ಸೆಂಟ್ ಕೆಲಸ ಮಾಡಿದ್ರೆ ವೋಟ್ ಕೇಳೋ ಅವಶ್ಯತೆ ಇರ್ತಿರಲಿಲ್ಲ : ಶಾ ಗುಡುಗು
Advertisement
Advertisement
ಚನ್ನಪಟ್ಟಣದಲ್ಲಿ (Channapatna Constituency) ಹೆಚ್ಡಿಕೆ ಪರ ಪ್ರಚಾರ ಮಾಡಿದ ಅನಿತಾ ಕುಮಾರಸ್ವಾಮಿ, ಕ್ಷೇತ್ರದ ಹಲವು ಗ್ರಾಮಗಳಿಗೆ ಭೇಟಿ ನೀಡಿದರು. ಈ ವೇಳೆ ಮಾತನಾಡುತ್ತಾ, ನಾನು ಚನ್ನಪಟ್ಟಣದಾದ್ಯಂತ ಪ್ರಚಾರ ಮಾಡುತ್ತಿದ್ದು, ಕ್ಷೇತ್ರದ ಜನರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಇಲ್ಲಿನ ಜನ ಬುದ್ಧಿವಂತರಾಗಿದ್ದು, ಕುಮಾರಸ್ವಾಮಿ ಅವರನ್ನ ಅರ್ಥ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ಅವರು ಸಿಎಂ ಕ್ಯಾಂಡಿಡೇಟ್, ಅವರನ್ನ ಗೆಲ್ಲಿಸಿದ್ರೆ ಕ್ಷೇತ್ರಕ್ಕೆ ಅನ್ಲಿಮಿಟೆಡ್ ಅನುದಾನ ಸಿಗಲಿದೆ. ಮತ್ತಷ್ಟು ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದು ಭರವಸೆ ನೀಡಿದ್ದಾರೆ.
Advertisement
Advertisement
ಚನ್ನಪಟ್ಟಣಕ್ಕೆ ಪ್ರಧಾನಿ ಮೋದಿ ಆಗಮನ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ದೇಶದ ಪ್ರಧಾನಿಯಾಗಿರುವುದರ ಬಗ್ಗೆ ಗೌರವ ಇದೆ. ಅವರು ಪ್ರಚಾರ ಮಾಡಿದರೂ ಜನತೆಗೆ ಎಲ್ಲಾ ಗೊತ್ತಿದೆ. ಯಾರನ್ನು ಆಯ್ಕೆ ಮಾಡಬೇಕೆಂಬುದರ ಬಗ್ಗೆ ಜನ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಹಾಲಿ, ಮಾಜಿ ಶಾಸಕರ ಮಧ್ಯೆ ಜನಮನ ಗೆದ್ದವರ್ಯಾರು? ಹೇಗಿದೆ ಮೊಳಕಾಲ್ಮೂರು ಅಖಾಡ?