ಮೊಗ್ಗಿನ ಮನಸು ಚಿತ್ರಕ್ಕೂ ಲವ್ 360 ಸಿನಿಮಾಗೂ ಇರೋ ಸಂಬಂಧ ಏನು?

Public TV
2 Min Read
love 360 7

ನ್ನಡದ ಹೆಸರಾಂತ ನಿರ್ದೇಶಕ ಶಶಾಂಕ್ ಸದ್ದಿಲ್ಲದೇ ತಮ್ಮ ‘ಲವ್ 360’ ಹೊಸ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಕ್ಯೂಟ್ ಆಗಿರೋ ಲವ್ ಸ್ಟೋರಿಯನ್ನು ಸಿನಿಮಾವಾಗಿಸಿರುವ ಅವರು ಈ ಸಿನಿಮಾದಲ್ಲೂ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದಾರೆ. ಸಿನಿಮಾದ ನಾಯಕ ತನ್ನ ಹುಡುಗಿಗಾಗಿ 360 ಡಿಗ್ರಿ ಯೋಚಿಸುವಂತಹ ಕಥಾ ಹಂದರವನ್ನು ಈ ಚಿತ್ರ ಹೊಂದಿದ್ದು, ಇಬ್ಬರು ಹೊಸ ಕಲಾವಿದರು ಈ ಸಿನಿಮಾದ ಮೂಲಕ ಚಿತ್ರೋದ್ಯಮಕ್ಕೆ ಪರಿಚಯವಾಗುತ್ತಿದ್ದಾರೆ. ಇದನ್ನೂ ಓದಿ : ನಾಗಿಣಿ 2 ಧಾರಾವಾಹಿಗೆ ಬಂದ ತಿಥಿ ಖ್ಯಾತಿಯ ಸೆಂಚ್ಯುರಿ ಗೌಡ, ಗಡ್ಡಪ್ಪ

love 360 6 1

ಶಶಾಂಕ್ ಅಂದಾಕ್ಷಣ ಥಟ್ಟನೆ ನೆನಪಾಗುವ ಚಿತ್ರ ಮೊಗ್ಗಿನ ಮನಸು. ಬಾಕ್ಸ್ ಆಫೀಸಿನಲ್ಲಿ ಭಾರೀ ಸದ್ದು ಮಾಡಿದ ಚಿತ್ರವಿದು. ಶತದಿನೋತ್ಸವ ಕಂಡ ಎವರ್ ಗ್ರೀನ್ ಸಿನಿಮಾ. ಅನೇಕ ಕಲಾವಿದರ ವೃತ್ತಿ ಬದುಕಿಗೆ ಬಹುದೊಡ್ಡ ತಿರುವು ನೀಡಿದ ಹೆಗ್ಗಳಿಕೆ ಈ ಚಿತ್ರದ್ದು. ಈ “ಮೊಗ್ಗಿನ ಮನಸು” ಚಿತ್ರಕ್ಕೂ ಶಶಾಂಕ್ ಅವರು ಈಗ ನಿರ್ದೇಶನ ಮಾಡಿರುವ “ಲವ್ 360” ಚಿತ್ರಕ್ಕೂ ಸಂಬಂಧವಿದೆ. ಇದನ್ನೂ ಓದಿ : ಪುನೀತ್ ಅವರ ದ್ವಿತ್ವ ಸಿನಿಮಾದ ಮೇಲೆ ಹಲವರ ಕಣ್ಣು

love 360 1

ಯಶ್-ರಾಧಿಕಾಗೆ ಬ್ರೇಕ್ ನೀಡಿದ್ದ ಶಶಾಂಕ್

ಮೊಗ್ಗಿನ ಮನಸು ಸಿನಿಮಾದ ಮೂಲಕ ಯಶ್ ಮತ್ತು ರಾಧಿಕಾ ಪಂಡಿತ್ ಅವರ ವೃತ್ತಿ ಬದುಕಿಗೆ ಬ್ರೇಕ್ ನೀಡಿದವರು ಶಶಾಂಕ್. ಈ ಸಿನಿಮಾದಿಂದಾಗಿ ಈ ಇಬ್ಬರೂ ಕಲಾವಿದರು ಸಿನಿಮಾ ರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದರು. ಶಶಾಂಕ್ ಅವರ ಮೊದಲ ಸಿನಿಮಾ ಸಿಕ್ಸರ್ ಕೂಡ ಪ್ರಜ್ವಲ್ ದೇವರಾಜ್ ಬಹುದೊಡ್ಡ ಬ್ರೇಕ್ ನೀಡಿತ್ತು. ತಮ್ಮ ಮೊದಲೆರಡು ಚಿತ್ರಗಳಲ್ಲಿ ಹೊಸ ಹೊಸ ಕಲಾವಿದರನ್ನು ಸಿನಿಮಾ ರಂಗಕ್ಕೆ ಪರಿಚಯಿಸಿರುವ ಶಶಾಂಕ್, ಲವ್ 360 ಚಿತ್ರದಲ್ಲೂ ಹೊಸ ನಾಯಕ ನಾಯಕಿಯರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ಹರ್ಷ ಸಾವಿಗೆ ಸ್ಯಾಂಡಲ್ ವುಡ್, ಬಾಲಿವುಡ್ ಕಲಾವಿದರ ಆಕ್ರೋಶ

love 360 9

ಈ ಸಿನಿಮಾದ ಮೂಲಕ ಪ್ರವೀಣ್ ಎಂಬ ಹೊಸ ಕಲಾವಿದ ಸ್ಯಾಂಡಲ್ ವುಡ್ ಗೆ ಪರಿಚಯ ಆಗುತ್ತಿದ್ದಾರೆ. ವೈದ್ಯಕೀಯ ಪದವಿ ಮುಗಿಸಿರುವ ಪ್ರವೀಣ್ ಗೆ ಲವ್ 360 ಚೊಚ್ಚಲು ಸಿನಿಮಾ. ಅಲ್ಲದೇ, ನಾಯಕಿಯಾಗಿ ರಚನಾ ಇಂದರ್ ಅವರಿಗೆ ಇದು ಹೊಸ ಸಿನಿಮಾ. ಹಾಗಾಗಿ ಮೊಗ್ಗಿನ ಮನಸು ಸಿನಿಮಾದಷ್ಟೇ ಈ ಚಿತ್ರ ಕೂಡ ಫ್ರೆಶ್ ಆಗಿ ಇರಲಿದೆಯಂತೆ.  ಇದನ್ನೂ ಓದಿ : ಸ್ಮಾರಕವಾಗಲಿದೆ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಮನೆ

love 360 5

ಮೊಗ್ಗಿನ ಮನಸು ಚಿತ್ರೀಕರಣದ ನೆನಪು

ಸಿನಿಮಾದ ಕಥೆ ನಡೆಯುವುದು ಗೋಕರ್ಣದಲ್ಲಿ. ಹಾಗಾಗಿ ಆ ಭಾಗದಲ್ಲೇ ಅತೀ ಹೆಚ್ಚು ದೃಶ್ಯಗಳನ್ನು ಸೆರೆ ಹಿಡಿದಿದ್ದಾರಂತೆ ಶಶಾಂಕ್. ಮಂಗಳೂರು, ಕಾಸರಗೋಡು, ಬೆಂಗಳೂರು ಸೇರಿದಂತೆ ಹಲವು ಕಡೆ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಮೊಗ್ಗಿನ ಮನಸು ಸಿನಿಮಾದ ಶೂಟಿಂಗ್ ಕೂಡ ಇದೇ ಭಾಗದಲ್ಲೇ ನಡೆದಿರುವುದು ವಿಶೇಷ. “ಲವ್ 360 ಸಿನಿಮಾದ ಶೂಟಿಂಗ್ ಗಾಗಿ ಕರಾವಳಿಯ ಅನೇಕ ಭಾಗಗಳನ್ನು ಸುತ್ತಾಡಿದೆ.

love 360 10

ದಶಕದ ಹಿಂದೆ ಈ ಜಾಗಗಳಲ್ಲೇ ನಾನು ಮೊಗ್ಗಿನ ಮನಸು ಚಿತ್ರೀಕರಣ ಮಾಡಿದ್ದೆ. ಹಲವು ನೆನಪುಗಳು ಮತ್ತೆ ಮರುಕಳಿಸಿದೆವು. ಹೊಸ ಸಿನಿಮಾ ಕ್ಯೂಟ್ ಲವ್ ಸ್ಟೋರಿಯನ್ನು ಒಳಗೊಂಡಿದೆ. ಹಾಗಾಗಿ ಕರಾವಳಿಯ ಪ್ರದೇಶವೇ ಶೂಟಿಂಗ್ ಗೆ ಬೇಕಾಗಿತ್ತು” ಎನ್ನುತ್ತಾರೆ ಶಶಾಂಕ್.

Share This Article
Leave a Comment

Leave a Reply

Your email address will not be published. Required fields are marked *