ನೈಸರ್ಗಿಕ ವಾಟರ್ ಟ್ಯಾಂಕ್ ಎಂದು ಕರೆಯಲ್ಪಡುವ ಬಾಬಾಬ್ ಮರಗಳು (Baobab Trees) ಬದಲಾಗುತ್ತಿರುವ ಹವಾಮಾನ (Weather) ಹಾಗೂ ಪರಿಸರದ ಮೇಲಿನ ಮನುಷ್ಯನ ಮಿತಿ ಮೀರಿದ ದಾಳಿಯಿಂದ ಅಪಾಯದಲ್ಲಿವೆ. ಇದು ಎಷ್ಟರ ಮಟ್ಟಿಗೆ ತಲುಪಿದೆ ಎಂದರೆ 2080ರ ವೇಳೆಗೆ ಈ ವರ್ಗದ ಕೆಲವು ಮರಗಳು ಸಂಪೂರ್ಣವಾಗಿ ನಾಶಹೊಂದಲಿವೆ ಎಂದು ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್ (IUCN) ನಡೆಸಿದ ಸಂಶೋಧನಾ ವರದಿ ತಿಳಿಸಿದೆ.
ಬಾಬಾಬ್ ಮರಗಳು ಎಂದರೇನು?
Advertisement
ಬಾಬಾಬ್ ಮರಗಳ ಡಿಎನ್ಎ (DNA) ಅಧ್ಯಯನಗಳ ಪ್ರಕಾರ, ಮರಗಳು ಮೊದಲು 21 ಮಿಲಿಯನ್ ವರ್ಷಗಳ ಹಿಂದೆ ಮಡ್ಗಾಸ್ಕರ್‌ನಲ್ಲಿ (Madagascar) ಹುಟ್ಟಿಕೊಂಡಿವೆ. ಮರಗಳ ಬೀಜಗಳು ನಂತರ ಸಮುದ್ರದ ಪ್ರವಾಹದಲ್ಲಿ ಆಸ್ಟ್ರೇಲಿಯಾಕ್ಕೆ (Australia) ಮತ್ತು ಆಫ್ರಿಕಾದ (Africa) ಮುಖ್ಯ ಭೂಭಾಗಗಳಿಗೆ ಬಂದು ವಿಭಿನ್ನ ಜಾತಿಗಳಾಗಿ ವಿಕಸನಗೊಂಡಿವೆ.
Advertisement
Advertisement
ಬಾವೊಬಾಬ್ ಮರಗಳು ಅಡಾನ್ಸೋನಿಯಾ ಕುಲಕ್ಕೆ ಸೇರಿದ್ದು, ಇದರಲ್ಲಿ 9 ಜಾತಿಗಳಿವೆ ಎರಡು ಆಫ್ರಿಕಾ, ಆರು ಮಡಗಾಸ್ಕರ್‌ಗೆ ಮತ್ತು ಒಂದು ಆಸ್ಟ್ರೇಲಿಯಾಕ್ಕೆ ಸೇರಿದೆ. ಕೆಲವು ಪ್ರಬೇಧಗಳು ಭಾರತದಲ್ಲೂ ಕಂಡು ಬರುತ್ತವೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯ ಮಾಂಡು ಬಾಬಾಬ್ ಮರಗಳು ಹೇರಳವಾಗಿ ಕಂಡುಬರುವ ಭಾರತದ ಏಕೈಕ ಸ್ಥಳವಾಗಿದೆ. ಈ ಪ್ರದೇಶದಲ್ಲಿ ಅಂದಾಜು 1,000 ಮರಗಳಿವೆ.
Advertisement
ಬಾಬಾಬ್ ಮರಗಳು ಎತ್ತರಕ್ಕೆ ಹೆಸರುವಾಸಿಯಾಗಿದ್ದು, 50 ಮೀಟರ್‌ಗಳವರೆಗೆ ಈ ಮರಗಳು ಬೆಳೆಯುತ್ತವೆ. ಈ ಮರಗಳ ಜೀವಿತಾವಧಿಯು 2,000 ವರ್ಷಗಳಾಗಿದೆ. ಭಾರತದಲ್ಲಿಯೂ ಬಾಬಾಬ್ ಮರಗಳು ಕಂಡುಬರುತ್ತವೆ. ಆಂಧ್ರಪ್ರದೇಶದ ಗೋಲ್ಕೊಂಡ ಕೋಟೆಯ ಬಳಿ ಇರುವ ಬಾಬಾಬ್ ಮರ 400 ವರ್ಷಗಳಿಗಿಂತ ಹೆಚ್ಚು ಹಳೆಯದು ಎನ್ನಲಾಗಿದೆ. ಕರ್ನಾಟಕದ ದೇವದುರ್ಗದಲ್ಲಿ 500 ವರ್ಷಗಳ ಹಳೆಯ ಬಾಬಾಬ್ ಮರವಿದೆ. ಮತ್ತೊಂದು ಮರವು ಹಾವೇರಿ (Haveri) ಜಿಲ್ಲೆಯ ಹವನೂರ್‌ನಲ್ಲಿದೆ.
ಮರಗಳ ಸುತ್ತಳತೆ ದೊಡ್ಡ ಗಾತ್ರದ್ದಾಗಿದ್ದು, ಕಾಂಡದ ಮೇಲೆ ತೆಳುವಾದ ಸಿಪ್ಪೆಯ ರೀತಿಯ ತೊಗಟೆಯನ್ನು ಹೊಂದಿವೆ. ಈ ಮರದ ಹಣ್ಣುಗಳನ್ನು ತಿನ್ನಲು ಹಾಗೂ ಬೀಜಗಳು ಅಡುಗೆಗೆ ಬಳಸುವ ಎಣ್ಣೆಯ ತಯಾರಿಕೆಗೆ ಬಳಸಲಾಗುತ್ತದೆ. ಅಲ್ಲದೇ ಬಟ್ಟೆಗಾಗಿ ತೊಗಟೆಯ ನಾರುಗಳನ್ನು ಬಳಸಲಾಗುತ್ತದೆ. ಈ ಮರಗಳಿಂದ ಸಂಗೀತ ವಾದ್ಯಗಳನ್ನು ತಯಾರಿಸಲಾಗುತ್ತದೆ.
ಈ ಮರದ ಕಾಂಡದಲ್ಲಿ ನೀರನ್ನು ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿಕೊಳ್ಳುವದರಿಂದ ಬರಗಾಲದ ಸಮಯದಲ್ಲಿ ಜನ, ಕಾಂಡಕ್ಕೆ ಕನ್ನ ಕೊರೆದು ನೀರನ್ನು ಸಂಗ್ರಹಿಸಿ ಬಳಸುತ್ತಾರೆ. ಇದೇ ಕಾರಣಕ್ಕೆ ಈ ಮರಗಳನ್ನು ನೈಸರ್ಗಿಕ ವಾಟರ್ ಟ್ಯಾಂಕ್ ಎಂದು ಕರೆಯಲಾಗುತ್ತದೆ.
IUCN ಅಧ್ಯಯನ ವರದಿಯಲ್ಲಿ ಏನಿದೆ?
ಬಾಬಾಬ್ ಮರಗಳು ಎದುರಿಸುತ್ತಿರುವ ಸಮಸ್ಯೆ ತಿಳಿಯಲು, ಮರಗಳ ಆನುವಂಶಿಕ ರಚನೆಯನ್ನು IUCN ಅಧ್ಯಯನ ಮಾಡಿದೆ. ಅಧ್ಯಯನದ ಆಧಾರದ ಮೇಲೆ ಬಾವೊಬಾಬ್ ಮರಗಳ ಮೂರು ಮಡಗಾಸ್ಕರ್ ಜಾತಿಗಳು ಅಳಿವಿನಂಚಿನಲ್ಲಿವೆ ಎಂದು ಅದು ಹೇಳಿದೆ. ಇನ್ನೂ ಉಳಿದ ಮೂರು ಜಾತಿಯ ಮರಗಳನ್ನು ಕಡಿಮೆ ಆತಂಕ ಎದುರಿಸುತ್ತಿರುವ ಪಟ್ಟಿಗೆ ಸೇರಿಸಿದೆ. ಹವಾಮಾನ ಬದಲಾವಣೆಯು 2080ರ ಮೊದಲು ಅದರ ಅಳಿವಿಗೆ ಕಾರಣವಾಗಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಾಬಾಬ್ ಮರಗಳು ಸಾವಿರಾರು ವರ್ಷಗಳವರೆಗೆ ಬದುಕಬಲ್ಲವು ದಾಖಲೆಯಲ್ಲಿರುವ ಅತ್ಯಂತ ಹಳೆಯ ಬಾವೊಬಾಬ್ ಮರವೆಂದರೆ ಜಿಂಬಾಬ್ವೆಯ ಪಂಕೆಯಲ್ಲಿರುವ ಬಾಬಾಬ್ ಮರ. ಇದು 2450 ವರ್ಷಗಳವರೆಗೆ ಬದುಕಿತ್ತು.
ಬಾಬಾಬ್ ಮರಗಳಿಗಿರುವ ನಾಶಕ್ಕೆ ಕಾರಣವೇನು?
ಬಾಬಾಬ್ ಮರಗಳುತೀವ್ರ ಅಪಾಯವನ್ನು ಎದುರಿಸುತ್ತಿವೆ. ಅತಿ ದೊಡ್ಡ ಅಪಾಯವೆಂದರೆ ಮರಗಳನ್ನು ಕಡಿದು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲಾಗುತ್ತಿದೆ. ಮಡ್ಗಾಸ್ಕರ್‌ನಲ್ಲಿ ಪ್ರತಿ ವರ್ಷ 4,000 ಹೆಕ್ಟೇರ್ ಬಾಬಾಬ್ ಅರಣ್ಯ ನಾಶವಾಗುತ್ತದೆ. ಇದರಿಂದಾಗಿ ಬಾಬಾಬ್ ಮರಗಳು ವೇಗವಾಗಿ ಕ್ಷೀಣಿಸುತ್ತಿವೆ. ಇದಲ್ಲದೆ, ಹವಾಮಾನ ಬದಲಾವಣೆಯು ಈ ಮರಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ದೀರ್ಘಕಾಲದ ಬರ ಮತ್ತು ವಿಪರೀತ ತಾಪಮಾನವು ಮರದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಬಹುದು, ಇದು ಕೆಲವು ಪ್ರದೇಶಗಳಲ್ಲಿ ಬಾಬಾಬ್ ಮರಗಳ ಸಂಖ್ಯೆಯ ಕುಸಿತಕ್ಕೆ ಕಾರಣವಾಗಬಹುದು.
ಬಾಬಾಬ್ ಕಾಡುಗಳಿಗೆ ಮತ್ತೊಂದು ಗಮನಾರ್ಹ ಸಮಸ್ಯೆ ಎಂದರೆ ದೈತ್ಯ ಲೆಮರ್ಸ್ ಅಥವಾ ದೈತ್ಯ ಆಮೆಗಳಂತಹ ದೊಡ್ಡ ದೇಹದ ಪ್ರಾಣಿಗಳ ಅವನತಿ. ಈ ಪ್ರಾಣಿಗಳು ತಮ್ಮ ಮಲದಲ್ಲಿ ಬಾಬಾಬ್ ಮರಗಳ ಬೀಜಗಳನ್ನು ಹರಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿವೆ. ಈ ಪ್ರಾಣಿಗಳಿಲ್ಲದೆ, ಬಾಬಾಬ್ ಬೀಜಗಳು ಪರಿಣಾಮಕಾರಿಯಾಗಿ ಹರಡುವುದಿಲ್ಲ. ಬಾಬಾಬ್ ಮೊಳಕೆ ಫಲ ನೀಡುವ ಮರವಾಗಿ ಬೆಳೆಯಲು ಸುಮಾರು 50 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಮಡಗಾಸ್ಕರ್‌ನ ಕಾಡಿನಲ್ಲಿ 20 ವರ್ಷ ವಯಸ್ಸಿನ ಬಾಬಾಬ್ ಸಸಿಗಳನ್ನು ಗುರುತಿಸುವುದು ಬಹಳ ಕಷ್ಟ. ಅಂದರೆ ಬಹಳ ವರ್ಷಗಳಿಂದ ಬಾಬಾಬ್ ಬೀಜಗಳು ಮೊಳಕೆಯೊಡೆಯುವದು ನಿಂತಿದೆ ಎಂಬುದನ್ನು ಸೂಚಿಸುತ್ತದೆ.
ಬಾಬಾಬ್ ಮರಗಳು ಏಕೆ ಮುಖ್ಯವಾಗಿವೆ?
ಬಾಬಾಬ್ ಮರಗಳು ನೈಸರ್ಗಿ ದತ್ತ ವರವಾಗಿದ್ದು, ಪ್ರಕೃತಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಪರಿಸರದ ಉಷ್ಣಾಂಶ ತಗ್ಗಿಸಲು, ಭೂಮಿಯಲ್ಲಿನ ಅಂತರ್ಜಲವನ್ನು ಕಾಪಾಡುವಲ್ಲಿ ಬಾಬಾಬ್ ಮರಗಳ ಪಾತ್ರ ಹೆಚ್ಚಿದೆ. ನಿಸರ್ಗದತ್ತವಾದ ಈ ಮರಗಳು ಒಮ್ಮೆ ಭೂಮಿಯಿಂದ ಕಣ್ಮರೆಯಾದರೆ ಮತ್ತೆ ಬೆಳೆಸುವುದು ಅಷ್ಟು ಸುಲಭದ ಕೆಲಸವಲ್ಲ. ಇದೇ ರೀತಿಯಾಗಿ ಹಲವಾರು ವಿಧದ ಮರಗಳನ್ನು ನಾವು ಈಗಾಗಲೇ ಕಳೆದುಕೊಂಡಿದ್ದೇವೆ.
ಬಾಬಾಬ್ ಮರಗಳು ಪರಿಸರ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಪರಂಪರೆಗೆ ಗಾಢವಾಗಿ ಮಹತ್ವದ್ದಾಗಿದೆ. ತಮ್ಮ ಹಣ್ಣನ್ನು ಆರಿಸಿ ಮತ್ತು ಆಹಾರ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲು ಕಂಪನಿಗಳಿಗೆ ಮಾರಾಟ ಮಾಡುವ ಗ್ರಾಮೀಣ ಮಹಿಳೆಯರಿಗೆ ಅವು ಅಮೂಲ್ಯವಾಗಿವೆ. ಬಾಬಾಬ್ ಮರಗಳು ಬಡ ಸಮುದಾಯಗಳಿಗೆ ಆದಾಯದ ಮೂಲವು ಆಗಿದೆ.
ಪ್ರವಾಸಿಗರ ಪ್ರಮುಖ ಆಕರ್ಷಣೆ ಈ ಬಾಬಾಬ್
ಈ ದೈತ್ಯಾಕಾರದ ಮರಗಳು ಪ್ರಪಂಚದ ಅನೇಕ ಭಾಗಗಳಲ್ಲಿ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಅನೇಕ ಪ್ರಯಾಣಿಕರು ಮಡ್ಗಾಸ್ಕರ್ ಮತ್ತು ಆಫ್ರಿಕಾದಂತಹ ಪ್ರದೇಶಗಳಿಗೆ ಬಾಬಾಬ್‌ಗಳ ಸೌಂದರ್ಯ ಹಾಗೂ ಮರಗಳ ಬಗ್ಗೆ ಅನ್ವೇಷಿಸಲು ಭೇಟಿ ನೀಡುತ್ತಾರೆ. ಇದರ ಜೊತೆಗೆ, ಕೆಲವು ಪ್ರದೇಶಗಳಲ್ಲಿ, ಬಾಬಾಬ್‌ಗಳು ವಿಶಿಷ್ಟ ವನ್ಯಜೀವಿಗಳಿಗೆ ನೆಲೆಯಾಗಿದೆ. ಈ ಕಾರಣಕ್ಕೆ ಮರಗಳು ಪಕ್ಷಿ ವೀಕ್ಷಕರು ಮತ್ತು ಪ್ರಕೃತಿ ಪ್ರಿಯರಿಗೆ ಒಂದು ಆಕರ್ಷಣೆಯಾಗಿದೆ.
ಪರಿಸರಶಾಸ್ತ್ರಜ್ಞ ಸೆಹೆನೊ ಆಂಡ್ರಿಯಾಂಟ್ಸರಾಲಾಜಾರಿಂದ ಬಾಬಾಬ್ ಮರು ನಾಟಿ
ಪರಿಸರಶಾಸ್ತ್ರಜ್ಞ ಸೆಹೆನೊ ಆಂಡ್ರಿಯಾಂಟ್ಸರಾಲಾಜಾ ಅವರು ಮಡಗಾಸ್ಕರ್‌ನಲ್ಲಿ ಬಾಬಾಬ್ ಮರಗಳ ಬೀಜ ಪ್ರಸರಣವನ್ನು 2009 ರಿಂದ ಸಂಶೋಧಿಸುತ್ತಿದ್ದಾರೆ. ಅವರು ಮಡ್ಗಾಸ್ಕರ್‌ನ ಬಾಬಾಬ್‌ಗಳ ಬಗ್ಗೆ ಸಂಶೋಧನೆ ಹಾಗೂ ಗಿಡಗಳ ಪೋಷಣೆಯಲ್ಲಿ ತೊಡಗಿದ್ದಾರೆ.
ದೈತ್ಯ ಆಮೆಗಳು, ಅಲ್ಡಾಬ್ರಾಚೆಲಿಸ್ ಗಿಗಾಂಟಿಯಾ , ಹಣ್ಣನ್ನು ಇಷ್ಟಪಟ್ಟವು. ಅವರು ಹಣ್ಣನ್ನು ತಿಂದ ಸುಮಾರು 15 ದಿನಗಳ ನಂತರ ಅವರ ಮಲದಲ್ಲಿ ಬಾಬಾಬ್ ಬೀಜಗಳು ಹೊರ ಬರುತ್ತದೆ. ಈ ಬೀಜಗಳು ಚೆನ್ನಾಗಿ ಮೊಳಕೆಯೊಡೆದು ಸಸಿಯಾಗುತ್ತವೆ ಎಂದು ಅವರು ಕಂಡುಕೊಂಡಿದ್ದಾರೆ. ಈ ಮೂಲಕ ಗಿಡಗಳನ್ನು ಮರು ನಾಟಿ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.