ಅತಿಲೋಕ ಸುಂದರಿ ಶ್ರೀದೇವಿ (Actress Sridevi) ಬಹುಭಾಷಾ ನಟಿಯಾಗಿ ಚಿತ್ರರಂಗ ಆಳಿದವರು. ಅವರ 50 ವರ್ಷಗಳ ಸಿನಿಮಾ ಜರ್ನಿಯನ್ನ ಪುಸ್ತಕವಾಗಿ ಬರುತ್ತಿದೆ. ನಟಿ ಶ್ರೀದೇವಿ ಬಗ್ಗೆ ಅನೇಕ ವಿಚಾರಗಳನ್ನ ತಿಳಿಸಲು ಜೀವನ ಚರಿತ್ರೆ ಈಗ ಪುಸ್ತಕವಾಗಿ ಬರುತ್ತಿದೆ.
Advertisement
ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿ ಶ್ರೀದೇವಿ ಅವರು ತಮ್ಮ ಚಿತ್ರ ಜೀವನದಲ್ಲಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 50 ವರ್ಷದ ಜರ್ನಿಯಲ್ಲಿ ಸಾಕಷ್ಟು ಸಂಕಷ್ಟಗಳನ್ನ ಎದುರಿಸಿದ್ದಾರೆ. 1996ರಲ್ಲಿ ಬೋನಿ ಕಪೂರ್ ಅವರನ್ನ ಶ್ರೀದೇವಿ ಅವರು ಮದುವೆಯಾದರು. ಬಳಿಕ 2006ರಲ್ಲಿ `ಇಂಗ್ಲೀಷ್ ವಿಂಗ್ಲೀಷ್’ (English Vinglish) ಸಿನಿಮಾ ಮೂಲಕ ನಟಿ ಮತ್ತೆ ಕಮ್ ಬ್ಯಾಕ್ ಆಗಿ ಸಕ್ಸಸ್ ಕಂಡರು.
Advertisement
Advertisement
2018ರಲ್ಲಿ ಶ್ರೀದೇವಿ ಅವರು ನಿಧನರಾದರು. ಅವರ ಅನಿರೀಕ್ಷಿತ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಹೀಗಿರುವಾಗ ಅವರ ಜೀವನ ಚರಿತ್ರೆಯನ್ನು ಪುಸ್ತಕ ರೂಪದಲ್ಲಿ ಬರಲಿದೆ. ಈ ಬಗ್ಗೆ ಶ್ರೀದೇವಿ ಅವರ ಪತಿ ಬೋನಿ ಕಪೂರ್ (Boney Kapoor) ಟ್ವೀಟ್ಟರ್ನಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.
Advertisement
@SrideviBKapoor @AuthorDhiraj @WestlandBooks @karthikavk @Blind_glass @LabyrinthAgency pic.twitter.com/5TmyP7fLGT
— Boney Kapoor (@BoneyKapoor) February 8, 2023
ಶ್ರೀದೇವಿ, ಬೋನಿ ಕಪೂರ್ ಅವರ ಆಪ್ತ ಪ್ರಸಿದ್ಧ ಬರಹಗಾರ ಮತ್ತು ಪತ್ರಕರ್ತ ಧೀರಜ್ ಕುಮಾರ್ (Dheeraj Kumar) ಅವರು ಶ್ರೀದೇವಿಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನ ಒಳಗೊಂಡ ಪುಸ್ತವನ್ನು ಈಗಾಗಲೇ ಬರೆದಿದ್ದಾರೆ. ಈ ಪುಸ್ತಕವನ್ನು ವೆಸ್ಟ್ಲ್ಯಾಂಡ್ ಕಂಪನಿ ಬುಕ್ನ್ನ ಬಿಡುಗಡೆ ಮಾಡಲಿದೆ.
ನಟಿ ಶ್ರೀದೇವಿ ಅವರ ಜೀವನ ಚರಿತ್ರೆಗೆ `ಶ್ರೀದೇವಿ ದ ಲೈಫ್ ಆಫ್ ಎ ಲೆಜೆಂಡ್’ (Sridevi The Life Of a Legend) ಎಂಬ ಶೀರ್ಷಿಕೆಯಡಿ ಬರಲಿದೆ. ಮುಂದಿನ ದಿನಗಳಲ್ಲಿ ಶ್ರೀದೇವಿ ಜೀವನ ಕಥನ ಸಿನಿಮಾ ರೂಪದಲ್ಲಿ ಬಂದರೆ ಅಚ್ಚರಿಪಡಬೇಕಿಲ್ಲ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k