ಬೆಂಗಳೂರು: ನೈರುತ್ಯ ರೈಲ್ವೇಯು 2021-22ರ ಆರ್ಥಿಕ ವರ್ಷದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದೆ.
ಗ್ರಾಹಕ ಸ್ನೇಹಿ ವಿಧಾನದೊಂದಿಗೆ, ರೈಲ್ವೇ ಸರಕು ಮತ್ತು ಪಾರ್ಸೆಲ್ ಸಂಚಾರಕ್ಕೆ ಅತ್ಯಂತ ಆದ್ಯತೆಯ ಸಾರಿಗೆ ವಿಧಾನವಾಗಿದೆ. 2021-22ರ ಹಣಕಾಸು ವರ್ಷದಲ್ಲಿ, ನೈರುತ್ಯ ರೈಲ್ವೆಯು 44.12 ಮಿಲಿಯನ್ ಟನ್ ಸರಕು ಸಾಗಣೆ ಮಾಡಿದ್ದು, ಕಳೆದ ಹಣಕಾಸು ವರ್ಷಕ್ಕಿಂತ 15.5% ಅಭಿವೃದ್ಧಿಯನ್ನು ದಾಖಲಿಸಿದೆ. ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ
7.04 ಮಿಲಿಯನ್ ಟನ್ ಕಬ್ಬಿಣದ ಅದಿರು, 9.13 ಮಿಲಿಯನ್ ಟನ್ ಕಲ್ಲಿದ್ದಲು, 9.05 ಮಿಲಿಯನ್ ಟನ್ ಪೆಡಸು ಕಬ್ಬಿಣ ಮತ್ತು ಫಿನಿಶ್ಡ್ ಉಕ್ಕು, 0.77 ಮಿಲಿಯನ್ ಟನ್ ಆಹಾರ ಧಾನ್ಯಗಳು, 0.98 ಮಿಲಿಯನ್ ಟನ್ ಸಿಮೆಂಟ್ ಇತ್ಯಾದಿಗಳನ್ನು ಸಾಗಿಸಿದೆ. 2021-22 ರ ಅವಧಿಯಲ್ಲಿ ಸರಕು ಸಾಗಾಣಿಕೆಯಿಂದ 4160 ಕೋಟಿ ರೂ. ಆದಾಯಗಳಿಸಿದೆ. ಇದು 2020-21ರ ಹಣಕಾಸು ವರ್ಷದಲ್ಲಿ 28.72% ಕ್ಕಿಂತ ಹೆಚ್ಚಳವಾಗಿದೆ. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ
2021-22 ರಲ್ಲಿ ನೈರುತ್ಯ ರೈಲ್ವೇಯು ಪಾರ್ಸೆಲ್‍ನಿಂದ 121.56 ಕೋಟಿ ರೂ.ಆದಾಯ ಸಂಗ್ರಹವಾಗಿದೆ. 2021-22 ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆಯು 238 ಆಟೋಮೊಬೈಲ್ ರೇಕ್‍ಗಳನ್ನು ಲೋಡ್ ಮಾಡಲಾಗಿದೆ. ಸಂಡ್ರಿ ಆದಾಯ 1.52% ಹೆಚ್ಚಳದೊಂದಿಗೆ 275.7 ಕೋಟಿ ರೂ. ಗಳಿಸಿದೆ.. ಗುಜರಿ ವಸ್ತುಗಳ ಮಾರಾಟದಿಂದ 138.04 ಕೋಟಿ ರೂ. ದಾಖಲೆಯ ಆದಾಯ ಸಂಗ್ರಹವಾಗಿದ್ದು, ರೈಲ್ವೆ ಬೋರ್ಡ್ ನಿಗದಿಪಡಿಸಿದ ಗುರಿಯನ್ನು ಮೀರಿದೆ.
ನೈರುತ್ಯ ರೈಲ್ವೆಯ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತುವನ್ನು ನೀಡಿದೆ. 2021-22ರ ಅವಧಿಯಲ್ಲಿ, 187 ಕಿಮೀ ದ್ವಿಪಥೀಕರಣ ಮತ್ತು 22 ಕಿಮೀ ಹೊಸ ಮಾರ್ಗಗಳು ಮತ್ತು 511.7 ಕಿಮೀ ವಿದ್ಯುದ್ದೀಕರಣ ಪೂರ್ಣಗೊಳಿಸಲಾಗಿದೆ. ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ, ನೈರುತ್ಯ ರೈಲ್ವೇಯು 2021-22 ಹಣಕಾಸು ವರ್ಷದಲ್ಲಿ 26 ರೈಲುಗಳನ್ನು ಎಲೆಕ್ಟ್ರಿಕ್ ಟ್ರಾಕ್ಷನ್‍ನಲ್ಲಿ ಚಲಿಸುವಂತೆ ಪರಿವರ್ತಿಸಲಾಗಿದೆ. ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ 40 ರೈಲುಗಳು ಪವರ್ ಕಾರ್‍ಗಳನ್ನು ಎಲೆಕ್ಟ್ರಿಕ ಟ್ಯಾಕ್ಷನ್‍ಗಳಲ್ಲಿ ಸಂಚರಿಸಲಾಗುತ್ತದೆ. ಹಸಿರು ಉಪಕ್ರಮವಾಗಿ, ನೈರುತ್ಯ ರೈಲ್ವೇಯು ತನ್ನ ವ್ಯಾಪ್ತಿಯಾದ್ಯಂತ 70 ಸಾವಿರ ಹಣ್ಣು ಕೊಡುವ ಮರಗಳನ್ನು ನೆಡಲಾಗಿದೆ.
ಇಂದು ಪ್ರಧಾನ ವ್ಯವಸ್ಥಾಪಕರಾದ ಸಂಜೀವ್ ಕಿಶೋರ್‍ರವರು ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗಗಳ ಇಲಾಖೆಯ ಪ್ರಧಾನ ಮುಖ್ಯಸ್ಥರ ಮತ್ತು ವಿಭಾಗೀಯ ರೈಲ್ವೇ ವ್ಯವಸ್ಥಾಪಕರೊಂದಿಗೆ ಸಭೆಯನ್ನು ನಡೆಸಿದರು. ಪ್ರಮುಖ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆಯನ್ನು ದಾಖಲಿಸಿದ್ದಕ್ಕಾಗಿ ನೈರು ರೈಲ್ವೆಯ ನೌಕರರ ಮೇಲೆ ಅವರು ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಮೊದಲು ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆಯನ್ನು ನೀಡಿದರು. ಮುಂದಿನ ವರ್ಷ ಇನ್ನೂ ಉತ್ತಮ ಸಾಧನೆಯನ್ನು ಸಾಧಿಸುವಲ್ಲಿ ತಮ್ಮ ಮಟ್ಟವನ್ನು ಅತ್ಯುತ್ತಮವಾಗಿ ಪ್ರಯತ್ನಿಸುವಂತೆ ಹೇಳಿದರು.