ಡೊಮಿನಿಕಾ: ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲೇ ಟೀಂ ಇಂಡಿಯಾದ (Team India) ಆರಂಭಿಕ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi Jaiswal) ಶತಕ ಸಿಡಿಸುವ ಮೂಲಕ ಸೌರವ್ ಗಂಗೂಲಿ ದಾಖಲೆಯನ್ನು ಮುರಿದಿದ್ದಾರೆ.
ವಿಂಡೀಸ್ (West Indies) ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 21 ವರ್ಷದ ಯಶಸ್ವಿ ಜೈಸ್ವಾಲ್ (Yashasvi Jaiswal) ಔಟಾಗದೇ 143 ರನ್ (350 ಎಸೆತ, 14 ಬೌಂಡರಿ) ಹೊಡೆದಿದ್ದಾರೆ. ಈ ಮೂಲಕ ವಿದೇಶದಲ್ಲಿ ಟೆಸ್ಟ್ ಕ್ರಿಕೆಟ್ (Test Cricket) ಕ್ಯಾಪ್ ಧರಿಸಿ ಅತಿ ಹೆಚ್ಚು ರನ್ ಹೊಡೆದ ಭಾರತದ ಬ್ಯಾಟರ್ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Advertisement
A special Debut ✨
A special century ????
A special reception in the dressing room ????
A special mention by Yashasvi Jaiswal ????????
A special pat on the back at the end of it all ????????#TeamIndia | #WIvIND | @ybj_19 pic.twitter.com/yMzLYaJUvR
— BCCI (@BCCI) July 14, 2023
Advertisement
1996 ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ಸೌರವ್ ಗಂಗೂಲಿ (Sourav Ganguly) 131 ರನ್ ಹೊಡೆದಿದ್ದರು. ಯಶಸ್ವಿ ಜೈಸ್ವಾಲ್ 131 ರನ್‌ಗಳ ಗಡಿಯನ್ನು ದಾಟುವ ಮೂಲಕ 27 ವರ್ಷದ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.
Advertisement
ವಿದೇಶದಲ್ಲಿ ಪಾದಾರ್ಪಣೆ ಮಾಡಿ ಶತಕ ಸಿಡಿಸಿದ 7ನೇ ಭಾರತದ ಆಟಗಾರ ಎಂಬ ಖ್ಯಾತಿಗೆ ಜೈಸ್ವಾಲ್ ಪಾತ್ರರಾಗಿದ್ದಾರೆ. ಈ ಮೊದಲು ಅಬ್ಬಾಸ್ ಅಲಿ, ಸುರೀಂದರ್ ಅಮರನಾಥ್, ಪ್ರವೀಣ್ ಆಮ್ರೆ, ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್, ಸುರೇಶ್ ರೈನಾ ಶತಕ ಹೊಡೆದಿದ್ದರು.
Advertisement
A special dedication after a special start in international cricket! ????#TeamIndia | #WIvIND | @ybj_19 pic.twitter.com/Dsiwln3rwt
— BCCI (@BCCI) July 14, 2023
ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಭಾರತೀಯ ಆಟಗಾರನೊಬ್ಬ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ದಾಖಲೆಯೂ ಈಗ ಜೈಸ್ವಾಲ್ ಪಾಲಾಗಿದೆ. 1984 ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯವನ್ನು ಆಡಿದ್ದ ಅಜರುದ್ದೀನ್ 322 ಎಸೆತ ಎದುರಿಸಿದ್ದರು. ಇದನ್ನೂ ಓದಿ: IND vs WI: ಅಪ್ಪ, ಮಗನನ್ನು ಔಟ್ ಮಾಡಿ ದಾಖಲೆ ಬರೆದ ಅಶ್ವಿನ್
The moment Yashasvi Jaiswal reached his Test century on debut.
What a journey it has been, what a talent! The future of India. pic.twitter.com/XZpwDgtfTU
— Mufaddal Vohra (@mufaddal_vohra) July 13, 2023
ಯಶಸ್ವಿ ಜೈಸ್ವಾಲ್ ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ 17 ನೇ ಭಾರತೀಯ ಬ್ಯಾಟರ್ ಆಗಿದ್ದಾರೆ. ಈ ಹಿಂದೆ ಲಾಲಾ ಅಮರನಾಥ್ (118), ದೀಪಕ್ ಶೋಧನ್ (110), ಎಜಿ ಕೃಪಾಲ್ ಸಿಂಗ್ (100*), ಅಬ್ಬಾಸ್ ಅಲಿ ಬೇಗ್ (112), ಹನುಮಂತ್ ಸಿಂಗ್ (105), ಗುಂಡಪ್ಪ ವಿಶ್ವನಾಥ್ (137), ಸುರೀಂದರ್ ಅಮರನಾಥ್ (124), ಮೊಹಮ್ಮದ್ ಅಜರುದ್ದೀನ್ (110), ಪ್ರವೀಣ್ ಆಮ್ರೆ (103), ಸೌರವ್ ಗಂಗೂಲಿ (131), ವೀರೇಂದ್ರ ಸೆಹ್ವಾಗ್ (105), ಸುರೇಶ್ ರೈನಾ (120), ಶಿಖರ್ ಧವನ್ (187), ರೋಹಿತ್ ಶರ್ಮಾ (177), ಪೃಥ್ವಿ ಶಾ (134) , ಮತ್ತು ಶ್ರೇಯಸ್ ಐಯ್ಯರ್ (105) ರನ್ ಹೊಡೆದಿದ್ದರು.
ಉತ್ತಮ ಸ್ಥಿತಿಯಲ್ಲಿ ಭಾರತ:
ಯಶಸ್ವಿ ಜೈಸ್ವಾಲ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ಶತಕದ ಜೊತೆಯಾಟದಿಂದ ಭಾರತ 113 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿದ್ದು ಉತ್ತಮ ಸ್ಥಿತಿಯಲ್ಲಿದೆ.
ಮೊದಲ ವಿಕೆಟಿಗೆ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ 454 ಎಸೆತಗಳಲ್ಲಿ 229 ರನ್ ಜೊತೆಯಾಟವಾಡಿದರು. ರೋಹಿತ್ ಶರ್ಮಾ 103 ರನ್ (221 ಎಸೆತ, 10 ಬೌಂಡರಿ, 2 ಸಿಕ್ಸರ್) ಸಿಡಿಸಿ ಔಟಾದರು. ನಂತರ ಬಂದ ಶುಭಮನ್ ಗಿಲ್ 6 ರನ್ ಗಳಿಸಿ ಬೇಗನೇ ಔಟಾದರೂ ವಿರಾಟ್ ಕೊಹ್ಲಿ ಮತ್ತು ಜೈಸ್ವಾಲ್ ಮುರಿಯದ ಮೂರನೇ ವಿಕೆಟಿಗೆ 72 ರನ್ ಜೊತೆಯಾಟವಾಡಿದ್ದಾರೆ.
ದಿನದ ಅಂತ್ಯಕ್ಕೆ ಜೈಸ್ವಾಲ್ 143 ರನ್, ವಿರಾಟ್ ಕೊಹ್ಲಿ 36 ರನ್ (96 ಎಸೆತ, 1 ಬೌಂಡರಿ) ಹೊಡೆದಿದ್ದು ಮೂರನೇ ದಿನ ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ 64.3 ಓವರ್‌ಗಳಲ್ಲಿ 150 ರನ್ ಗಳಿಗೆ ಆಲೌಟ್ ಆಗಿತ್ತು.
Web Stories