ಚೆನ್ನೈ: ಇಲ್ಲಿನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಜಯಗಳಿಸಿದ್ದು, ಈ ಮೂಲಕ ರೋಹಿತ್ ಶರ್ಮಾ ನಾಯಕತ್ವದ ತಂಡ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ಟೀಂ ಇಂಡಿಯಾ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಿಖರ್ ಧವನ್, ರಿಷಭ್ ಪಂತ್ ಅರ್ಧ ಶತಕ ಮಿಂಚಿದರು. ಕೇವಲ 36 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ಧವನ್ ಅಂತಿಮವಾಗಿ 62 ಎಸೆತಗಳಲ್ಲಿ 92 ರನ್ ಗಳಿಸಿದರು. ಧವನ್‍ಗೆ ಸಾಥ್ ನೀಡಿದ ಯುವ ಆಟಗಾರ ರಿಷಭ್ ಪಂತ್ ಕೇವಲ 30 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಆಕರ್ಷಕ 3 ಸಿಕ್ಸರ್, 5 ಬೌಂಡರಿ ಸಿಡಿಸಿದ ಪಂತ್ 58 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
Advertisement
FIFTY!@RishabPant777 joins the party and brings up his 1st T20I half-century.#TeamIndia 152/2 after 16 overs, need 29 more runs to win this game #INDvWI pic.twitter.com/xhRAt7Rbw6
— BCCI (@BCCI) November 11, 2018
Advertisement
ವೆಸ್ಟ್ ಇಂಡೀಸ್ ನೀಡಿದ 182 ರನ್ ಸವಾಲಿನ ಮೊತ್ತ ಬೆನ್ನತ್ತಿದ್ದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ನಾಯಕ ರೋಹಿತ್ ಶರ್ಮಾ (4 ರನ್) ಹಾಗೂ ಕೆಎಲ್ ರಾಹುಲ್ (17 ರನ್) ಗಳಿಸಿ ಪೆವಿಲಿಯನ್ ಸೇರಿದರು. ಈ ಹಂತದಲ್ಲಿ ಟೀಂ ಇಂಡಿಯಾ 5.2 ಓವರ್ ಗಳಲ್ಲಿ 45 ರನ್ ಗಳಿಸಿತ್ತು. ಈ ವೇಳೆ ತಂಡಕ್ಕೆ ಆಸರೆಯಾದ ಧವನ್, ರಿಷಭ್ ಪಂತ್ ಜೋಡಿ ಭರ್ಜರಿ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದರು. ಈ ಇಬ್ಬರ ಜೋಡಿ 3ನೇ ವಿಕೆಟ್‍ಗೆ ಬರೋಬ್ಬರಿ 130 ರನ್ ಜೊತೆಯಾಟ ನೀಡಿತು. ಅಂತಿಮ 9 ಎಸೆತಗಳಲ್ಲಿ ಭಾರತ ಗೆಲುವಿಗೆ 7 ರನ್ ಗಳಿಸಬೇಕಿತ್ತು. 19ನೇ ಓವರ್ ನಲ್ಲಿ ಮನೀಷ್ ಪಾಂಡೇ 2 ಗಳಿಸಿದರು. ಅಂತಿಮ ಓವರ್ ನಲ್ಲಿ 5 ರನ್ ಗಳಿಸ ಬೇಕಿದ್ದ ವೇಳೆ ಧವನ್ 3 ರನ್ ಗಳಿಸಿ ಕ್ಯಾಚ್ ನೀಡಿ ನಿರ್ಗಮಿಸಿದರು. ಅಂತಿಮವಾಗಿ ಮನೀಷ್ ಪಾಂಡೇ ಪಂದ್ಯದ ಕೊನೆಯ ಎಸೆತದಲ್ಲಿ 1 ರನ್ ಗಳಿಸಿ ತಂಡವನ್ನು ಗೆಲುವಿನ ಗುರಿ ತಲುಪಿಸಿದರು. ಈ ವೇಳೆ ವೆಸ್ಟ್ ಇಂಡೀಸ್ ತಂಡದ ಆಟಗಾರರು ಮಾಡಿದ ಮಿಸ್ ಫೀಲ್ಡ್ ನಿಂದ ಭಾರತ ಗೆಲುವಿನ ಸಿಹಿ ಪಡೆಯಿತು.
Advertisement
ರಿಷಭ್ ಭಾರತ ಪರ ಟಿ20 ಮಾದರಿಯಲ್ಲಿ ಅರ್ಧ ಶತಕ ಸಿಡಿಸಿ 2ನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದರು. 21 ವರ್ಷ 38 ದಿನ ವಯಸ್ಸಿನ ರಿಷಭ್ ಪಂದ್ಯದಲ್ಲಿ ತಮ್ಮ ಮೊದಲ ಟಿ20 ಅರ್ಧ ಶತಕ ಗಳಿಸಿದರು. ಭಾರತದ ಪರ ರೋಹಿತ್ ಶರ್ಮಾ 20 ವರ್ಷ, 143 ದಿನಗಳಲ್ಲಿ ಟಿ20 ಮಾದರಿಯಲ್ಲಿ ಅರ್ಧ ಶತಕ ಸಿಡಿಸಿದ್ದರು.
Advertisement
FIFTY!@SDhawan25 brings up his 8th T20I half-century off 36 deliveries.#INDvWI pic.twitter.com/ocsqOSfxmB
— BCCI (@BCCI) November 11, 2018
ಇದಕ್ಕು ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡ ಅನುಭವಿ ಆಟಗಾರ ಡಾರೆನ್ ಬ್ರಾವೊ ಮತ್ತು ನಿಕೋಲಸ್ ಪೂರನ್ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿತ್ತು. ವಿಂಡೀಸ್ ಪರ 25 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ನೆರವಿನಿಂದ ಪೂರನ್ 53 ರನ್ ಗಳಿಸಿ ಅಜೇಯರಾಗುಳಿದರೆ, ಬ್ರಾವೊ 37 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ನೆರವಿನಿಂದ 42 ರನ್ ಗಳಿಸಿದರು. ಉಳಿದಂತೆ ಶಾಯ್ ಹೋಪ್ 24, ಹಿಟ್ಮೆಯರ್ 26 ರನ್, ದಿನೇಶ್ ರಾಮ್‍ದಿನ್ 15 ರನ್ ಗಳಿಸಿದರು. ಟೀಂ ಇಂಡಿಯಾ ಪರ ಯಜುವೇಂದ್ರ ಚಹಾಲ್ 2, ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews