ಅಟ್ಲಾಂಟಾ: ಟಿ 20 ಕ್ರಿಕೆಟ್‌ನಲ್ಲಿ(T20) ಶತಕ ಹೊಡೆಯುವುದು ಈಗ ಸಾಮಾನ್ಯವಾಗಿದೆ. ಆದರೆ ಈಗ ಟಿ20ಯಲ್ಲಿ ವಿಂಡೀಸ್ ಆಟಗಾರರೊಬ್ಬರು ಅಮೆರಿಕದಲ್ಲಿ ದ್ವಿಶತಕ ಹೊಡೆದು ಅಪರೂಪದ ಸಾಧನೆ ಮಾಡಿದ್ದಾರೆ.
ಅಮೆರಿಕದ ಅಟ್ಲಾಂಟಾದಲ್ಲಿ ನಡೆಯುತ್ತಿರುವ ಟಿ20 ಲೀಗ್‌ನಲ್ಲಿ ಅಟ್ಲಾಂಟಾ ಫೈರ್ ಆಟಗಾರ ಕಾರ್ನ್‌ವಾಲ್(Cornwall) ಸ್ಕ್ವಾರ್ ಡ್ರೈವರ್ ವಿರುದ್ಧ 77 ಎಸೆತಗಳಲ್ಲಿ ಔಟಾಗದೇ 205 ರನ್ ಹೊಡೆದಿದ್ದಾರೆ.
ARE YOU NOT ENTERTAINED?!
Rahkeem Cornwall put Atlanta Fire on top with a DOUBLE century going 205*(77) with 2️⃣2️⃣ MASSIVE sixes ???????????? pic.twitter.com/1iRfyniiUw
— Minor League Cricket (@MiLCricket) October 6, 2022
ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಕಾರ್ನ್‌ವಾಲ್ 266.23 ಸ್ಟ್ರೈಕ್ ರೇಟ್‌ನಲ್ಲಿ 22 ಸಿಕ್ಸ್ ಮತ್ತು 17 ಬೌಂಡರಿ ಚಚ್ಚಿದ್ದಾರೆ. ಬೌಂಡರಿ, ಸಿಕ್ಸರ್ ಮೂಲಕವೇ 200 ರನ್ ಬಂದಿದೆ. ಕಾರ್ನ್‌ವಾಲ್ ಆಟದಿಂದ ಅಟ್ಲಾಂಟಾ ಫೈರ್ ತಂಡ 172 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಟೂರ್ನಿಯಲ್ಲಿ ಜಯಗಳಿಸುವ ತಂಡಕ್ಕೆ 75 ಸಾವಿರ ಡಾಲರ್ ಬಹುಮಾನವನ್ನು ನೀಡಲಾಗುತ್ತದೆ.
ಕಾರ್ನ್‌ವಾಲ್ ದ್ವಿಶತಕ ಸಾಧನೆ ಇತಿಹಾಸದ ಪುಟದಲ್ಲಿ ದಾಖಲಾಗುವುದಿಲ್ಲ. ಅಟ್ಲಾಂಟಾ ಕ್ರಿಕೆಟ್ ಟೂರ್ನಿಗೆ ಐಸಿಸಿಯ ಯಾವುದೇ ಮಾನ್ಯತೆ ಇಲ್ಲ. ಇದನ್ನೂ ಓದಿ: ನೆಟ್ಸ್‌ನಲ್ಲಿ ಬೆವರಿಳಿಸಿದ ಬ್ಯೂಟಿ – ಶಹಬ್ಬಾಸ್‌ಗಿರಿ ನೀಡಿ ಫ್ಯಾನ್ಸ್ ಕ್ಲೀನ್ ಬೌಲ್ಡ್
View this post on Instagram
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಹೊಡೆದ ದಾಖಲೆ ಕ್ರಿಸ್ ಗೇಲ್(Chris Gayle) ಹೆಸರಿನಲ್ಲಿದೆ. ರಾಯಲ್ ಚಾಲೆಂಜರ್ಸ್ ಪರ ಆಡಿದ್ದ ಗೇಲ್ 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಔಟಾಗದೇ 175 ರನ್(66 ಎಸೆತ,13 ಬೌಂಡರಿ, 17 ಸಿಕ್ಸರ್, 265.15 ಸ್ಟ್ರೈಕ್ ರೇಟ್) ಹೊಡೆದಿದ್ದರು.