ಜಮೈಕಾ: ವೆಸ್ಟ್ ಇಂಡೀಸ್ ಆಲ್‍ರೌಂಡರ್ ಕಾರ್ಲೋಸ್ ಬ್ರಾಥ್‍ವೈಟ್ ಅವರ ಪತ್ನಿ ಫೆ.6 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗಳಿಗೆ ಈಡನ್ ರೋಸ್ ಎಂದು ನಾಮಕರಣ ಮಾಡಿದ್ದಾರೆ.
ಬ್ರಾಥ್‍ವೈಟ್ ಅವರು ತಮ್ಮ ಮಗಳಿಗೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನ ಹೆಸರಿಡಲು ಪ್ರಮುಖ ಕಾರಣವೆನೆಂದರೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ಅವರು ಇಂಗ್ಲೆಂಡ್‍ನ ಬೌಲರ್ ಬೆನ್ ಸ್ಟೋಕ್ಸ್ ಅವರ ಬೌಲಿಂಗನಲ್ಲಿ 4 ಬ್ಯಾಕ್-ಟು-ಬ್ಯಾಕ್ ಸಿಕ್ಸರ್‍ಗಳನ್ನು ಹೊಡೆದದ್ದು ಅಲ್ಲದೇ ಅದೇ ಮೈದಾನದಲ್ಲಿ ವೆಸ್ಟ್ ಇಂಡೀಸ್ ತಂಡ 2016ರ ಟಿ20 ವಿಶ್ವಕಪ್ ಸಹ ಗೆದ್ದಿತ್ತು. ಇದನ್ನೂ ಓದಿ: ನೆಟ್ಟಿಗರಿಂದ ಟ್ರೋಲ್ ಆಯ್ತು ಎಸ್‍ಆರ್‌ಹೆಚ್ ಹೊಸ ಜೆರ್ಸಿ
View this post on Instagram
ಬ್ರಾಥ್‍ವೈಟ್ ಅವರು ತಮ್ಮ ಮಗಳ ಆಗಮನವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಮಗಳಿಗೆ ತಮ್ಮ ಕ್ರಿಕೆಟ್ ವೃತ್ತಿಜೀವನದ ಅತ್ಯಂತ ಸ್ಮರಣೀಯ ಸ್ಥಳವಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನ ಹೆಸರಿಟ್ಟು ಭಾರತದ ಮೇಲೆ ಅವರಿಗಿರುವ ಗೌರವ, ಪ್ರೀತಿ, ವಿಶ್ವಾಸವನ್ನು ತೊರಿದ್ದಾರೆ.
ಫೆ.6 ರಂದು ಈಡನ್ ರೋಸ್ ಬ್ರಾಥ್‍ವೈಟ್ ಎಂಬ ಹೆಸರಿನ ಪುಟ್ಟ ಮಗುವಿನ ಆಗಮನವಾಗಿದೆ. ಆ ಮಗುವಿನ ತಂದೆಯು ಮಗವಿನ ಆಗಮನಕ್ಕೆ ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದನು. ಮಗಳೇ ಈ ಡ್ಯಾಡಿ ನಿನ್ನನ್ನು ತುಂಬು ಹೃದಯದಿಂದ ಪ್ರೀತಿಸುವುದಾಗಿ ಭರವಸೆ ನೀಡುತ್ತಾನೆ ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತವರಿನಲ್ಲಿ ಕೊಹ್ಲಿ ಹೊಸ ಮೈಲಿಗಲ್ಲು – ಧೋನಿ, ಸಚಿನ್ ಜೊತೆ Elite ಪಟ್ಟಿಗೆ ಸೇರ್ಪಡೆ
ನನ್ನ ಹೆಂಡತಿ ತುಂಬಾ ಬಲಶಾಲಿ ಹಾಗೂ ಅವಳು ಬೇಗನೆ ಚೇತರಿಸಿಕೊಳ್ಳುತ್ತಾಳೆ. ಅವಳು ನನ್ನ ಮಗುವಿಗೆ ಒಳ್ಳೆಯ ತಾಯಿಯಾಗಿದ್ದಾಳೆ ಎಂದು ಬ್ರಾಥ್‍ವೈಟ್ ತಮ್ಮ ಹೆಂಡತಿಯನ್ನು ಸಹ ಹೊಗಳಿದ್ದಾರೆ.