ಕೋಲ್ಕತ್ತಾ: ಪಶ್ಚಿಮ ಬಂಗಾಳ ಹೆಸರು ಬದಲಾವಣೆಗೆ ರಾಜ್ಯದ ವಿಧಾನಸಭೆಯಲ್ಲಿ ಇಂದು ಒಪ್ಪಿಗೆ ಸಿಕ್ಕಿದ್ದು, ಕೇಂದ್ರದ ಅಂತಿಮ ಸಮ್ಮತಿಗೆ ಶಿಫಾರಸ್ಸು ಮಾಡಲಾಗಿದೆ.
ಪಶ್ಚಿಮ ಬಂಗಾಳ ಹೆಸರು ಎಲ್ಲಾ ಭಾಷೆಗಳಲ್ಲಿ ಬಾಂಗ್ಲಾ ಎಂದು ರೂಢಿಗೆ ಬರಲಿದೆ. ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಹೆಸರು ಬದಲಿಸಲು ಮುಂದಾಗಿದ್ದು, ಈ ನಡೆಗೆ ಎಲ್ಲ ಪಕ್ಷಗಳು ಬೆಂಬಲ ನೀಡಿದೆ. 1999 ರಲ್ಲೇ ಹೆಸರು ಪಶ್ಚಿಮ ಬಂಗಾಳ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರ ಸಲಹೆ ನೀಡಿದ್ದನ್ನು ನೆನಪು ಮಾಡಬಹುದಾಗಿದೆ.
Advertisement
Advertisement
ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಕಳೆದ 2 ವರ್ಷಗಳ ಹಿಂದೆ ರಾಜ್ಯದ ಹೆಸರು ಬದಲಿಸುವ ಪ್ರಸ್ತಾವನೆ ಸಲ್ಲಿಸಿತ್ತು. ಈ ವೇಳೆ ಪಶ್ಚಿಮ ಬಂಗಾಳ ಹೆಸರನ್ನು ಆಂಗ್ಲ ಭಾಷೆಯಲ್ಲಿ ಬೆಂಗಾಲ್, ಹಿಂದಿಯಲ್ಲಿ ಬಂಗಾಳ ಹಾಗೂ ಬಾಂಗ್ಲಾ ಭಾಷೆಯಲ್ಲಿ ಬೆಂಗಾಳ ಎಂದು ಬದಲಿಸಲು ಪ್ರಸ್ತಾವನೆಯಲ್ಲಿ ಉಲ್ಲೇಖಿಸಿತ್ತು. ಈ ವೇಳೆ ಕೇಂದ್ರ ಸರ್ಕಾರ, ಎಲ್ಲಾ ಭಾಷೆಗಳಲ್ಲಿ ಒಂದು ಹೆಸರು ಮಾತ್ರ ಬರುವಂತೆ ಸೂಚಿಸಿ ಎಂದು ಸಲಹೆ ನೀಡಿತ್ತು.
Advertisement
ರಾಜ್ಯದ ಹೆಸರು ಬದಲಾವಣೆಗೆ ಮಮತಾ ಬ್ಯಾನರ್ಜಿ ಸರ್ಕಾರ ನಿರಂತರವಾಗಿ ಪ್ರಯತ್ನ ನಡೆಸಿತ್ತು. ಆಂಗ್ಲ ಭಾಷೆಯಲ್ಲಿ ಎಲ್ಲ ರಾಜ್ಯಗಳ ಕ್ರಮಾಂಕ ಬಂದಾಗ ವೆಸ್ಟ್ ಬೆಂಗಾಲ್ ಹೆಸರು ಕೊನೆಯಲ್ಲಿ ಪ್ರಕಟಗೊಳ್ಳುತ್ತದೆ. ಈ ಕಾರಣಕ್ಕೆ ಹೆಸರು ಬದಲಾವಣೆ ಮಾಡಲು ಮುಂದಾಗಿತ್ತು.
Advertisement
ಸ್ಥಳೀಯವಾಗಿ ಸಿಗುವ ಮದ್ಯಕ್ಕೆ ಪಶ್ಚಿಮ ಬಂಗಾಳದಲ್ಲಿ ‘ಬಾಂಗ್ಲಾ’ ಎಂದು ಕರೆಯಲಾಗುತ್ತದೆ. ಹೀಗಾಗಿ ಸರ್ಕಾರ ಸೂಚಿಸಿರುವ ಹೊಸ ಹೆಸರು ಸಹ ಬೆಂಗಾಲಿ ಭಾಷಿಕರಿಗೆ ಕಷ್ಟವಾಗಲಿದೆ ಎನ್ನಲಾಗಿದೆ.