ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಪ್ರತಿಭಟನೆ ಬೆನ್ನಲ್ಲೇ ಶಿಕ್ಷಕರು ವೇತನ ಹೆಚ್ಚಳ ಆಗ್ರಹಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬಿಸಿ ಮುಟ್ಟಿಸಿದ್ದಾರೆ.
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ ಆರು ದಿನಗಳಿಂದ ಶಿಕ್ಷಕರು ಶಾಂತಿಯುತ ಪ್ರತಿಭಟನೆ ನಡೆಸಿದ್ದರು. ಆದರೆ ಇಂದು ರಾಜ್ಯ ಶಿಕ್ಷಣ ಸಚಿವರು ನಮ್ಮನ್ನು ಭೇಟಿಯಾಗಬೇಕು ಎಂದು ಒತ್ತಾಯಿಸಿ, ವಿಕಾಸ ಭವನದ ಬಳಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
Advertisement
#WATCH West Bengal: Teachers protest at Bikash Bhavan, Kolkata demanding higher wages among other demands. pic.twitter.com/Awux6hZ0s0
— ANI (@ANI) June 17, 2019
Advertisement
ಬ್ಯಾರಿಕೇಡ್ ಹಾಕಿ ಪ್ರತಿಭಟನಾನಿರತರನ್ನು ತಡೆಯಲು ಪೊಲೀಸರು ಮುಂದಾದರು. ಆದರೆ ಇದಕ್ಕೆ ಬಗ್ಗದ ಶಿಕ್ಷಕರು ಬ್ಯಾರಿಕೇಡ್‍ಗಳನ್ನು ಕಿತ್ತು ವಿಕಾಸ ಭವನ ಪ್ರವೇಶ ಮಾಡಿದ್ದಾರೆ.
Advertisement
ಪಶ್ಚಿಮ ಬಂಗಾಳದಲ್ಲಿ ಮೃತ ರೋಗಿಯೊಬ್ಬರ ಸಂಬಂಧಿಕರು ಇತ್ತೀಚೆಗೆ ಇಬ್ಬರು ಕಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆ ಪಶ್ಚಿಮ ಬಂಗಾಳದಲ್ಲಿ ವೈದ್ಯರ ದೊಡ್ಡ ಮಟ್ಟದ ಚಳುವಳಿಗೆ ಕಾರಣವಾಯಿತು. ಆದರೆ ಪ್ರತಿಭಟನೆಯನ್ನು ನಿಲ್ಲಿಸುವಂತೆ ಮಮತಾ ಬ್ಯಾನರ್ಜಿ ವೈದ್ಯರಿಗೆ ಎಚ್ಚರಿಕೆ ನೀಡಿದ್ದರು.
Advertisement
ಮಮತಾ ಬ್ಯಾನರ್ಜಿ ಅವರ ಹೇಳಿಕೆಯಿಂದ ಅಸಮಾಧಾನ ಹೊರಹಾಕಿದ ವೈದ್ಯರು, ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದರು. ಆದರೆ ಇಂದು ಮಮತಾ ಬ್ಯಾನರ್ಜಿ ಅವರು ಮುಷ್ಕರ ನಿರತ ವೈದ್ಯರನ್ನು ಭೇಟಿಯಾಗಿದ್ದಾರೆ.
West Bengal: State Health Department bus carrying representatives of doctors scheduled to meet CM Mamata Banerjee in Nabanna, today. pic.twitter.com/vNosuVOfKa
— ANI (@ANI) June 17, 2019