ಪ.ಬಂಗಾಳದಲ್ಲಿ 7 ವರ್ಷದ ಬಾಲಕನಿಗೆ ಓಮಿಕ್ರಾನ್‌ ಸೋಂಕು- ತೆಲಂಗಾಣದಲ್ಲೂ 2 ಪ್ರಕರಣ ದೃಢ

Advertisements

ಕೋಲ್ಕತ್ತ: ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕೊರೊನಾ ಸೋಂಕು ಹೊಸ ರೂಪಾಂತರಿ ಓಮಿಕ್ರಾನ್‌ ಮೊದಲ ಪ್ರಕರಣ ವರದಿಯಾಗಿದ್ದು, 7 ವರ್ಷದ ಬಾಲಕನಲ್ಲಿ ಸೋಂಕು ಪತ್ತೆಯಾಗಿದೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಓಮಿಕ್ರಾನ್‌ ಪ್ರಕರಣ ವರದಿಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಓಮಿಕ್ರಾನ್ ಟೆನ್ಶನ್ ನಡುವೆ ಕರುನಾಡಿಗೆ ರಿಲೀಫ್- ಸೋಂಕಿತ ಆಸ್ಪತ್ರೆಯಿಂದ ಡಿಸ್ಚಾರ್ಜ್

Advertisements

ತೆಲಂಗಾಣ ರಾಜ್ಯದಲ್ಲೂ ಇಂದು ಓಮಿಕ್ರಾನ್‌ ಸೋಂಕಿನ ಎರಡು ಪ್ರಕರಣಗಳು ವರದಿಯಾಗಿವೆ. ಇಬ್ಬರು ಸೋಂಕಿತರೂ ಆಫ್ರಿಕಾದಿಂದ ವಾಪಸ್ಸಾದವರಾಗಿದ್ದಾರೆ. ಒಬ್ಬರು ಕೀನ್ಯಾ ಹಾಗೂ ಮತ್ತೊಬ್ಬರು ಸೊಮಾಲಿಯಾದಿಂದ ಬಂದಿದ್ದಾರೆ.

ಈ ಬಗ್ಗೆ ಜನರು ಆತಂಕಕ್ಕೆ ಒಳಗಾಗುವುದು ಬೇಡ. ನಾವು ಸದ್ಯಕ್ಕೆ ಯಾವುದೇ ನಿರ್ಬಂಧಗಳನ್ನು ವಿಧಿಸುವುದಿಲ್ಲ. ಕೋವಿಡ್‌ ನಿಯಮಗಳನ್ನು ಪಾಲಿಸಿ, ಲಸಿಕೆ ಪಡೆದುಕೊಳ್ಳಿ ಎಂದು ಆರೋಗ್ಯ ಸಚಿವ ಹರೀಶ್‌ ರಾವ್‌ ತಿಳಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಓಮಿಕ್ರಾನ್‌ ಸ್ಫೋಟ- ಒಂದೇ ದಿನ 8 ಪ್ರಕರಣ ಪತ್ತೆ

Advertisements

Advertisements
Exit mobile version