ಕೋಲ್ಕತ್ತಾ: ಹುಟ್ಟು, ಸಾವು ನಮ್ಮ ಕೈಯಲ್ಲಿ ಇಲ್ಲ. ಆದರೆ ಇರುವಷ್ಟು ದಿನ ಸಂತೋಷವಾಗಿರಬೇಕು ಎಂದು ಹಿರಿಯರು ಹೇಳುತ್ತಾರೆ. ಇಲ್ಲೊಬ್ಬ ವ್ಯಕ್ತಿ ತನ್ನ 100ನೇ ಹುಟ್ಟುಹಬ್ಬವನ್ನು ಆಚರಿಸುವ ವೇಳೆ 90 ವರ್ಷದ ಹೆಂಡತಿಯನ್ನು ಮರುಮದುವೆ ಮಾಡಿಕೊಂಡಿದ್ದಾನೆ. ಈ ಮದುವೆಯಲ್ಲಿ ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಭಾಗವಹಿಸಿದ್ದರು.
ಪಶ್ಚಿಮ ಬಂಗಾಳದ ಹಳ್ಳಿಯೊಂದರ ನಿವಾಸಿ ಬಿಸ್ವನಾಥ್ ಸರ್ಕಾರ್, ತಮ್ಮ 100ನೇ ಹುಟ್ಟುಹಬ್ಬವನ್ನು ಆಚರಿಸಲು 90 ವರ್ಷದ ಪತ್ನಿ ಸುರೋಧ್ವನಿ ಸರ್ಕಾರ್ ಅವರನ್ನು ಮರುಮದುವೆ ಮಾಡಿಕೊಂಡಿದ್ದಾರೆ. 100 ನೇ ವರ್ಷಕ್ಕೆ ಕಾಲಿಟ್ಟಾಗ ಬಿಸ್ವನಾಥ್ ಅವರಿಗೆ ಏನಾದರೂ ವಿಶೇಷವಾದದ್ದನ್ನು ಮಾಡಲು ಬಯಸಿದ್ದರು ಹೀಗಾಗಿ ಕುಟುಂಬಸ್ಥರು ಈ ಯೋಚನೆ ಮಾಡಿದ್ದಾರೆ.
Advertisement
Advertisement
ಮಾವನ ಮದುವೆ ಕುರಿತಾಗಿ ಮಾತನಾಡಿದ ಸೊಸೆ, ಬಿಸ್ವನಾಥ್ ಅವರು ಆರು ಮಕ್ಕಳು, 23 ಮೊಮ್ಮಕ್ಕಳು ಮತ್ತು 10 ಮೊಮ್ಮಕ್ಕಳು ಉಪಸ್ಥಿತಿಯಲ್ಲಿ 90 ವರ್ಷದ ಪತ್ನಿ ಸುರೋಧ್ವನಿ ಅವರನ್ನು ಮರುಮದುವೆಯಾದರು. ಕೆಲವು ತಿಂಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಇದೇ ರೀತಿಯದ್ದನ್ನು ನೋಡಿದಾಗ ಮರುಮದುವೆ ಮಾಡುವ ಆಲೋಚನೆ ತನಗೆ ಹೊಳೆದಿತ್ತು . ಈ ಬಗ್ಗೆ ನಾನು ಕುಟುಂಬಸ್ಥರಿಗೆ ಹೇಳಿದೆ. ಬೇರೆ ರಾಜ್ಯಗಳಲ್ಲಿ ವಾಸಿಸುವ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿಮಕ್ಕಳು ಹಳ್ಳಿಗೆ ಬಂದರು ಹೀಗಾಗಿ ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡಲು ಸಾಧ್ಯವಾಯಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ವಿಶ್ವದ ಸ್ವೀಟೆಸ್ಟ್ ಭಯೋತ್ಪಾದಕ: ಅರವಿಂದ್ ಕೇಜ್ರಿವಾಲ್
Advertisement
Advertisement
ನಮ್ಮ ಅಜ್ಜಿಯರು ಜಿಯಾಗಂಜ್‍ನ ಬೆನಿಯಾಪುಕುರ್ ಗ್ರಾಮದಲ್ಲಿ ವಾಸಿಸುತ್ತಿದ್ದರೂ, ನಮ್ಮ ಪೂರ್ವಜರ ಮನೆಯು ಸುಮಾರು ಐದು ಕಿಮೀ ದೂರದಲ್ಲಿರುವ ಬಮುನಿಯಾ ಗ್ರಾಮದಲ್ಲಿದೆ. ನನ್ನ ಅಜ್ಜಿಯನ್ನು ಎರಡು ದಿನಗಳ ಹಿಂದೆ ಅಲ್ಲಿಗೆ ಕರೆದೊಯ್ಯಲಾಯಿತು, ಅಜ್ಜಿ, ಅಜ್ಜನನ್ನು ಮದುವೆಗೆ ತಯಾರು ಮಾಡುವ ಜವಾಬ್ದಾರಿಯನ್ನು ಮೊಮ್ಮಕ್ಕಳು ವಹಿಸಿಕೊಂಡಿದ್ದೇವು.
ವರನಾದ ಅಜ್ಜನನ್ನು ವಧು ಮನೆಗೆ ಕರೆತರುವಾಗ ಕುದುರೆ-ಬಂಡಿಯಲ್ಲಿ ಪಟಾಕಿ ಸೌಂಡ್ ಮಧ್ಯೆ ಭರ್ಜರಿಯಾಗಿ ಎಂಟ್ರಿಕೊಟ್ಟರು. ದಂಪತಿ ಧೋತಿ-ಕುರ್ತಾ ಮತ್ತು ಸೀರೆಯನ್ನು ಧರಿಸಿ ಮದುವೆಗೆ ಸಿಂಗಾರಗೊಂಡಿದ್ದರು. ನೋಟುಗಳಿಂದ ಮಾಡಿದ ಹಾರಗಳನ್ನು ಬದಲಾಯಿಸಿಕೊಂಡರು. ನಂತರ ರುಚಿಯಾದ ಭೋಜನವನ್ನು ಏರ್ಪಡಿಸಲಾಗಿತ್ತು. ಈ ಸಂತೋಷದ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ನೆರೆಹೊರೆಯವರನ್ನೂ ಆಹ್ವಾನಿಸಲಾಗಿತ್ತು.