ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಉದ್ಯಮಿಯೊಬ್ಬರು ದುಬಾರಿ ಬೆಲೆಯ ಚಿನ್ನದ ಮಾಸ್ಕ್ ಅನ್ನು ಖರೀದಿಸಿದ್ದಾರೆ.
ಕೋವಿಡ್-19 ಇನ್ನೂ ಮುಗಿಯದ ಕಾರಣ ನಮ್ಮ ದೈನಂದಿನ ಜೀವನದಲ್ಲಿ ಮಾಸ್ಕ್ ಅಗತ್ಯವಾಗಿದೆ. ಆದರೆ ಜನರು ಮಾಸ್ಕ್‌ನಲ್ಲಿ ಕೂಡ ಟ್ರೆಂಡಿ ಹಾಗೂ ಫ್ಯಾಷನ್ ಅನ್ನು ಹುಡುಕುತ್ತಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನವರೇ, ನಿಮ್ಮದು ಹಗಲುವೇಷವೋ, ಛದ್ಮ ವೇಷವೋ?: ಬಿಜೆಪಿ ಟ್ವೀಟ್ ವಾರ್
Advertisement
Advertisement
ಸದ್ಯ ಆಭರಣದ ತಯಾರಕ ಚಂದನ್‍ದಾಸ್ ಎಂಬವರು ಚಿನ್ನದ ಮಾಸ್ಕ್ ತಯಾರಿಸಿದ್ದಾರೆ. ಕೇವಲ 15 ದಿನಗಳಲ್ಲಿ ಸ್ಥಳೀಯ ಉದ್ಯಮಿಗಳೊಂದಿಗೆ ಸೇರಿ ಚಂದನ್ ದಾಸ್ 5.70 ಲಕ್ಷ ರೂಪಾಯಿ ಮೌಲ್ಯದ, 108 ಗ್ರಾಂ ಚಿನ್ನದ ಮಾಸ್ಕ್ ಅನ್ನು ಸಿದ್ದಪಡಿಸಿದ್ದಾರೆ. ಇನ್ನೂ ಈ ಮಾಸ್ಕ್ ಅನ್ನು ಪತ್ರಕರ್ತೆ ರಿತುಪರ್ಣ ಚಟರ್ಜಿ ಎಂಬವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬಿಎಸ್‌ಎಫ್ ಅಧಿಕಾರ ವ್ಯಾಪ್ತಿ ವಿಸ್ತರಣೆ- ಕೇಂದ್ರದ ಅಧಿಸೂಚನೆ ವಿರುದ್ಧ ಪಂಜಾಬ್ ನಿರ್ಣಯ
Advertisement
What is the purpose of this? pic.twitter.com/Zy4MqIPNCZ
— Rituparna Chatterjee (@MasalaBai) November 10, 2021
Advertisement
ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ ಕೆಲವರು ಪ್ರಶಂಸಿದರೆ, ಮತ್ತೆ ಕೆಲವರು ಅಷ್ಟು ಸಂಪತ್ತನ್ನು ಹೊಂದಿರುವವರು, ಕಾಯಿಲೆಯಿಂದ ತಮ್ಮ ಜೀವವನ್ನು ಕಳೆದುಕೊಂಡ ಸಾವಿರಾರು ಬಡ ಜನರ ಬಗ್ಗೆ ಯಾವುದೇ ಕಾಳಜಿಯಿಲ್ಲದೆ ಅಸಭ್ಯವಾಗಿ ಸಂಪತ್ತಿನ ಪ್ರದರ್ಶನ ಮಾಡುವುದನ್ನು ಮುಂದುವರೆಸಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.