ಕೋಲ್ಕತ್ತಾ: ಪೊಲೀಸರಿಗೆ ಹೆದರಬೇಡಿ, ಅಗತ್ಯಬಿದ್ದರೇ ಅವರ ಮೇಲೆ ಬಾಂಬ್ ಹಾಕಿ ಎಂದು ಪಶ್ಚಿಮ ಬಂಗಾಳದ (West Bengal) ಕಾಂಗ್ರೆಸ್ (Congress) ಮಹಿಳಾ ಮುಖ್ಯಸ್ಥೆ ಸುಭ್ರತಾ ದತ್ತಾ (Subrata Dutta) ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.
ಬಿರ್ಭೂಮ್‍ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವೀಡಿಯೋದಲ್ಲಿ ಅಭಿಷೇಕ್ ಬ್ಯಾನರ್ಜಿಗೆ ತಿರುಗೇಟು ನೀಡುವ ಭರದಲ್ಲಿ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಪೊಲೀಸರ (Police) ವಾಹನ ಮುಟ್ಟಿದ್ದವರ ಹಣೆಗೆ ಗುಂಡು ಹಾರಿಸುವ ಬಗ್ಗೆ ಮಾತನಾಡಬಹುದಾದರೆ, ನಾನು ಪೊಲೀಸರ ದೇಹವನ್ನು ಗುಂಡಿನಿಂದ ರಂಧ್ರ ಮಾಡಬಲ್ಲೆ ಎಂದ ಅವರು, ಕಾರ್ಯಕರ್ತರ‍್ಯಾರೂ ಪೊಲೀಸರಿಗೆ ಹೆದರಬೇಡಿ, ಅಗತ್ಯಬಿದ್ದರೇ ಅವರ ಮೇಲೆ ಬಾಂಬ್ ಹಾಕಿ ಎಂದು ತಿಳಿಸಿದರು. ಇದನ್ನೂ ಓದಿ: ಒಂದೇ ವರ್ಷದಲ್ಲಿ 8,000 ವಿವೇಕ ಶಾಲಾ ಕೊಠಡಿಗಳ ನಿರ್ಮಾಣ: ಬೊಮ್ಮಾಯಿ
ಈ ಹಿಂದೆ ಅಭಿಷೇಕ್ ಬ್ಯಾನರ್ಜಿ ಮಾತನಾಡಿ, ಪ್ರತಿಭಟನೆ ಸಂದರ್ಭದಲ್ಲಿ ಯಾರು ಪೊಲೀಸ್ ವಾಹನಕ್ಕೆ ಬೆಂಕಿ ಇಡುವುದು ಧ್ವಂಸ ಮಾಡುವುದು ಮಾಡುತ್ತಾರೋ, ಅಂಥವರ ತಲೆಗೆ ಗುಂಡು ಹೊಡೆಯಬೇಕು ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಇದೀಗ ಕಾಂಗ್ರೆಸ್ ನಾಯಕಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಅಡಿಕೆ ಬೆಳೆಗಾರರ ಜೊತೆ ಸರ್ಕಾರ ಇದೆ : ಬೊಮ್ಮಾಯಿ