ಕೊಲ್ಕತ್ತಾ: ಲೋಕಸಭಾ ಚುನಾವಣೆ ಮುಗಿದರೂ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಇನ್ನು ಕೊನೆಗೊಂಡಿಲ್ಲ. ಭಾನುವಾರ ರಾತ್ರಿ ಬಿಜೆಪಿ ಕಾರ್ಯಕರ್ತನನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಪಶ್ಚಿಮ ಬಂಗಾಳದ ಪರ್ಗನಾಸ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಹತ್ಯೆ ಮಾಡಲಾದ ಬಿಜೆಪಿ ಕಾರ್ಯಕರ್ತನನ್ನು 24 ವರ್ಷದ ಚಂದನ್ ಶಾ ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಚಂದನ್ ಶಾನನ್ನು ಯಾರೋ ಅಪರಿಚಿತರು ಗುಂಡಿಕ್ಕಿ ಹತ್ಯೆಮಾಡಿದ್ದಾರೆ.
Advertisement
#Visuals from West Bengal: A BJP worker, Chandan Shaw, was shot dead by unidentified assailants late last night in Bhatapara of North 24 Parganas district. Security forces have been deployed in the area. Investigation has started. pic.twitter.com/lVvzC4zIhG
— ANI (@ANI) May 27, 2019
Advertisement
ಪಶ್ಚಿಮ ಬಂಗಾಳದಲ್ಲಿ ಲೋಕಸಭಾ ಚುನಾವಣಾ ಸಮಯದಿಂದಲೂಸ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆಯುತಿತ್ತು. ಲೋಕಸಭಾ ಭಾನುವಾರ ರಾತ್ರಿ ಮನೆಗೆ ಬೈಕಿನಲ್ಲಿ ಬರುತ್ತಿದ್ದ ಚಂದನ್ ಶಾ ಅವರನ್ನು ಯಾರೋ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.
Advertisement
ಈ ಘಟನೆ ನಡೆಯುದಕ್ಕೂ ಮುನ್ನ ತೃಣಮೂಲ ಕಾಂಗ್ರೆಸ್ ಪಕ್ಷದ ಅರಣ್ಯ ಸಚಿವ ಬಿನಾಯ್ ಕೃಷ್ಣ ಬರ್ಮನ್ ಅವರ ಬೆಂಗಾವಲು ವಾಹನದ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದರು. ಜೊತೆಯಲ್ಲೇ ಇದ್ದ ಪೊಲೀಸರು ಅವರನ್ನು ರಕ್ಷಣೆ ಮಾಡಿದ್ದರು. ಈ ಎರಡು ಘಟನೆಗಳಿಂದ ಅ ಭಾಗದಲ್ಲಿ ಅತಂಕದ ವಾತಾವರಣ ಸೃಷ್ಟಿಯಾಗಿತ್ತು.
Advertisement
ಪಶ್ಚಿಮಾ ಬಂಗಾಳದ ಕೊಚ್ಬೀಹರ್, ಜಲ್ಪೈಗುರಿ, ಪಹಾರ್ಪುರ್, ಗಂಗರಮ್‍ಪುರ್, ದಿನ್ಹಾಟ ಈ ಎಲ್ಲಾ ಕಡೆಯಲ್ಲಿ ಹಿಂಚಾಚಾರ ಹೆಚ್ಚಾಗಿದ್ದು, ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ಮಾರಾಮಾರಿ ಇನ್ನೂ ನಿಂತಿಲ್ಲ. ಅದ್ದರಿಂದ ಭಟ್ಪಾರ, ಕಂಕಿನಾರ ಮತ್ತು ಪರ್ಗನಾಸ್ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 42 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳದಲ್ಲಿ 22 ಸ್ಥಾನಗಳನ್ನು ಟಿಎಂಸಿ ಪಕ್ಷ ಗೆದ್ದರೆ 18 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ.