Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಸಿಲುಕಿರುವ ಪ್ರವಾಸಿಗರಿಗೆ ಕರ್ನಾಟಕದ ಆತಿಥ್ಯ: ಸಚಿವ ಹೆಚ್‌.ಕೆ.ಪಾಟೀಲ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಸಿಲುಕಿರುವ ಪ್ರವಾಸಿಗರಿಗೆ ಕರ್ನಾಟಕದ ಆತಿಥ್ಯ: ಸಚಿವ ಹೆಚ್‌.ಕೆ.ಪಾಟೀಲ್

Bengaluru City

ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಸಿಲುಕಿರುವ ಪ್ರವಾಸಿಗರಿಗೆ ಕರ್ನಾಟಕದ ಆತಿಥ್ಯ: ಸಚಿವ ಹೆಚ್‌.ಕೆ.ಪಾಟೀಲ್

Public TV
Last updated: March 13, 2026 7:35 pm
Public TV
Share
5 Min Read
HK Patil 1
SHARE

ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ (West Asia Conflict) ಸಿಲುಕಿರುವ ಅಂತಾರಾಷ್ಟ್ರೀಯ ಪ್ರವಾಸಿಗರ ಆತಿಥ್ಯ ವಹಿಸಿಕೊಳ್ಳಲು ರಾಜ್ಯವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರಾಜ್ಯ ಸರ್ಕಾರ ಈ ನೆಲದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರಚುರ ಪಡಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಲ್ಲದೇ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಬಲಪಡಿಸುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ (H.K Patil) ಹೇಳಿದ್ದಾರೆ.

ನಗರದ (Bengaluru) ಅರಮನೆ ಮೈದಾನದ ತ್ರಿಪುರ ವಾಸಿನಿಯ ಆರಂಭವಾದ ಮೂರು ದಿನಗಳ ಪ್ರಯಾಣ ಮತ್ತು ಪ್ರವಾಸೋದ್ಯಮ ಮೇಳ (ಟಿ ಟಿ ಎಫ್) ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಈ ವೇಳೆ “ಪಶ್ಚಿಮ ಏಷ್ಯಾ ಸಂಘರ್ಷ ಭಾರತದ ಮೇಲೆ ಯಾವುದೇ ನೇರ ಪರಿಣಾಮ ಬೀರದಿದ್ದರೂ, ವಿಶೇಷವಾಗಿ ಮಧ್ಯಪ್ರಾಚ್ಯ ದೇಶಗಳಿಂದ ಬಂದ ವಿದೇಶಿ ಪ್ರವಾಸಿಗರ ಪ್ರಯಾಣವನ್ನು ಇದು ಅನಿಶ್ಚಿತತೆಯ ತೆಕ್ಕೆಗೆ ದೂಡಿದೆ. ವೀಸಾ ಮತ್ತು ಪ್ರಯಾಣ ನಿರ್ಬಂಧಗಳಿಂದಾಗಿ ಅನೇಕರು ತಮ್ಮ ತಾಯ್ನಾಡಿಗೆ ಮರಳಲು ಸಾಧ್ಯವಾಗುತ್ತಿಲ್ಲ. ಅಲ್ಲಿನ ಪರಿಸ್ಥಿತಿ ತಿಳಿಯಾಗುವವರೆಗೆ ಅವರ ವಾಸ್ತವ್ಯ ಆರಾಮದಾಯಕವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಕರ್ನಾಟಕ ನಾನಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರಲ್ಲಿ ವೀಸಾಗಳ ನಿರ್ವಹಣೆ ಮತ್ತು ಅಗತ್ಯ ಸಹಾಯವನ್ನು ಒದಗಿಸುವುದು ಸೇರಿವೆ,” ಎಂದು ಅವರು ವಿವರಿಸಿದರು. ಇದನ್ನೂ ಓದಿ: ಇರಾನ್‌ ಶೀಘ್ರವೇ ಶರಣಾಗಲಿದೆ ಎಂದ ಟ್ರಂಪ್‌ – ಕೊಲ್ಲಿ ಯುದ್ಧ ಅಂತ್ಯ?

HK Patil 2

ಐತಿಹಾಸಿಕ ಸ್ಥಳಗಳಲ್ಲಿ ಉತ್ಖನನ ಯೋಜನೆಗಳು ಮತ್ತು ದೊಡ್ಡ ತೆರೆದ ವಸ್ತುಸಂಗ್ರಹಾಲಯಗಳನ್ನು ಅಭಿವೃದ್ಧಿಪಡಿಸುವತ್ತ ರಾಜ್ಯ ಗಮನಹರಿಸುತ್ತಿದೆ ಎಂದು ಸಚಿವರು ವಿವರಿಸಿದರು.

“ಲಕುಂಡಿಯಲ್ಲಿ ಹೀಗೆ ಉತ್ಕನನ ಸಂದರ್ಭದಲ್ಲಿ ದೊರೆತ ಐತಿಹಾಸಿಕ ವಸ್ತುಗಳ ಪ್ರದರ್ಶನಕ್ಕೆಂದೇ ಒಂದು ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗುವುದು. ಅಲ್ಲಿ ಸುಮಾರು 1,500 ಕಲಾಕೃತಿಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ ಮತ್ತು ಸುಮಾರು 3,500 ವಸ್ತುಗಳನ್ನು ಸಂಶೋಧಿಸಲಾಗಿದೆ. ಇತ್ತೀಚೆಗೆ, ಒಂದು ಕುಟುಂಬವು 600 ವರ್ಷಗಳಷ್ಟು ಹಳೆಯದಾದ ಆಭರಣವನ್ನು ದಾನ ಮಾಡಿದೆ. ಇದನ್ನು ಮೂಲತಃ ದೇವಿಯನ್ನು ಅಲಂಕರಿಸಲು ಬಳಸಲಾಗುತ್ತಿತ್ತು. ಇದರ ಮೌಲ್ಯ ಸುಮಾರು ರೂ 5 ಕೋಟಿಎಂದು ತಜ್ಞರು ತಿಳಿಸಿದ್ದಾರೆ,” ಎಂದು ಅವರು ಹೇಳಿದರು.

“ಪರಿಸರ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ, ಶಿಕ್ಷಣ ಪ್ರವಾಸೋದ್ಯಮ ಮತ್ತು ರೈತರ ಪ್ರವಾಸೋದ್ಯಮ,” ಹೀಗೆ ಎಲ್ಲಾ ರೀತಿಯ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಬೆಂಬಲ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

ಪ್ರವಾಸೋದ್ಯಮ ಪ್ರದರ್ಶನಗಳು, ಟಿಟಿಎಫ್‌ನಂತಹ ಮೇಳಗಳ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಮಹತ್ವವನ್ನು ವಹಿಸುತ್ತಿವೆ ಎಂದು ತಿಳಿಸಿದ ಸಚಿವರು, “ಈ ಪ್ರದರ್ಶನಗಳು ಸಾಮಾನ್ಯವಾಗಿ ಎಳ್ಳು ಕಾಣಸಿಗದ ಮಹತ್ವದ ಸಂಗತಿಗಳನ್ನು ಒಂದೆಡೆ ತರುತ್ತವೆ. ವಿಯೆಟ್ನಾಂನಂತಹ ವಿದೇಶಗಳ ಪ್ರವಾಸಿಗರು ಮತ್ತು ಪ್ರವಾಸ ನಿರ್ವಾಹಕರು ಕರ್ನಾಟಕದ ಬಗ್ಗೆ ಪೂರ್ಣ ಮಾಹಿತಿಯನ್ನು ಇಲ್ಲಿ ಪಡೆಯುತ್ತಾರೆ. ಇದು ರಾಜ್ಯಾದ್ಯಂತದ ಪರಂಪರೆಯ ತಾಣಗಳಿಗೆ ಭೇಟಿ ನೀಡುವವರಿಗೆ ಮಾರ್ಗದರ್ಶನ ನೀಡಲು ಸಹಾಯ ಮಾಡುತ್ತದೆ” ಎಂದು ಸಚಿವರು ಅಭಿಪ್ರಾಯಪಟ್ಟರು.

“ಹಂಪಿ, ಬೇಲೂರು, ಬಾದಾಮಿ, ಪಟ್ಟದಕಲ್ಲು ಮತ್ತು ಪಶ್ಚಿಮ ಘಟ್ಟಗಳ ಪ್ರದೇಶಗಳಂತಹ ವಿಶ್ವ ಪರಂಪರೆಯ ತಾಣಗಳು ಸೇರಿದಂತೆ 25,000 ಕ್ಕೂ ಹೆಚ್ಚು ಸ್ಮಾರಕಗಳನ್ನು ರಾಜ್ಯವು ಹೊಂದಿದೆ,” ಎಂದು ತಿಳಿಸಿದ ಸಚಿವರು, ಯುನೆಸ್ಕೋದ ತಾತ್ಕಾಲಿಕ ಪಟ್ಟಿಯಲ್ಲಿ ಲಕುಂಡಿ, ಡೆಕ್ಕನ್, ಸೋಮನಾಥ್, ಗರಾಜ್, ಬಿಜಾಪುರ, ಶ್ರೀರಂಗಪಟ್ಟಣ, ಮೈಸೂರು ಮತ್ತು ಹಳೇಬೀಡು ಸೇರಿವೆ. “ಈ ಶ್ರೀಮಂತ ಪರಂಪರೆಯ ಹೊರತಾಗಿಯೂ, ಕರ್ನಾಟಕವು ಸಾಂಪ್ರದಾಯಿಕವಾಗಿ ಪ್ರವಾಸೋದ್ಯಮದಲ್ಲಿ ಕಡಿಮೆ ಪಾಲು ಹೊಂದಿದೆ. ಇದನ್ನು ಹೆಚ್ಚಿಸಬೇಕು, ” ಎಂದು ಅವರು ಹೇಳಿದರು.

HK Patil

ಪ್ರವಾಸೋದ್ಯಮ ಕ್ಷೇತ್ರಕ್ಕೆ ರಾಜ್ಯ ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ಪ್ರಸ್ತಾಪಿಸಿದ ಸಚಿವರು, “ಬಜೆಟ್ ಪ್ರವಾಸೋದ್ಯಮ ಪ್ರಚಾರಕ್ಕಾಗಿ ಪ್ರೋತ್ಸಾಹವನ್ನು ಒದಗಿಸುತ್ತದೆ. ಆದರೆ ನಮ್ಮ ಪ್ರವಾಸೋದ್ಯಮ ನೀತಿಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಹೆಚ್ಚುವರಿ ಬೆಂಬಲದ ಅಗತ್ಯವಿದೆ. ಬಾಬಾ ಮತ್ತು ಸಾಕತ್ ರಂತಹ ಅನುಭವಿ ಸಂಘಟಕರು ಮತ್ತು ತಜ್ಞರ ಮಾರ್ಗದರ್ಶನದೊಂದಿಗೆ ಟಿಟಿಎಫ್‌ನಂತಹ ಉಪಕ್ರಮಗಳಿಗೆ ಮುಂದಿನ ವರ್ಷದಿಂದ ನೆರವು ನೀಡಲಾಗುವುದು,” ಎಂದು ಘೋಷಿಸಿದರು.

ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರು ಬೆಂಗಳೂರು ಮೂಲಕ ರಾಜ್ಯದ ಶ್ರೇಷ್ಠತೆಯನ್ನು ಅರಿಯುತ್ತಾರೆ. “ಇಲ್ಲಿಂದ, ಪರಂಪರೆಯ ತಾಣಗಳು, ಹೋಟೆಲ್‌ಗಳು ಮತ್ತು ಆಕರ್ಷಣೆಗಳ ಮಾಹಿತಿಯನ್ನು ಕ್ರೋಢೀಕರಿಸಲಾಗುತ್ತದೆ ಮತ್ತು ಸಂದರ್ಶಕರೊಂದಿಗೆ ಹಂಚಿಕೊಳ್ಳಲಾಗುತ್ತದೆ. ಇದು ಹಂಪಿ, ಬಿಜಾಪುರ, ಅಕ್ಕೋಡಿ, ಬೀದರ್, ಶ್ರೀರಂಗಪಟ್ಟಣ, ಮೈಸೂರು ಮತ್ತು ಹಳೇಬೀಡು ಮುಂತಾದ ಕರ್ನಾಟಕದ ತಾಣಗಳನ್ನು ಅನ್ವೇಷಿಸಲು ಅವರನ್ನು ಪ್ರೋತ್ಸಾಹಿಸುತ್ತದೆ” ಎಂದು ಅವರು ಹೇಳಿದರು.

ಕರ್ನಾಟಕದ ಪ್ರವಾಸಿ ಕ್ಷೇತ್ರಗಳ ಬಗ್ಗೆ ಪ್ರವಾಸಿಗರಲ್ಲಿ ಆಸಕ್ತಿಯನ್ನು ಹುಟ್ಟುಹಾಕುವಲ್ಲಿ ವೀಡಿಯೊಗಳು, ಪ್ರದರ್ಶನಗಳು ಮತ್ತು ಇತರ ಪ್ರಚಾರ ಪ್ರಯತ್ನಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಸಚಿವ ಪಾಟೀಲ್ ಹೇಳಿದರು. “ನಮ್ಮ ಪರಂಪರೆ, ಇತಿಹಾಸ ಮತ್ತು ದೃಶ್ಯ ಶ್ರೀಮಂತಿಕೆಗೆ ಸಾಟಿಯಿಲ್ಲ, ಮತ್ತು ಪ್ರದರ್ಶನಗಳು ಮತ್ತು ತೆರೆದ ವಸ್ತುಸಂಗ್ರಹಾಲಯಗಳ ಮೂಲಕ, ನಾವು ಅನೇಕ ತಾಣಗಳಿಗೆ ಭೇಟಿ ನೀಡುವವರನ್ನು ಆಕರ್ಷಿಸುವ ಕುತೂಹಲವನ್ನು ಸೃಷ್ಟಿಸುತ್ತೇವೆ” ಎಂದು ಅವರು ಹೇಳಿದರು.
“ಪಶ್ಚಿಮ ಏಷ್ಯಾ ಸಂಘರ್ಷವು ಕೆಲವರ ಅಂತರರಾಷ್ಟ್ರೀಯ ಪ್ರಯಾಣವನ್ನು ತಾತ್ಕಾಲಿಕವಾಗಿ ಅಡ್ಡಿಪಡಿಸಿದ್ದರೂ, ಕರ್ನಾಟಕವು ಇದರಿಂದ ಸಿಲುಕಿ ಹಾಕಿಕೊಂಡಿರುವ ಪ್ರವಾಸಿಗರ ಆತಿಥ್ಯ ವಹಿಸಲು, ಪರಂಪರೆ ಮತ್ತು ಸ್ಥಾಪಿತ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ದೇಶೀಯ ಪ್ರವಾಸೋದ್ಯಮವನ್ನು ಬಲಪಡಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ. ಇವೆಲ್ಲವೂ ರಾಜ್ಯಕ್ಕೆ ದೀರ್ಘಕಾಲೀನ ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರಯೋಜನಗಳನ್ನು ಸೃಷ್ಟಿಸುತ್ತದೆ” ಎಂದು ಅವರು ತಿಳಿಸಿದರು.

 ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಕಾರ್ಯದರ್ಶಿ ಡಾ. ತ್ರಿಲೋಕ್ ಚಂದ್ರ ಕೆ.ವಿ ಅವರು ಮಾತನಾಡಿ ಪ್ರಯಾಣ ಮತ್ತು ಪ್ರವಾಸೋದ್ಯಮ ಮೇಳ (ಟಿ ಟಿ ಎಫ್ )ದಲ್ಲಿ ದೇಶದ ಇತರ ರಾಜ್ಯಗಳು ಮತ್ತು ವಿದೇಶಿಗರು ಸೇರಿದಂತೆ 150 ಕ್ಕೂ ಹೆಚ್ಚು ಸಂಸ್ಥೆಗಳ ಪ್ರತಿನಿಧಿಗಳನ್ನು ಆಕರ್ಷಿಸಿದೆ. ಇದು ಕರ್ನಾಟಕದ ಪ್ರವಾಸೋದ್ಯಮ ಉತ್ಪನ್ನಗಳಿಗೆ ವ್ಯಾಪಕ ಪ್ರಚಾರ ನೀಡುತ್ತದೆ. “ಇದು ದೇಶೀಯ ಪ್ರವಾಸಿಗರ ಆಗಮನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುತ್ತದೆ” ಎಂದು ಅವರು ಹೇಳಿದರು.

ವಾರ್ಷಿಕವಾಗಿ ಸುಮಾರು 30 ಕೋಟಿ ಪ್ರವಾಸಿಗರ ಭೇಟಿಯೊಂದಿಗೆ ಕರ್ನಾಟಕವು ದೇಶೀಯ ಪ್ರವಾಸಿಗರ ಆಗಮನದಲ್ಲಿ ಮೂರನೇ ಸ್ಥಾನದಲ್ಲಿದೆ ಮತ್ತು ಬೆಂಗಳೂರು ಒಂದು ಗೇಟ್‌ವೇ ಆಗಿ ಕಾರ್ಯನಿರ್ವಹಿಸುತ್ತದೆ. “ಇದು ಪರಂಪರೆಯ ತಾಣಗಳು, ಹೋಟೆಲ್‌ಗಳು ಮತ್ತು ಆಕರ್ಷಣೆಗಳ ಮಾಹಿತಿಯನ್ನು ಪಡೆಯಲು ನೆರವಾಗುತ್ತದೆ. ಹಂಪಿ, ಬಿಜಾಪುರ, ಅಕ್ಕೋಡಿ, ಬೀದರ್, ಶ್ರೀರಂಗಪಟ್ಟಣ, ಮೈಸೂರು ಮತ್ತು ಹಳೇಬೀಡು ಮುಂತಾದ ತಾಣಗಳನ್ನು ಅನ್ವೇಷಿಸಲು ಪ್ರವಾಸಿಗರಿಗೆ ನೆರವಾಗುತ್ತದೆ,” ಎಂದು ಅವರು ತಿಳಿಸಿದರು.

ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಹತ್ವವನ್ನು ಅವರು ಒತ್ತಿ ಹೇಳಿದರು. “ಮೇಳದಲ್ಲಿನ 150 ಕ್ಕೂ ಅಧಿಕ ಮಳಿಗೆಗಳಲ್ಲಿ 95% ಮಳಿಗೆಗಳು ಖಾಸಗಿ ನಿರ್ವಾಹಕರದ್ದಾಗಿದೆ. “ಕರ್ನಾಟಕ ಪ್ರವಾಸೋದ್ಯಮ ಸಂಘವು ಪ್ರವಾಸೋದ್ಯಮವನ್ನು ಹೆಚ್ಚು ಪರಿಣಾಮಕಾರಿ ಮತ್ತು ಸಂದರ್ಶಕರಿಗೆ ಪ್ರಯೋಜನಕಾರಿಯಾಗಿ ಮಾಡಲು ಸಹಕರಿಸುತ್ತದೆ. ಪ್ರದರ್ಶನಗಳು ಈವಾಗೆ ಪ್ರವಾಸಿಗರು ಅನ್ವೇಷಿಸದ ತಾಣಗಳ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಒದಗಿಸುತ್ತವೆ ಮತ್ತು ಪ್ರವಾಸಿಗರ ಅರಿವನ್ನು ವಿಸ್ತರಿಸುತ್ತವೆ” ಎಂದು ಅವರು ಹೇಳಿದರು.

ವಾರ್ಷಿಕ “ಚಿನ್ನರ ದರ್ಶನ” ಕಾರ್ಯಕ್ರಮ ಸುಮಾರು 20,000 ಶಾಲಾ ಮಕ್ಕಳಿಗೆ ಕರ್ನಾಟಕದ ಪ್ರವಾಸಿ ತಾಣಗಳ ಬಗ್ಗೆ ಅರಿವು ಮೂಡಿಸುತ್ತದೆ ಎಂದು ಅವರು ವಿವರಿಸಿದರು. ಇದನ್ನೂ ಓದಿ: ಅಮೆರಿಕದ ಫೈಟರ್ ಜೆಟ್‌ಗಳಿಗೆ ಇಂಧನ ಪೂರೈಸುವ ವಿಮಾನ ಪತನ – ನಾಲ್ವರು ಸಾವು, ಇಬ್ಬರಿಗೆ ಗಾಯ

TAGGED:bengalurudonald trumphk PatilUS Iran WarWest Asia Conflict
Share This Article
Facebook Whatsapp Whatsapp Telegram

Cinema news

high court ranveer singh
ದೈವಕ್ಕೆ ಅಪಮಾನ ಆರೋಪ – ಮತ್ತೊಮ್ಮೆ ಅಫಿಡವಿಟ್ ಸಲ್ಲಿಸಲು ರಣವೀರ್ ಸಿಂಗ್‌ಗೆ ಹೈಕೋರ್ಟ್ ಸೂಚನೆ
Cinema Court Latest Top Stories
Thalapathy Vijay
Kill Piracy | ʻಜನನಾಯಗನ್ʼ ರಿಲೀಸ್‌ಗೂ ಮುನ್ನವೇ HD ವಿಡಿಯೋ ಲೀಕ್‌ – ಹಿಂದಿದ್ಯಾ ದೊಡ್ಡ ಸಂಚು?
Cinema Latest Main Post South cinema
Monalisa
ಕುಂಭಮೇಳದ ಮೊನಾಲಿಸಾ ಮದುವೆಗೆ ಟ್ವಿಸ್ಟ್‌ – ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್
Cinema Latest Main Post National
rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema

You Might Also Like

Artemis 2 Crew
Latest

5 ದಶಕಗಳ ಬಳಿಕ ಚಂದ್ರಯಾನ ಕೈಗೊಂಡಿದ್ದ ಆರ್ಟೆಮಿಸ್-2 ತಂಡ ಶನಿವಾರ ಭೂಮಿಗೆ

Public TV
By Public TV
34 minutes ago
andhra girl death
Latest

ಜಲಪಾತದ ಬಳಿ ರೀಲ್ಸ್ ಮಾಡಲು ಹೋಗಿ ಮೂವರು ಸಾವು – ಕ್ಯಾಮೆರಾ ಮುಂದೆಯೇ ಪ್ರಾಣಬಿಟ್ಟ ಯುವತಿಯರು

Public TV
By Public TV
36 minutes ago
kea
Bengaluru City

CET-2026ರ ಪ್ರವೇಶ ಪತ್ರ ಬಿಡುಗಡೆ: ಕೆಇಎ

Public TV
By Public TV
1 hour ago
OMR EXAM
Bengaluru City

ಪರೀಕ್ಷೆ ಮುಗಿದ ಒಂದು ಗಂಟೆಯಲ್ಲೇ OMR ಶೀಟ್ ವೆಬ್‌ಸೈಟ್‌ಗೆ ಅಪ್‌ಲೋಡ್: ಕೆಇಎ

Public TV
By Public TV
1 hour ago
Ramesh Kumar
Districts

63 ಎಕ್ರೆ ಅರಣ್ಯ ಭೂಮಿ ಒತ್ತುವರಿ ಪ್ರಕರಣ – ಮಾಜಿ ಸ್ಪೀಕರ್ ರಮೇಶ್ ಕುಮಾರ್‌ಗೆ ಹಿನ್ನಡೆ

Public TV
By Public TV
2 hours ago
CRIME
Districts

ಸರ್ಕಾರಿ ಕಚೇರಿಯಲ್ಲಿ ದಲಿತ ಮಹಿಳೆಯ ವಿವಸ್ತ್ರಗೊಳಿಸಿ ವಿಕೃತಿ – 8 ಗಂಟೆ ನಿಲ್ಲಿಸಿದ್ದ ಅಧಿಕಾರಿಗಳ ವಿರುದ್ಧ ದೂರು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?