ಮಂಗಳೂರಲ್ಲಿ ಕೊರೊನಾಗೆ 67 ವರ್ಷದ ವೃದ್ಧೆ ಸಾವು

Public TV
1 Min Read
Wenlock Hospital 780x405 1

-ರಾಜ್ಯದಲ್ಲಿ ಸಾವನ್ನಪ್ಪಿದವ್ರ ಸಂಖ್ಯೆ 22ಕ್ಕೆ ಏರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ತಗುಲಿದ್ದ 67 ವರ್ಷದ ವೃದ್ಧೆ ಇಂದು ಸಾವನ್ನಪ್ಪಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದದ ಕಸಬಾ ನಿವಾಸಿ ಸಾವನ್ನಪ್ಪಿದ ಮಹಿಳೆ. ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇದು ಮೂರನೇ ಸಾವು ಆಗಿದ್ದು, ಮಂಗಳೂರಿನ ಜನತೆ ಆತಂಕಕ್ಕೊಳಗಾಗಿದ್ದಾರೆ. ವೃದ್ಧೆಯ ಸಾವನ್ನು ವೆನ್‍ಲಾಕ್ ಆಸ್ಪತ್ರೆ ದೃಢಪಡಿಸಿದೆ.

f00a09ee de5d 4668 9160 a6c4f30bc822

ವೃದ್ಧೆ (ರೋಗಿ ಸಂಖ್ಯೆ-409) ನಾಲ್ಕು ದಿನಗಳಿಂದ ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಬಳಲುತತಿದ್ದರು. ಮೊದಲು ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ದಿನಾಂಕ 18-04-2020ರಂದು ವೆನ್‍ಲಾಕ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ದಿನಾಂಕ 20-04-2020ರಂದು ವೃದ್ಧೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿತ್ತು. ಐಸಿಯುನಲ್ಲಿ ವೆಂಟಿಲೇಟರ್ ಅಳವಡಿಸಿ ವೃದ್ಧೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಂಜೆ 5.40 ನಿಮಿಷಕ್ಕೆ ವೃದ್ಧೆ ನಿಧನ ಹೊಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *