– ರೈತರ ಪ್ರತಿಭಟನೆಯ ವೇಳೆ ಕೇಂದ್ರ ಸರ್ಕಾರದಿಂದ ಒತ್ತಡ
ವಾಷಿಂಗ್ಟನ್/ ನವದೆಹಲಿ: ರೈತರ ಪ್ರತಿಭಟನೆಯ (Farmers Protest) ವೇಳೆ ನಮಗೆ ನೀವು ಸಹಕಾರ ನೀಡದೇ ಇದ್ದರೆ ಟ್ವಿಟ್ಟರ್ ಕಂಪನಿಯನ್ನು (Twitter Company) ಮುಚ್ಚಿಸುತ್ತೇವೆ ಎಂದು ಭಾರತ ಸರ್ಕಾರ (Indian Government) ಬೆದರಿಕೆ ಹಾಕಿತ್ತು ಎಂದು ಟ್ವಿಟ್ಟರ್ ಕಂಪನಿಯ ಮಾಜಿ ಸಿಇಒ ಜಾಕ್ ಡಾರ್ಸಿ (Jack Dorsey) ಗಂಭೀರ ಆರೋಪ ಮಾಡಿದ್ದಾರೆ.
Advertisement
ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರೈತರ ಪ್ರತಿಭಟನೆಗಳ ಪರ ಮತ್ತು ಮತ್ತು ಸರ್ಕಾರವನ್ನು ಟೀಕಿಸುವ ಖಾತೆಗಳನ್ನು ನಿರ್ಬಂಧಿಸಲು ಕಂಪನಿ ಭಾರತದಿಂದ ಹಲವು ವಿನಂತಿಗಳನ್ನು ಸ್ವೀಕರಿಸಿತ್ತು ಎಂದು ಹೇಳಿದರು. ಇದನ್ನೂ ಓದಿ: Cyclone Biparjoy – ಬೀಸಲಿದೆ 150 ಕಿ.ಮೀ ವೇಗದಲ್ಲಿ ಬಿರುಗಾಳಿ, ಈಗಾಗಲೇ 7,500 ಮಂದಿ ಸ್ಥಳಾಂತರ
Advertisement
Advertisement
Advertisement
ಸಂದರ್ಶನದ ಸಮಯದಲ್ಲಿ ವಿದೇಶಿ ಸರ್ಕಾರಗಳಿಂದ ಯಾವುದೇ ಒತ್ತಡವನ್ನು ಎದುರಿಸಿದ್ದೀರಾ ಎಂಬ ಪ್ರಶ್ನೆಗೆ ಭಾರತದಲ್ಲಿ ನಡೆದ ರೈತರ ಪ್ರತಿಭಟನೆ ವಿಚಾರವನ್ನು ಉಲ್ಲೇಖಿಸಿ ಮೋದಿ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಡಾರ್ಸಿ ಮಾಡಿದರು.
Mother of Democracy – Unfiltered
"During farmer protest, Modi govt pressurized us and said we will shut down your offices, raid your employees' homes, which they did if you don’t follow suit."
– Jack Dorsey, former Twitter CEO pic.twitter.com/tOyCfyDWcz
— Srinivas BV (@srinivasiyc) June 12, 2023
ರೈತರ ಹೋರಾಟದ ಸಮಯದಲ್ಲಿ ಸರ್ಕಾರ ವಿರುದ್ಧ ಟೀಕಿಸುತ್ತಿದ್ದ ಪತ್ರಕರ್ತರ ಖಾತೆಗಳ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ವಿನಂತಿ ಬಂದಿತ್ತು. ಒಂದು ವೇಳೆ ಕ್ರಮ ತೆಗೆದುಕೊಳ್ಳದೇ ಇದ್ದರೆ ನಿಮ್ಮ ಉದ್ಯೋಗಿಗಳ ಮನೆಗಳ ಮೇಲೆ ನಾವು ದಾಳಿ ಮಾಡುತ್ತೇವೆ. ನಮ್ಮ ಆದೇಶಗಳನ್ನು ಪಾಲನೆ ಮಾಡದೇ ಇದ್ದರೆ ಮ್ಮ ಕಚೇರಿಗಳನ್ನು ಮುಚ್ಚುತ್ತೇವೆ ಎಂದು ಎಚ್ಚರಿಕೆ ನೀಡಲಾಗಿತ್ತು ಎಂದು ಅವರು ಹೇಳಿದರು.
ಸಂದರ್ಶನದಲ್ಲಿ ಟರ್ಕಿ ಸರ್ಕಾರದಿಂದಲೂ ಹಲವು ಒತ್ತಡಗಳು ಬಂದಿತ್ತು ಎಂದು ಡಾರ್ಸಿ ತಿಳಿಸಿದರು.
ಡಾರ್ಸಿ ಅವರ ಹೇಳಿಕೆ ಈಗ ವಿಪಕ್ಷಗಳಿಗೆ ಆಹಾರವಾಗಿದ್ದು ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಲು ಆರಂಭಿಸಿವೆ. ಡಾರ್ಸಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ಟ್ವಿಟರ್‌ನಲ್ಲಿ ಹಂಚಿಕೊಂಡು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.