ಹಾಸನ: ದಶಕದ ಸಂಭ್ರಮದಲ್ಲಿರುವ ಪಬ್ಲಿಕ್ ಟಿವಿಯ ಸಾಧನೆಯ ಸಂದೇಶ ಸಾರುತ್ತಿರುವ ಪಬ್ಲಿಕ್ ರಥ ಇಂದು ಎರಡನೇ ದಿನ ಹಾಸನ ಜಿಲ್ಲೆಯ ಹಲವೆಡೆ ಸಂಚಾರ ನಡೆಸಿದೆ. ಹಾಸನಕ್ಕೆ ಆಗಮಿಸಿದ ಪಬ್ಲಿಕ್ ರಥಕ್ಕೆ ಜಿಲ್ಲೆಯ ಜನ ಪ್ರೀತಿಯಿಂದ ಸ್ವಾಗತ ಕೋರಿದ್ದಾರೆ.
Advertisement
ಹನುಂಮತಪುರ ಗ್ರಾಮದ ಪಂಚಮುಖಿ ದೇವಾಲಯದ ಬಳಿ, ಪಬ್ಲಿಕ್ ರಥಕ್ಕೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಗ್ರಾಮಸ್ಥರೇ ಸಿಹಿ ಹಂಚಿ ಪಬ್ಲಿಕ್ ಟಿವಿಯ ದಶಮಾನೋತ್ಸವನ್ನು ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಗ್ರಾಮಸ್ಥರು, ಪಬ್ಲಿಕ್ ಟಿವಿಯು ದಶಕಗಳಿಂದ ಕನ್ನಡ ನಾಡಿನ ಜನರ ಮನೆಮಾತಾಗಿದೆ ಎಂದರು. ಇದನ್ನೂ ಓದಿ: ಮುಸ್ಲಿಂ ಗೂಂಡಾಗಳಿಂದ ಕೊಲೆ – ಈಶ್ವರಪ್ಪ ಹೇಳಿಕೆಗೆ ಸತೀಶ್ ಜಾರಕಿಹೊಳಿ ಕಿಡಿ
Advertisement
Advertisement
ಜನರ ಕಷ್ಟಕ್ಕೆ ಸ್ಪಂದಿಸಿ ನ್ಯಾಯಕೊಡಿಸುವ ಕೆಲಸ ಮಾಡುತ್ತಿದೆ ಅಂತ ಶುಭ ಹಾರೈಸಿದರು. ಹನುಂಮತಪುರದಿಂದ ಪಬ್ಲಿಕ್ ರಥ ನೇರವಾಗಿ ಬೇಲೂರಿಗೆ ಆಗಮಿಸಿತು. ಬೇಲೂರಿನಲ್ಲಿ ಪಬ್ಲಿಕ್ ರಥವನ್ನು ಸ್ವಾಗತಿಸಿದ ಕರವೇ ಕಾರ್ಯಕರ್ತರು, ಸಿಹಿ ಹಂಚಿ ಸಂಭ್ರಮಿಸಿದರು. ಪಬ್ಲಿಕ್ ಟಿವಿಗೆ ಜೈಕಾರ ಹಾಕಿ, ನೂರಾರು ವರ್ಷ ಪಬ್ಲಿಕ್ ಟಿವಿ ಜನತೆಯ ಧ್ವನಿಯಾಗಿ ನಿಲ್ಲಲಿ ಎಂದು ಶುಭ ಹಾರೈಸಿದರು.