Welcome, buddy.. ಚಂದ್ರಯಾನ-3ಗೆ ಸ್ವಾಗತ ಕೋರಿದ ಚಂದ್ರಯಾನ-2 ಆರ್ಬಿಟರ್‌; ಇಸ್ರೋಗೆ ಇನ್ನಷ್ಟು ತಾಂತ್ರಿಕ ಬಲ

Public TV
3 Min Read
Chandrayaan

ಬೆಂಗಳೂರು: ಚಂದ್ರಯಾನ-3 (Chandrayaan-3) ಸಕ್ಸಸ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವೆ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಚಂದ್ರಯಾನ-3 ರಲ್ಲಿ ಕಳುಹಿಸಿರುವ ವಿಕ್ರಮ್‌ ಲ್ಯಾಂಡರ್, ಚಂದ್ರಯಾನ-2 ನಲ್ಲಿ ಕಳುಹಿಸಿದ್ದ ಆರ್ಬಿಟರ್ (Ch-2 orbiter) ಸಂಪರ್ಕ ಸಾಧಿಸಿದೆ. ಚಂದ್ರಯಾನ-2 ಆರ್ಬಿಟರ್‌ನೊಂದಿಗೆ ಸಂಪರ್ಕ ಸಾಧಿಸಿರುವ ಮಾಹಿತಿಯನ್ನು ಇಸ್ರೋ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

2019ರಲ್ಲಿ ಇಸ್ರೋ (ISRO) ಚಂದ್ರಯಾನ-2 ಯೋಜನೆ ಆರಂಭಿಸಿದಾಗ ಅದರ ಆರ್ಬಿಟರ್‌ ಅನ್ನು ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಲಾಗಿತ್ತು. ಆದರೆ, ಇದರ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯಲು ವಿಫಲವಾಗಿದ್ದರಿಂದ ಸಂವಹನ ಕಡಿತಗೊಂಡಿತ್ತು. ಕಳೆದ 5 ವರ್ಷಗಳಿಂದ ಏಕಾಂಗಿಯಾಗಿ ಚಂದ್ರನ ಕಕ್ಷೆ ಸುತ್ತುತ್ತಿದ್ದ ಈ ಆರ್ಬಿಟರ್ ವಿಕ್ರಮ್‌ ಲ್ಯಾಂಡರ್‌ನ (Vikram Lander) ಸಂಪರ್ಕ ಸಿಕ್ಕಿದೆ. ಕಳೆದ ಬಾರಿ ಕಳುಹಿಸಿದ್ದ ಆರ್ಬಿಟರ್ ಸುಸ್ಥಿತಿಯಲ್ಲಿದ್ದ ಕಾರಣ ಈ ಬಾರಿ ಕೇವಲ ಲ್ಯಾಂಡರ್‌ ಮತ್ತು ರೋವರ್ ಅನ್ನು ಕಳುಹಿಸಿತ್ತು. ಈ ಎರಡರ ಸಂಪರ್ಕ ಇಸ್ರೋಗೆ ತಾಂತ್ರಿಕ ಬಲ ಸಿಕ್ಕಾಂತಾಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ಇಸ್ರೋ ಚಂದ್ರಯಾನ-3 ನೌಕೆಯ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಈ ಪ್ರಕ್ರಿಯೆ ಯಶಸ್ವಿಯಾದರೆ ಚಂದ್ರನ ಮೇಲೆ ಲ್ಯಾಂಡರ್‌ ಇಳಿಸಿದ ಜಗತ್ತಿನ 4ನೇ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಇದನ್ನೂ ಓದಿ: ವೀಸಾ ಅವಧಿ ಮುಗಿದರೂ ಗುಜರಾತ್‌ನಲ್ಲಿ ಅಕ್ರಮ ನೆಲೆ – 45 ಪಾಕಿಸ್ತಾನಿ ಹಿಂದೂಗಳ ಬಂಧನ

ಚಂದ್ರ ಚುಂಬನಕ್ಕೆ‌ ಕ್ಷಣಗಣನೆ: ಇನ್ನೂ ತೀವ್ರ ಕುತೂಹಲ ಮೂಡಿಸಿರುವ ಚಂದ್ರಯಾನ-3ರ ವಿಕ್ರಮ್‌ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುವುದನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಇದಕ್ಕೂ ಮೊದಲೇ ಚಂದ್ರಯಾನ-3 ಗಗನನೌಕೆಯು ಚಂದ್ರನ ಸನಿಹದಿಂದ ಫೋಟೋಗಳನ್ನು ಕ್ಲಿಕ್ಕಿಸಿ ಇಸ್ರೋಗೆ ಕಳಿಹಿಸಿಕೊಟ್ಟಿದೆ. ಈ ಫೋಟೋಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ. ಈ ಫೋಟೋದಲ್ಲಿ ಭೂಮಿಗೆ ಕಾಣಿಸದ ಚಂದ್ರನ ಮತ್ತೊಂದು ಮುಖ ಕಾಣಿಸಿದೆ. ಚಂದ್ರನ ಮಗ್ಗುಲಿನಲ್ಲಿ ಸಾಕಷ್ಟು ಕುಳಿಗಳು ಇರುವುದು ಫೋಟೋದಲ್ಲಿ ಕಂಡು ಬಂದಿದೆ.

ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಆಂಡ್‌ ಅವಾಯಿಡೆನ್ಸ್ ಕ್ಯಾಮೆರಾ ಮೂಲಕ ಈ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಆಂಡ್‌ ಅವಾಯಿಡೆನ್ಸ್ ಕ್ಯಾಮೆರಾ ಸುರಕ್ಷಿತ ಲ್ಯಾಂಡಿಂಗ್ ಪ್ರದೇಶವನ್ನ ಪತ್ತೆಹಚ್ಚಲು ನೆರವಾಗಲಿದೆ. ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದ ಸ್ಥಳದಲ್ಲಿ ಇಳಿಯಲು ಇದು ನೆರವಾಗಲಿದೆ. ಇದನ್ನೂ ಓದಿ: ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇಯಲ್ಲಿ ಕಂಟೈನರ್ ಪಲ್ಟಿ; ಇಬ್ಬರು ಸಾವು, ನಾಲ್ವರಿಗೆ ಗಾಯ

 

ವಿಕ್ರಮ್ ಸೆರೆ ಹಿಡಿದ ಫೋಟೋಗಳಲ್ಲಿ ಹೈನ್‌, ಬಾಸ್‌ ಎಲ್‌, ಮಾರ್‌ ಹಬ್ಲೊಲ್ಡಿಟಿನಿಯಮ್‌ ಮತ್ತು ಬೆಲ್‌ಕೊವಿಚ್‌ ಎಂಬ ಕುಳಿಗಳನ್ನ ಗುರುತಿಸಲಾಗಿದೆ. ಭೂಮಿಗೆ ಕಾಣಿಸದ ಚಂದ್ರನ ಭಾಗವು ಗೋಳಾರ್ಧವಾಗಿದೆ. ಚಂದ್ರನ ಕಕ್ಷೆಯಲ್ಲಿ ಸಿಂಕ್ರೊನಸ್‌ ಆಗಿ ತಿರುಗುವಿಕೆಯಿಂದಾಗಿ ಈ ಭಾಗ ಭೂಮಿಗೆ ಕಾಣಿಸುವುದೇ ಇಲ್ಲ. ಇದೀಗ ಇಸ್ರೋದ ಕ್ಯಾಮೆರಾವು ಆ ಭಾಗದ ಚಿತ್ರಗಳನ್ನು ತೆಗೆದಿದೆ.‌

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article