ಬೆಂಗಳೂರು: ಕ್ಷಣ ಕಳೆಯುವಷ್ಟರಲ್ಲಿ 2025ರ ಹೊಸ ವರ್ಷ ಬಂದೇ ಬಿಟ್ಟಿದೆ. ಅದರಲ್ಲೂ ಬೆಂಗಳೂರಿನ ಜನ ಅದ್ಧೂರಿಯಾಗಿ ಹೊಸ ವರ್ಷವನ್ನ ವೆಲ್‌ಕಮ್ ಮಾಡಿಕೊಂಡಿದ್ದಾರೆ. ಕೋರಮಂಗಲದ ಸ್ಟ್ರೀಟ್‌ನಲ್ಲಿ ಸಂಭ್ರಮಾಚರಣೆ ಜೋಶ್‌ನಲ್ಲಿ ಯುವಕನೊಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ.
ಯುವಕನ ವರ್ತನೆಯಿಂದ ರೊಚ್ಚಿಗೆದ್ದ ಮಹಿಳೆ ಕಪಾಳಕ್ಕೆ ಬಾರಿಸಿದ್ದಾರೆ, ಅಲ್ಲದೇ ಯುವಕನನ್ನ ಹಿಡಿದು ದಬ್ಬಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಯುವಕ ಜಾಗ ಖಾಲಿ ಮಾಡಿದ್ದಾನೆ.
Advertisement
Advertisement
ಹೊಸ ವರ್ಷಕ್ಕೆ (New Year) ಭಾರತ ಕಾಲಿಟ್ಟಿದ್ದು, ಕರ್ನಾಟಕ ಜನತೆ 2025ನ್ನು ಕುಣಿದು ಕುಪ್ಪಳಿಸಿ ಚಿಯರ್ಸ್ ಹೇಳಿ ಸ್ವಾಗತಿಸಿದ್ದಾರೆ. ಬೆಂಗಳೂರಿನಲ್ಲೂ ಯುವಕ, ಯುವತಿಯರು ರಸ್ತೆಗಳಲ್ಲಿ ಕುಣಿದು ಕುಪ್ಪಳಿಸಿದರು. ಪರಸ್ಪರ ಹೊಸ ವರ್ಷದ ಶುಭಾಶಯ ಕೋರಿದರು. ಹೊಸ ವರ್ಷದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಕೇಂದ್ರಗಳಾದ ಬೆಂಗಳೂರಿನ (Bengaluru) ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಇಂದಿರಾ ನಗರ, ಕೋರಮಂಗಲ ವರ್ಣರಂಜಿತವಾಗಿ ಮಿರಿ ಮಿರಿ ಮಿಂಚುತ್ತಿದ್ದವು.
Advertisement
ಮೊಬೈಲ್‌ಗಳಂತೂ (Mobile) ಫುಲ್ ಬ್ಯೂಸಿಯಾಗಿದ್ದವು. ತಮ್ಮ ಆತ್ಮೀಯರಿಗೆ, ಸ್ನೇಹಿತರಿಗೆ, ಹಿರಿಯರಿಗೆ, ಕಿರಿಯರಿಗೆ ಹೊಸ ವರ್ಷದ ಶುಭಾಶಯದ ಸಂದೇಶಗಳನ್ನು ಕಳುಹಿಸುವುದರಲ್ಲಿ ಜನರು ತಲ್ಲಿನರಾಗಿದ್ದರು. ಪರಿಣಾಮ ಹಲವು ಸ್ಥಳಗಳಲ್ಲಿ ನೆಟ್‌ವರ್ಕ್ ಜಾಮ್ ಆಗಿತ್ತು. ನೆಟ್‌ವರ್ಕ್ ಒತ್ತಡದಿಂದ ಮೆಸೇಜ್ ತಡವಾಗಿ ತಲುಪುತ್ತಿದ್ದವು.